ETV Bharat / state

ಶಿವಮೊಗ್ಗದಲ್ಲಿ ನವರಾತ್ರಿ ಸಂಭ್ರಮ.. ಆಕರ್ಷಕ ದಸರಾ ಗೊಂಬೆಗಳ ಪ್ರದರ್ಶನ

ಶಿವಮೊಗ್ಗದಲ್ಲಿ ದಸರಾ ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬದ ಪ್ರಯುಕ್ತ ಮನೆಗಳಲ್ಲಿ ದಸರಾ ಗೊಂಬೆಗಳ ಪ್ರದರ್ಶನ ಎಲ್ಲರ ಆಕರ್ಷಣೆಯಾಗಿದೆ.

ಶಿವಮೊಗ್ಗದಲ್ಲಿ ನವರಾತ್ರಿಯ ಸಂಭ್ರಮ
ಶಿವಮೊಗ್ಗದಲ್ಲಿ ನವರಾತ್ರಿಯ ಸಂಭ್ರಮ
author img

By

Published : Oct 2, 2022, 9:26 PM IST

ಶಿವಮೊಗ್ಗ: ದಸರಾ ಹಬ್ಬ ಅಂದ್ರೆ ನವರಾತ್ರಿ ಅಷ್ಟೇ ಅಲ್ಲ. ಹಬ್ಬದಲ್ಲಿ ಗೊಂಬೆ ಪ್ರದರ್ಶನ ಸಹ ಮಹತ್ವ ಪಡೆದುಕೊಂಡಿದೆ. ನವರಾತ್ರಿ ಸಂಭ್ರಮ ದೇವಾಲಯಗಳಲ್ಲಿ ನಡೆದರೆ, ಗೊಂಬೆ ಪ್ರದರ್ಶನ ಮನೆ ಮನೆಯಲ್ಲೂ ಇರುತ್ತದೆ. ಗೊಂಬೆ ಪ್ರದರ್ಶನ ಮೈಸೂರು ಭಾಗದ ದಸರಾ ಸಂಸ್ಕೃತಿಯನ್ನು ತೋರುತ್ತದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮೈಸೂರು ರಾಜ್ಯದ ಕಾಲದಿಂದಲೂ ಮನೆ ಮನೆಯಲ್ಲಿ ಗೊಂಬೆ ಪ್ರದರ್ಶನ‌ವಿರುತ್ತದೆ.

ದಸರಾ ಪ್ರಾರಂಭವಾಗುತ್ತಿದ್ದಂತೆ ಮನೆಯಲ್ಲಿದ್ದ ಗೊಂಬೆಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಲಾಗುತ್ತದೆ. ಗೊಂಬೆಗಳಿಗೆ ಬಣ್ಣ ಹಚ್ಚಿ, ಹೊಸ ವಸ್ತ್ರ ಹಾಕಿ ಸಿಂಗಾರ ಮಾಡಲಾಗುತ್ತದೆ. ಅವು ಒಂದಕ್ಕೊಂದು ತಾಕದಂತೆ ಅತ್ಯಂತ ಸುಂದರವಾಗಿ ಕಾಣುವಂತೆ ಜೋಡಿಸಲಾಗುತ್ತದೆ. ಹಿಂದೂ ಧರ್ಮದಲ್ಲಿನ ದೇವತೆಗಳನ್ನು ಒಂದು ಸಾಲಿನಲ್ಲಿ ಜೋಡಿಸಲಾಗುತ್ತದೆ.

ಅದೇ ರೀತಿ ಮೈಸೂರು ದಸರಾದಲ್ಲಿನ ಅಂಬಾರಿಯ ಗೊಂಬೆಗಳು, ರಾಮಾಯಣ, ಮಹಾಭಾರತವನ್ನು ಸಾರುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಅವುಗಳಿಗೆ ವಿದ್ಯುತ್ ಲೈಟ್​ಗಳನ್ನು ನೀಡಿ ಚೆನ್ನಾಗಿ ಕಾಣುವಂತೆ ಮಾಡಲಾಗುತ್ತದೆ. ಇದೆಲ್ಲದರಿಂದ ಗೊಂಬೆ ಪ್ರದರ್ಶನದ ಅಂದ ಇನ್ನಷ್ಟು ಹೆಚ್ಚಿದೆ.

ಶಿವಮೊಗ್ಗದಲ್ಲಿ ನವರಾತ್ರಿ ಸಂಭ್ರಮ

ವಿಶೇಷ ಪೂಜೆ: ಗೊಂಬೆಗಳನ್ನು ಜೋಡಿಸುವುದಷ್ಟೆ ಅಲ್ಲದೆ, ಅವುಗಳಿಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ವೇಳೆಗೆ ಮುತ್ತೈದೆಯರನ್ನು ಪೂಜೆಗೆ ಕರೆಯಲಾಗುತ್ತದೆ. ಅವರಿಗೆ ಮಡಿಲು ತುಂಬಿ, ಪ್ರಸಾದ ನೀಡಲಾಗುತ್ತದೆ. ನವರಾತ್ರಿಯ ಪ್ರತಿದಿನವೂ ಈ ಆಚರಣೆ ನಡೆಯುತ್ತದೆ. ನವರಾತ್ರಿಯ ಕೊನೆಯ ದಿನ ಎಲ್ಲಾ ಗೊಂಬೆಗಳನ್ನು ತೆಗೆದು, ಮುಂದಿನ ವರ್ಷದ ಗೊಂಬೆ ಪ್ರದರ್ಶನಕ್ಕಾಗಿ ಸುರಕ್ಷತೆಯಿಂದ ಎತ್ತಿಡಲಾಗುತ್ತದೆ.

ಮರದ ಗೊಂಬೆಗಳ ಪ್ರದರ್ಶನ: ಶಿವಮೊಗ್ಗದ ಹಳೇ ತೀರ್ಥಹಳ್ಳಿ ರಸ್ತೆಯ ಕಲ್ಲಪ್ಪನ‌ ಕೇರಿಯ ಶ್ರೀನಿಧಿ ಎಂಬುವರ ಮನೆಯಲ್ಲಿ ಗೊಂಬೆ ಪ್ರದರ್ಶನವನ್ನು ಆಕರ್ಷಣಿಯವಾಗಿ ಪ್ರದರ್ಶನಕ್ಕೆ ಇಡಲಾಗಿತ್ತು.‌ ಅದರಲ್ಲೂ ಮರದ ಗೊಂಬೆಗಳು ಪ್ರದರ್ಶನದ ಆಕರ್ಷಣೆಯನ್ನು ಇಮ್ಮಡಿಗೊಳಿಸಿತ್ತು.

ಓದಿ: ರಾಜವಂಶಸ್ಥರಿಂದ ಸಾಂಪ್ರದಾಯಿಕ ಸರಸ್ವತಿ ಪೂಜೆ.. ವೀರಭದ್ರ ಕುಣಿತಕ್ಕೆ ಹೆಜ್ಜೆ ಹಾಕಿದ ಸಚಿವ ಸೋಮಶೇಖರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.