ಶಿವಮೊಗ್ಗ: ಮಾರುತಿ ಸುಜುಕಿ ಕಂಪನಿಯ ವಿರುದ್ಧ ಸಿಎ ಒಬ್ಬರು ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಜಯಗಳಿಸಿದ್ದಾರೆ.
ಮಾರುತಿ ಸುಜುಕಿ ಕಂಪನಿಯ ನೆಕ್ಸಾ ಕಾರನ್ನು ಶಿವಮೊಗ್ಗ ಚಾರ್ಟೆಂಡ್ ಅಕೌಡೆಂಟ್ ಆಗಿರುವ ಸಂತೋಷ್ ಜಡೇದ್, 2015 ರ ಡಿಸಂಬರ್ನಲ್ಲಿ ಬೆಂಗಳೂರಿನ ಪ್ರಿಮಿಯರ್ ಶೋರೂಂ ನಲ್ಲಿ ಖರೀದಿ ಮಾಡಿದ್ದರು.
ಈ ಕಾರು ಖರೀದಿಸಿದ ಕೆಲ ದಿನಗಳಲ್ಲಿಯೇ ಇಂಜಿನ್ ಡೌನ್ ಅಗಿ ಚಲಿಸದೇ ನಡು ರಸ್ತೆಯಲ್ಲಿಯೇ ನಿಂತು ಬಿಡುತ್ತದೆ. ಈ ಹಿನ್ನೆಲೆ ಜಡೇದ್ ಅವರು ಕಾರನ್ನು ರಿಪೇರಿಗೆ ಕಳುಹಿಸುತ್ತಾರೆ. ಕಾರು ತೆಗೆದು ಕೊಂಡು ಹೋದ ಶೋರೂಂ ನವರು ಕೆಲ ದಿನಗಳ ನಂತ್ರ ಕಾರ್ ಸರ್ವಿಸ್ ಮಾಡಿ ವಾಪಸ್ ಜಡೇದ್ರಿಗೆ ನೀಡುತ್ತಾರೆ.
ಇದಾದ ಒಂದು ವರ್ಷದ ಬಳಿಕ ಮತ್ತೇ ಅದೇ ತೊಂದರೆ ಕಾಣಿಸಿಕೊಳ್ಳುತ್ತದೆ. ಕಾರನ್ನು ರಿಪೇರಿಗೆ ನೀಡಿದ ಜಡೇದ್ ಮತ್ತೇ ಅದನ್ನು ವಾಪಸ್ ಪಡೆಯುವುದಿಲ್ಲ. ಇದಾದ ಬಳಿಕ ಕಾರ್ ಕಂಪನಿ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ಏಪ್ರಿಲ್ 2018ರಂದು ದೂರು ದಾಖಲು ಮಾಡುತ್ತಾರೆ.
ನ್ಯಾಯಾಧೀಶರಾದ ಶೈಲಜಾ ಪರಮೇಶ್ ರವರು ವಾದ ವಿವಾದಗಳನ್ನು ಆಲಿಸಿ, ಕಾರು ಖರೀದಿಯ ಹಣ, ಕಾರು ರಿಪೇರಿಗೆ ಖರ್ಚು ಮಾಡಿದ 1 ಲಕ್ಷದ 50 ಸಾವಿರ ರೂ ಹಾಗೂ ಖರ್ಚಿನ ಶೇ 10 ಬಡ್ಡಿ ಹಾಕಿ 50 ಸಾವಿರ ರೂ ನೀಡಬೇಕು ಎಂದು ಮಾರುತಿ ಸುಜುಕಿ ಕಂಪನಿಯವರಿಗೆ ಆದೇಶ ನೀಡಲಾಗಿದೆ. ಗ್ರಾಹಕರ ನ್ಯಾಯಾಲಯದ ತೀರ್ಪಿನ ಬಗ್ಗೆ ಕಾರಿನ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.