ETV Bharat / state

ಸುಬ್ಬಯ್ಯ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಡಿಸಿ ಶಿವಕುಮಾರ್ - Shivamogga DC Sivakumar

ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಬ್ಬಯ್ಯ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದರು.

DC Sivakumar visits Subbaiah Hospital
ಸುಬ್ಬಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ ಶಿವಕುಮಾರ್
author img

By

Published : Aug 29, 2020, 8:15 PM IST

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಇಂದು ಸಂಜೆ ಶಿವಮೊಗ್ಗ ಹೊರವಲಯದ ಸುಬ್ಬಯ್ಯ ಆಸ್ಪತ್ರೆಗೆ ಭೇಟಿ ನೀಡಿ ‌ಪರಿಶೀಲಿಸಿದರು. ಸುಬ್ಬಯ್ಯ ಆಸ್ಪತ್ರೆಯಲ್ಲಿ ಕೊರೊನಾ ವಾರ್ಡ್ ರಚನೆ ಮಾಡಿದ್ದು, ಇಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳು ಬಂದಿದ್ದವು.

DC Sivakumar visits Subbaiah Hospital
ಸುಬ್ಬಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ ಶಿವಕುಮಾರ್

ಕೋವಿಡ್ ವಾರ್ಡ್​ಗಳಿಗೆ ವೈದ್ಯರು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು. ಕೋವಿಡ್ ವಾರ್ಡ್​ನಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ರೋಗಿಗಳಿಗೆ ಸಂಬಂಧಿಕರ ಜೊತೆ ಮಾತನಾಡಲು ದೂರವಾಣಿ ಅಳವಡಿಸಬೇಕು, ಸರಿಯಾದ ಆಹಾರ ಪೂರೈಕೆ ಮಾಡಬೇಕು, ಸರಿಯಾಗಿ ಚಿಕಿತ್ಸಾ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.

ಇದಕ್ಕೂ ಮುನ್ನ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಅವರು ಭೇಟಿ ನೀಡಿದರು. ಇಲ್ಲಿ ಕೋವಿಡ್ ಸೋಂಕಿತರಿಗೆ ಸಂಬಂಧಿಕರ ಜೊತೆ ಮಾತನಾಡಲು ಕಲ್ಪಿಸಿರುವ ದೂರವಾಣಿ ಸಂಪರ್ಕದ ಕುರಿತು ಮಾಹಿತಿ ಪಡೆದುಕೊಂಡರು.‌ ನಂತರ ನೂತನ ಆಕ್ಸಿಜನ್ ಯೂನಿಟ್​ಗೆ ಭೇಟಿ‌ ನೀಡಿ ಪರಿಶೀಲಿಸಿದರು.

ಈ ವೇಳೆ ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಸರ್ಜನ್ ಡಾ. ರಘುನಂದನ್ ಸೇರಿ‌ದಂತೆ ಇತರರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.