ETV Bharat / state

ಜಿಲ್ಲಾಧಿಕಾರಿ ಕಚೇರಿಯ ಎಫ್​ಡಿಎ ನಾಪತ್ತೆ: ದೂರು ದಾಖಲು - ಜಿಲ್ಲಾಧಿಕಾರಿ ಕಚೇರಿಯ ಎಫ್​ಡಿಎ ಅಧಿಕಾರಿ ನಾಪತ್ತೆ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಫ್​​ಡಿಎ ಆಗಿ ಕೆಲಸ ಮಾಡುತ್ತಿದ್ದ ಗಿರಿರಾಜ್​ ಎಂಬುವವರು ಮೇಲಧಿಕಾರಿಗಳ ಕಿರುಕುಳ ತಾಳಲಾರದೇ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Jayanagar Police Station
ಜಯನಗರ ಪೊಲೀಸ್ ಠಾಣೆ
author img

By

Published : Sep 29, 2021, 6:49 AM IST

ಶಿವಮೊಗ್ಗ: ಮೇಲಧಿಕಾರಿಗಳ ಕಿರುಕುಳ ತಾಳಲಾರದೇ ಎಫ್​​ಡಿಎ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಅವರ ಪತ್ನಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಎಫ್​ಡಿಎ ಅಧಿಕಾರಿ ನಾಪತ್ತೆ

ನನ್ನನ್ನು ಯಾರು ಹುಡುಕಬೇಡಿ. ಮೇಲಧಿಕಾರಿಗಳು ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರು ಹೇಳಿದ ಕೆಲಸ ಮಾಡುವುದು ಕಷ್ಟಕರವಾಗಿದೆ. ಶಾಸಕರು, ಪರಿಷತ್ ಸದಸ್ಯರ ಹಾಗೂ ಸಂಸದರ ಅನುದಾನ ಸರಿಯಾಗಿ ಬಾರದ ಕಾರಣ ಅನುದಾನ ಹಂಚಿಕೆ ಮಾಡುವುದು ಕಷ್ಟಕರವಾಗಿದೆ.

ಡಿಸಿ ಅವರ ಅಕೌಂಟ್​​​ನಿಂದ ಹಣ ಹಂಚಿಕೆ ಮಾಡಿದರೂ ಕೊನೆಯಲ್ಲಿ ಅನುದಾನವನ್ನು ಹೊಂದಾಣಿಕೆ ಮಾಡುವುದು ಕಷ್ಟಕರವಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗಿರಿರಾಜ ಆರೋಪಿಸಿದ್ದಾರೆ.

ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕಾರಣ ಎಂದು ತಮ್ಮ ಕಚೇರಿಯ ವಾಟ್ಸ್​ಆ್ಯಪ್​ಗ್ರೂಪ್​​​​​​​​​​​​​​​​​​​​ ಮೇಸೆಜ್ ಮಾಡಿ ಗಿರಿರಾಜ ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ.

ಗಿರಿರಾಜ ಅವರ ಮೊಬೈಲ್ ಲೋಕೇಷನ್ ಭದ್ರಾವತಿಯ ಕಾರೆಹಳ್ಳಿ ಬಳಿ ಕೊನೆಯಾಗಿದೆ. ಇದರಿಂದ ಅವರು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲೆಯಲ್ಲಿ ಹುಡುಕಾಟ ನಡೆಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಸಂಬಂಧ ಗಿರಿರಾಜ್​ ಅವರ ಪತ್ನಿ ಜ್ಯೋತಿ ಪತಿ ಕಾಣೆಯಾಗಿರುವ ಕುರಿತು ಜಯನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್ ನಿಂದ ಮೃತಪಟ್ಟ ಬಡ ಕುಟುಂಬದವರಿಗೆ 1 ಲಕ್ಷ ರೂ. ಪರಿಹಾರದ ಆದೇಶ ವಾಪಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.