ETV Bharat / state

Shivamogga crime: ಪ್ರತ್ಯೇಕ ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ, ಬಿಗುವಿನ ವಾತಾವರಣ.. ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್

author img

By

Published : Jun 26, 2023, 3:58 PM IST

Updated : Jun 26, 2023, 7:25 PM IST

ನಗರದ ಎರಡು ಕಡೆ ಹಲ್ಲೆ ಹಾಗೂ ಗಲಾಟೆ ಪ್ರಕರಣಗಳು ದಾಖಲಾಗಿವೆ.

police tight security in Shivamogga
ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್
ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯೆ

ಶಿವಮೊಗ್ಗ: ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದ ಪ್ರಮುಖ ವೃತ್ತಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಶಿವಮೊಗ್ಗ ನಗರದ ಎರಡು ಕಡೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್ಆರ್​ಪಿಯ ಮೂರು ತುಕಡಿಗಳನ್ನು ನಗರದ ಟಿಪ್ಪು ನಗರ ಹಾಗೂ ದ್ರೌಪದಮ್ಮ ವೃತ್ತದಲ್ಲಿ ನಿಯೋಜಿಸಲಾಗಿದೆ.

ನಿನ್ನೆ ಸಂಜೆ ಶಿವಮೊಗ್ಗ ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು ಆರು ಜನರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಎರಡೂ ಪ್ರಕರಣಗಳ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣ ಒಂದು: ಶಿವಮೊಗ್ಗದ ಟಿಪ್ಪು ನಗರದಲ್ಲಿ ಬಾಬಾ ಅಲಿಯಾಸ್ ಇರ್ಪಾನ್ ಎಂಬಾತ ಕುಡಿದುಕೊಂಡು ಆಟೋ ಚಲಾಯಿಸಿಕೊಂಡು ಬಂದು ಪಿಗ್ಮಿ ಸಂಗ್ರಹಕ ಸಂದೇಶ ಎಂಬುವರ ಬೈಕ್​ಗೆ ಡಿಕ್ಕಿ ಹೊಡೆದಿದ್ದನು. ಈ ವೇಳೆ ಬೈಕ್​ನ ಸೈಡ್ ಮಿರರ್ ಒಡೆದು ಹೋಗಿದ್ದು, ಅಲ್ಲಿಂದ ಗೋಪಿಶೆಟ್ಟಿ‌ಕೊಪ್ಪದ ಕಡೆ ಹೋಗುತ್ತಿದ್ದ ಆಟೋವನ್ನು ಹಿಂಬಾಲಿಸಿದ ಬೈಕ್​ ಸವಾರ, ಆಟೋವನ್ನು ನಿಲ್ಲಿಸಿ, ಸುಮ್ಮನೆ ಡಿಕ್ಕಿ ಹೊಡೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದನು. ನಂತರ ಅಲ್ಲಿದ್ದ ಇತರರನ್ನು‌ ಕಂಡ ಆಟೋ ಡ್ರೈವರ್​ ಬಾಬಾ, 'ನನ್ನನ್ನು ಮುಟ್ಟಿ ನೋಡು‌' ಎಂದು ಬಟ್ಟೆ ಬಿಚ್ಚಿಕೊಂಡು ಕೂಗಾಡಿದ್ದನು.‌ ಅಲ್ಲದೆ ಸಂದೇಶ ಎಂಬವರ ಕಣ್ಣಿಗೆ ಹಲ್ಲೆ ನಡೆಸಿದ್ದನು. ಗಾಯಗೊಂಡ ಸಂದೇಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಎರಡು: ಶಿವಮೊಗ್ಗ ದ್ರೌಪದಮ್ಮನ ಸರ್ಕಲ್ ಬಳಿ ನಿನ್ನೆ ಸಂಜೆ ವಿಜಯ ಕುಮಾರ್ ಎಂಬುವರಿಗೆ ತ್ರಾಸು ಸಹಚರ ಪೋನ್ ಮಾಡಿ ಕರೆಯಿಸಿಕೊಂಡಿದ್ದನು. ನಂತರ ಮಾತಿಗೆ ಮಾತು ಬೆಳೆದು ವಿಜಯ ಕುಮಾರ್ ಬೆನ್ನಿಗೆ ಚೂಪಾದ ಆಯುಧದಿಂದ ಹಲ್ಲೆ ನಡೆಸಿದ್ದನು. ವಿಜಯ ಕುಮಾರ್ ಹಾಗೂ ತ್ರಾಸು ಎಲ್ಲರೂ ಮಿತ್ರರಾಗಿದ್ದು, ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿದೆ. ಇದರಿಂದ ತ್ರಾಸು ಹಾಗೂ ಇತರರು ವಿಜಯ ಕುಮಾರ್ ಬೆನ್ನಿಗೆ ಆಯುಧದಿಂದ‌ ಚುಚ್ಚಿದ್ದರು. ವಿಜಯ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಇದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಲಾಗಿದೆ.

ನಿನ್ನೆ ನಡೆದ ಎರಡು ಪ್ರಕರಣ ಬೇರೆ ಬೇರೆಯಾಗಿವೆ. ಪ್ರಕರಣ ಒಂದಕ್ಕೊಂದು ಸಂಬಂಧವಿಲ್ಲ. ಆಟೋ ಹಲ್ಲೆ ಪ್ರಕರಣದಲ್ಲಿ ನಾಲ್ವರನ್ನು ಹಾಗೂ ವಿಜಯ ಕುಮಾರ್ ಮೇಲೆ ಹಲ್ಲೆ ಪ್ರಕರಣದಲ್ಲಿ ಇಬ್ಬರನ್ನು‌ ಬಂಧಿಸಲಾಗಿದೆ. ದ್ರೌಪದಮ್ಮ ವೃತ್ತದಲ್ಲಿ ಜಗಳವಾಡಿದ ಇಬ್ಬರು ಸಹ ರೌಡಿ ಶೀಟರ್​ಗಳಾಗಿದ್ದಾರೆ. ಮುನ್ನೆಚ್ಚರಿಕ‌ ಕ್ರಮವಾಗಿ ಗಲಾಟೆ ನಡೆದ ಎರಡು ಕಡೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎರಡು ಪ್ರಕರಣಗಳಿಂದ‌ ಒಟ್ಟು‌ ಆರು ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಒಂದೇ ದಿನ 2 ಕಡೆ ಹಲ್ಲೆ ಆರೋಪ: ಮೆಗ್ಗಾನ್‌ ಆಸ್ಪತ್ರೆಗೆ ದೌಡಾಯಿಸಿದ ಕೆಲ ಸಂಘಟನೆ ಕಾರ್ಯಕರ್ತರು

Last Updated : Jun 26, 2023, 7:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.