ಶಿವಮೊಗ್ಗ: ವೈವಿಧ್ಯತೆಯಲ್ಲಿ ಏಕತೆ ಸಾರುವ ಎಲ್ಲಾ ಧರ್ಮದ ಆಚರಣೆಗಳ ಮೂಲಕ ನಗರದಲ್ಲಿ ವಿದ್ಯಾರ್ಥಿನಿಯರು ದೇಶಪ್ರೇಮವನ್ನು ಮೆರೆದರು.
ನಗರದ ಕಮಲಾ ನೆಹರು ಮಹಿಳಾ ಕಾಲೇಜ್ನಲ್ಲಿ ಇಂದು ಸಾಂಸ್ಕೃತಿಕ ಹಬ್ಬ ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದರು. ಅಲ್ಲದೆ, ಎಲ್ಲಾ ಪ್ರಕಾರದ ಸಾಂಸ್ಕೃತಿಕ ಕಲೆಗಳನ್ನು ಅನಾವರಣಗೊಳಿಸಿದರು.
ಹೊಸ ಮಹಿಳಾ ಮಣಿಗಳು ದೇಶಕಾಯುವ ಸೈನಿಕರ ವೇಷಭೂಷಣದಲ್ಲಿ ದೇಶ ಪ್ರೇಮವನ್ನು ಸಾರಿದರು.
ಕೇರಳದ ಕಥಕ್ಕಳಿ, ಅಸ್ಸೋಂ ಬಿಹು, ಮಹಾರಾಷ್ಟ್ರದ ಶಿವಾಜಿ ಜಯಂತಿ , ನಾಗರ ಪಂಚಮಿ, ಗಣೇಶ ಚತುರ್ಥಿ, ಲಕ್ಷ್ಮಿ ಪೂಜೆ, ದುರ್ಗಾ ಪೂಜೆ, ಕಾಶ್ಮೀರ ನೃತ್ಯ, ಆಂಧ್ರ ಪ್ರದೇಶದ ಕುಚಿಪುಡಿ ನೃತ್ಯ ಹಾಗೂ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್, ಕ್ರಿಶ್ಚಿಯನ್ ಧರ್ಮದ ಕ್ರಿಸ್ಮಸ್ ಆಚರಣೆ ಇಲ್ಲಿ ನಡೆಯಿತು. ಕೇವಲ ಆಚರಣೆ ಅಲ್ಲದೇ ಆಯಾ ರಾಜ್ಯಗಳ ವಿಶೇಷ ವೇಷಭೂಷಣ ಹಾಗೂ ನೃತ್ಯವನ್ನು ಪ್ರದರ್ಶಿಸುವ ಮೂಲಕ ನೋಡುಗರ ವಿದ್ಯಾರ್ಥಿನಿಯರು ಗಮನ ಸೆಳೆದರು.