ETV Bharat / state

ಜೀವ ಉಳಿಸಿಕೊಳ್ಳಲು ಓಡಿಬಂದು ವ್ಯಕ್ತಿ ಎದೆಗೆ ಕೊಂಬಿನಲ್ಲಿ ಇರಿದ ಜಿಂಕೆ - sagara shivamogga latest news

ನೀರಡಿಕೆಯಿಂದ ಊರಿನೊಳಗೆ ಓಡಿಬಂದ ಜಿಂಕೆಯೊಂದ ನಾಯಿಗಳು ಅಟ್ಟಿಸಿಕೊಂಡು ಬಂದ ಕಾರಣ ಭಯದಲ್ಲಿ ಓಡಿಬಂದು ವ್ಯಕ್ತಿಯೊಬ್ಬನ ಎದೆಗೆ ಇರಿದಿದ್ದು, ಗಂಭೀರವಾಗಿ ಗಾಯಗೊಳಿಸಿದೆ.

Deer attack on a man in Shivamogga
ಜೀವ ಉಳಿಸಿಕೊಳ್ಳಲು ಓಡಿದ ಜಿಂಕೆಯಿಂದ ವ್ಯಕ್ತಿಯೋರ್ವನಿಗೆ ಕುತ್ತಾಯಿತೇ?
author img

By

Published : Mar 20, 2020, 9:31 AM IST

ಶಿವಮೊಗ್ಗ: ಜಿಂಕೆಯೊಂದು ಪ್ರಾಣರಕ್ಷಣೆಗೆಂದು ಓಡುವ ವೇಳೆ ವ್ಯಕ್ತಿಯೊಬ್ಬನ ಮೈಮೇಲೆ ಹಾರಿದ್ದು, ಆತನ ಎದೆಗೆ ತನ್ನ ಕೊಂಬಿನಿಂದ ಚುಚ್ಚಿ ಗಾಯಗೊಳಿಸಿದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಬಳಿಯ ನಡುವಳ್ಳಿ ಗ್ರಾಮದಲ್ಲಿ ನಡೆದಿದೆ.

ಜೀವ ಉಳಿಸಿಕೊಳ್ಳಲು ಓಡಿದ ಜಿಂಕೆಯಿಂದ ವ್ಯಕ್ತಿಯೋರ್ವನಿಗೆ ಕುತ್ತಾಯಿತೇ?

ಇಂದು ಬೆಳಗ್ಗೆ ಗ್ರಾಮಸ್ಥ ಮಂಜುನಾಥ್(45) ತನ್ನ ಮನೆ ಹಿಂಭಾಗದ ಬಚ್ಚಲು ಮನೆಯಲ್ಲಿ ಕೈ-ಕಾಲು ಮುಖ ತೊಳೆಯುವಾಗ ಏಕಾಏಕಿ ನುಗ್ಗಿ ಬಂದ ಜಿಂಕೆ ಆತನ ಮೈ ಮೇಲೆ ಬಿದ್ದು, ಆತನ ಎದೆಗೆ ಚುಚ್ಚಿ ಗಾಯ ಮಾಡಿದೆ. ರಾತ್ರಿ ಜಿಂಕೆ ನೀರಿಗಾಗಿ ನಡವಳ್ಳಿ ಗ್ರಾಮದ ಬಳಿ ಬಂದಿದ್ದು, ಈ ವೇಳೆ ನಾಯಿಗಳು ಜಿಂಕೆಯನ್ನು ಓಡಿಸಿ ಕೊಂಡು ಬಂದಿವೆ. ಜಿಂಕೆ ಜೀವ ಭಯದಿಂದ ಜೋರಾಗಿ ಓಡುತ್ತಾ ಮಂಜುನಾಥ್ ಮೈ ಮೇಲೆ ಹೋಗಿದೆ.

ಪರಿಣಾಮ ಮಂಜುನಾಥ್​ನ ಎದೆಯ ಮೇಲ್ಭಾಗದಲ್ಲಿ ಚಾಕುವಿನಿಂದ ಇರಿದತಂತೆ ಗಾಯವಾಗಿದೆ. ತಕ್ಷಣ ಮಂಜುನಾಥ್​ರನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಜೀವ ಉಳಿಸಿಕೊಳ್ಳಲು ಓಡಿದ ಜಿಂಕೆ ಈಗ ಮಂಜುನಾಥ್​ನ ಜೀವಕ್ಕೆ ಕುತ್ತು ತಂದಿದೆ. ಅರಣ್ಯ ಇಲಾಖೆಯವರು ಆಗಮಿಸಿ, ಪರಿಹಾರ ನೀಡಬೇಕು ಎಂದು ಗ್ರಾಮಸ್ಥ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.