ETV Bharat / state

ಶಿವಮೊಗ್ಗದಲ್ಲಿ ಓರ್ವ ಪುರುಷ, ಮಹಿಳೆಯ ಶವ ಪತ್ತೆ - ಶಿವಮೊಗ್ಗದಲ್ಲಿ ಆತ್ಮಹತ್ಯೆ

ಶಿವಮೊಗ್ಗದಲ್ಲಿ ಅಪರಿಚಿತ ಮಹಿಳೆ ಹಾಗು ಪುರುಷನ ಶವ ಪತ್ತೆಯಾಗಿದೆ.

ಪುರುಷ ಮತ್ತು ಮಹಿಳೆ ಶವ ಪತ್ತೆ
ಪುರುಷ ಮತ್ತು ಮಹಿಳೆ ಶವ ಪತ್ತೆ
author img

By ETV Bharat Karnataka Team

Published : Jan 11, 2024, 9:59 AM IST

ಶಿವಮೊಗ್ಗ: ನಗರದ ಹೊರವಲಯ ಮಲವಗೊಪ್ಪದ ಯಲವಟ್ಟಿ ತಿರುವಿನಲ್ಲಿ ಬುಧವಾರ ರಾತ್ರಿ 9ರ ಸುಮಾರಿಗೆ ಓರ್ವ ಮಹಿಳೆ ಮತ್ತು ಪುರುಷನ ಮೃತದೇಹ ದೊರೆತಿದೆ. ಮೃತದೇಹಗಳ ಪಕ್ಕದಲ್ಲಿ ವಿಷದ ಬಾಟಲಿ ಸಿಕ್ಕಿರುವುದರಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮೃತರು ಯಾರು, ಎಲ್ಲಿಂದ ಬಂದವರು, ಹೆಸರೇನು ಎಂಬುದು ತಿಳಿದು ಬಂದಿಲ್ಲ. ಇಬ್ಬರೂ ಅಂದಾಜು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. ಯಾವುದೇ ಗುರುತಿನ ದಾಖಲೆ ಪತ್ರಗಳು ಲಭ್ಯವಾಗಿಲ್ಲ.

ಗುರುತು ಪತ್ತೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: ಸೂಟ್​ಕೇಸ್​ನಲ್ಲಿ ಮಗುವಿನ ಶವದೊಂದಿಗೆ ಕಾರ್​ನಲ್ಲಿ ತೆರಳುತ್ತಿದ್ದ ತಾಯಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.