ETV Bharat / state

ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಫೆ.23ರ ವರೆಗೆ ಕರ್ಫ್ಯೂ ಘೋಷಣೆ - ಶಿವಮೊಗ್ಗದಲ್ಲಿ ಇಂದು ರಾತ್ರಿಯಿಂದ 23 ರ ವರೆಗೆ ಕರ್ಪ್ಯೂ ಘೋಷಣೆ

Tension in Shivamogga.. ನಾಳೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ‌ ಮಾಡಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ಹಾಗೆ ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಶಿವಮೊಗ್ಗ ಎಸ್​ ಪಿ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಇಂದು ರಾತ್ರಿಯಿಂದ 23 ರ ವರೆಗೆ ಕರ್ಪ್ಯೂ ಘೋಷಣೆ

author img

By

Published : Feb 21, 2022, 9:34 PM IST

Updated : Feb 21, 2022, 9:42 PM IST

ಶಿವಮೊಗ್ಗ : ನಗರದಲ್ಲಿ ನಿರ್ಮಾಣವಾಗಿರುವ ಬಿಗುವಿನ ವಾತಾವರಣ ಹಿನ್ನೆಲೆ ಇಂದು ರಾತ್ರಿಯಿಂದ ಬುಧವಾರ ಬೆಳಗ್ಗೆ ಆರು ಗಂಟೆವರೆಗೆ ಕರ್ಪ್ಯೂ ಜಾರಿ ಮಾಡಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

ನಾಳೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ‌ ಮಾಡಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ. ಅಗತ್ಯ ಬಿದ್ದರೆ ಕರ್ಫ್ಯೂ ಮುಂದುವರಿಸಲಾಗುತ್ತದೆ ಎಂದು ಇದೇ ವೇಳೆ ಹೇಳಿದರು.

ಹರ್ಷ ಹತ್ಯೆ ಪ್ರಕರಣ: ಶಿವಮೊಗ್ಗದಲ್ಲಿ ಫೆ.23ರ ವರೆಗೆ ಕರ್ಫ್ಯೂ ಘೋಷಣೆ

ಇದನ್ನೂ ಓದಿ: ಶಿವಮೊಗ್ಗ ಯುವಕ ಹರ್ಷ ಕೊಲೆ ಬಗ್ಗೆ ಗೃಹ ಸಚಿವರ ವರದಿ ಕುರಿತು ನಾಳೆ ಮಾಹಿತಿ: ಸಿಎಂ

ಶಿವಮೊಗ್ಗ ಜಿಲ್ಲೆಗೆ ಹೆಚ್ಚುವರಿಯಾಗಿ ಪೊಲೀಸ್ ಫೋರ್ಸ್ ಬರಲಿದೆ. ಇಂದು ರಾತ್ರಿಯೇ 400ಕ್ಕೂ ಹೆಚ್ಚು ಪೊಲೀಸರು ಆಗಮಿಸಲಿದ್ದಾರೆ. ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

Last Updated : Feb 21, 2022, 9:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.