ETV Bharat / state

ದೇವರಾಜ ಅರಸು ಅವರ ಚಿಂತನೆಗಳು ಸಾರ್ವಕಾಲಿಕ: ಆಯನೂರು ಮಂಜುನಾಥ್

ಜಿಲ್ಲಾಡಳಿತ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವರಾಜ ಅರಸ್ ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

author img

By

Published : Aug 20, 2020, 10:39 PM IST

Devraj Aras birthday
Devraj Aras birthday

ಶಿವಮೊಗ್ಗ: ರಾಜಮನೆತನದಲ್ಲಿ ಜನಿಸಿದರೂ ಸಾಮಾನ್ಯರಂತೆ ಬದುಕಿ ಅಸಾಮಾನ್ಯರೆನಿಸಿದ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ ದಿ. ದೇವರಾಜ ಅರಸ್ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ್ ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇವರಾಜ ಅರಸ್ ಅವರ ದೂರದೃಷ್ಟಿ, ಕೈಗೊಂಡ ನಿರ್ಧಾರಗಳು ಸಾಮಾಜಿಕ ವ್ಯವಸ್ಥೆಯ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾದವು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು, ಕಾಗೋಡು ತಿಮ್ಮಪ್ಪನವರು ಸೇರಿದಂತೆ ಅನೇಕರು ಅರಸ್ ಅವರನ್ನು ಅನುಸರಿಸಿದವರಾಗಿದ್ದಾರೆ ಎಂದರು.

ರಾಜ್ಯದ ಮುಖ್ಯಮಂತ್ರಿಗಳಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಬಹುದಾದ ಅರಸ್ ಅವರ ಸಾಮಾಜಿಕ ಕಾಳಜಿ, ಎಲ್ಲಾ ಜಾತಿ ಜನಾಂಗಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಅವರ ಮನಸ್ಥಿತಿ, ಅವರ ಆಡಳಿತಾವಧಿಯಲ್ಲಾದ ಸುಧಾರಣೆ, ಕಂದಾಯ ಇಲಾಖೆಯಲ್ಲಿನ ಸುಧಾರಣೆಗಳು, ಬಡವರ ಉನ್ನತಿಗಾಗಿ ಅನುಷ್ಠಾನಗೊಳಿಸಿದ ಯೋಜನೆಗಳು, ಜೀತಮುಕ್ತಿ, ಉಳುವವನೇ ಹೊಲದೊಡೆಯ ಮುಂತಾದ ಯೋಜನೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ ಎಂದು ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.