ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಶವಾಗಾರದಲ್ಲಿ ಕೊರೊನಾದಿಂದ ಮೃತಪಟ್ಟವರ ಶವಗಳನ್ನು ಸುಡಲು ನೀಯೋಜಿಸಲಾಗಿದ್ದ ಪಾಪಾನಾಯಕ್ ಎಂಬುವರು ಕೊರೊನ ಸೋಕಿನಿಂದ ಮೃತಪಟ್ಟಿದ್ದಾರೆ.
ಹಾಗಾಗಿ ಸರ್ಕಾರ ಕೂಡಲೇ ಮೃತಪಟ್ಟ ಕೊರೊನ ವಾರಿಯರ್ಸ್ ಪಾಪಾನಾಯಕ್ ಕುಟುಂಬಕ್ಕೆ ನೇರವು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಮಹಾನಗರ ಪಾಲಿಕೆಯ ಚಿತಾಗಾರದಲ್ಲಿ ಕೊರೊನದಿಂದ ಸಾವನ್ನಪ್ಪಿದ ಶವಗಳನ್ನು ಸುಡಲು ಪಾಪಾನಾಯಕ್ ಅವರನ್ನು ಮಹಾನಗರ ಪಾಲಿಕೆ ನಿಯೋಜಿಸಲಾಗಿತ್ತು. ಆದರೆ ಪಾಪಾನಾಯಕ್ ಅವರೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಅವರ ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದ್ದು, ಸರ್ಕಾರ ಪಾಪಾನಾಯಕ್ ಅವರ ಕುಟುಂಬಕ್ಕೆ ಮೂವತ್ತು ಲಕ್ಷ ರೂಪಾಯಿ ನೆರವು ನೀಡುವ ಜೊತೆಗೆ ಅವರ ಧರ್ಮಪತ್ನಿ ಸವಿತಾ ಅವರಿಗೆ ಖಾಯಂ ಉದ್ಯೋಗವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.