ETV Bharat / state

ದೇವಾಂಗರನ್ನ ಎಸ್​​​​ಸಿ ಸೇರ್ಪಡೆಗೆ ಆಗ್ರಹಿಸಿ ಉರುಳು ಸೇವೆ - ದೇವಾಂಗ ಸಮಾಜವನ್ನು ಎಸ್ಸಿ ಸೇರ್ಪಡೆಗೆ ಆಗ್ರಹ

ದೇವಾಂಗ ಸಮಾಜವನ್ನು ಎಸ್ಸಿ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಶಿವಮೊಗ್ಗದ ಶಿವಮೂರ್ತಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ದೇವಾಂಗ ಸಮಾಜದವರು ಉರುಳುಸೇವೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

Protest
ದೇವಾಂಗ ಸಮಾಜದವರ ಪ್ರತಿಭಟನೆ
author img

By

Published : Mar 10, 2021, 1:33 PM IST

ಶಿವಮೊಗ್ಗ: ದೇವಾಂಗ ಸಮಾಜವನ್ನು ಎಸ್ಸಿ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ, ಶಿವಮೊಗ್ಗದಲ್ಲಿ ದೇವಾಂಗ ಎಸ್ಸಿ ಮೀಸಲಾತಿ ಹೋರಾಟ ಸಮಿತಿ ಉರುಳು ಸೇವೆ ನಡೆಸಿ ಹೋರಾಟ ನಡೆಸಿದೆ.

ಶಿವಮೊಗ್ಗದ ಶಿವಮೂರ್ತಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ದೇವಾಂಗ ಸಮಾಜದವರು ಉರುಳು ಸೇವೆ ನಡೆಸಿ, ಸರ್ಕಾರದ ಗಮನ ಸೆಳೆಯುವ ಯತ್ನ ಮಾಡಿದರು.

ದೇವಾಂಗ ಸಮಾಜದವರ ಪ್ರತಿಭಟನೆ

ದೇವಾಂಗ ಸಮಾಜದವರು ರಾಜ್ಯದಲ್ಲಿ 40 ಲಕ್ಷದಷ್ಟಿದ್ದಾರೆ. ಈ ಸಮುದಾಯ ಸದ್ಯ 2ಎ ನಲ್ಲಿದೆ ಇದರಿಂದಾಗಿ ಸಮಾಜಕ್ಕೆ ಯಾವುದೇ ಉಪಯೋಗವಾಗುತ್ತಿಲ್ಲ. ಸಮಾಜದವರಿಗೆ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಸೇರಿದಂತೆ ಎಲ್ಲ ವಲಯದಲ್ಲೂ ಸಹ ಯಾವುದೇ ಸಹಕಾರವಾಗುತ್ತಿಲ್ಲ. ಇದರಿಂದ ನಮಗೆ ಹಾಲಿ 2ಎ ನಿಂದ ಎಸ್ಸಿಗೆ ಸೇರ್ಪಡೆ ಮಾಡಬೇಕು. ಹಾಲಿ ಎಸ್ಸಿಯು ಶೇ 10 ರಷ್ಟು ಇರುವ ಮೀಸಲಾತಿಯನ್ನು ಶೇ 15 ಕ್ಕೆ ಏರಿಕೆ ಮಾಡಬೇಕಿದೆ ಎಂಬ ಬೇಡಿಕೆ ಇಟ್ಟಿದ್ದಾರೆ.

ರಾಜ್ಯದಲ್ಲಿ‌40 ಲಕ್ಷದಷ್ಟಿರುವ ಜನಸಂಖ್ಯೆಗೆ ರಾಜಕೀಯವಾಗಿ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ. ಇದರಿಂದ ಸದ್ಯ ಶಿವಮೊಗ್ಗ ಜಿಲ್ಲೆ ಸೇರಿದಂತೆ ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಜನತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ನಮ್ಮ ಬೇಡಿಕೆ ಈಡೇರದೇ ಹೋದರೆ, ಮುಂದಿನ ತಿಂಗಳ 28 ರಂದು ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ದೇವಾಂಗ ಸಮಾಜದ ಮುಖಂಡ ಈಸೂರು ಬಸವರಾಜ್ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.