ಶಿವಮೊಗ್ಗ: ವಾಸದ ಮನೆಯ ವಿಚಾರಕ್ಕೆ ಸಂಬಂಧಿಕರ ನಡುವಿನ ಗಲಾಟೆ ನಡೆದು ಓರ್ವನನ್ನು ಕೊಲೆಗೈದ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ. ವಿದ್ಯಾನಗರ ಬಡಾವಣೆಯ ಸುಭಾಷನಗರದ ನಿವಾಸಿ ಜ್ಞಾನೇಶ್ವರ್ (45) ಕೊಲೆಗೀಡಾದ ವ್ಯಕ್ತಿ.
ವಿದ್ಯಾನಗರ ಬಡಾವಣೆಯಲ್ಲಿ ಜ್ಞಾನೇಶ್ವರ ಅವರ ಪತ್ನಿ, ತಾಯಿಗೆ ಸೇರಿದ ಮನೆ ಇದೆ. ಈ ಮನೆಯ ವಿಚಾರಕ್ಕೆ ಜ್ಞಾನೇಶ್ವರ್ ಹಾಗೂ ಪತ್ನಿಯ ಸೋದರಮಾವ ನಾಗರಾಜ ಅವರ ನಡುವೆ ಶನಿವಾರ ಜಗಳ ನಡೆದಿದೆ. ರಾತ್ರಿ ಇಬ್ಬರೂ ಮದ್ಯ ಸೇವಿಸಿ ಜಗಳ ಮಾಡಿಕೊಂಡಿದ್ದಾರೆ. ರಾತ್ರಿಯಿಡೀ ಜಗಳ ಮುಂದುವರೆದಿದೆ. ಈ ವೇಳೆ ನಾಗರಾಜ್, ಜ್ಞಾನೇಶ್ವರ್ರನ್ನು ಬಲವಾಗಿ ನೆಲಕ್ಕೆ ತಳ್ಳಿದ್ದು, ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಬಳಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಆರೋಪಿ ನಾಗರಾಜ್ ಪರಾರಿಯಾಗಿದ್ದಾರೆ. ಇವರು ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನವರು ಎಂದು ತಿಳಿದು ಬಂದಿದೆ.
ಕೋಟೆ ಪೊಲೀಸರಿಂದ ತನಿಖೆ: ಜ್ಞಾನೇಶ್ವರ್ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನವರು. ಇವರು ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಾಗ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ತಾಯಿಯೊಂದಿಗೆ ಅನ್ಯೋನ್ಯವಾಗಿರುತ್ತಾನೆ ಎಂದು ಬಾಣಸಿಗನ ಹತ್ಯೆ.. ಕೊಲೆ ಬಳಿಕ ಆರೋಪಿ ನಾಪತ್ತೆ
ಬೆಂಗಳೂರಲ್ಲಿ ಬಾಣಸಿಗನ ಹತ್ಯೆ: ಜುಲೈ 28ರ ತಡರಾತ್ರಿ, ತಾಯಿಯೊಂದಿಗೆ ಅನ್ಯೋನ್ಯವಾಗಿ ಇದ್ದಾನೆ ಎಂದು ಆಕೆಯ ಮಗ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಮಾಗಡಿರಸ್ತೆಯ ಗೋಪಾಲಪುರದ ಮನೆಯೊಂದರಲ್ಲಿ ನಡೆದಿತ್ತು. ಆರೋಪಿ ರಾಹುಲ್ ಎಂಬ ಯುವಕರವಿ ಭಂಡಾರಿ (44) ಎಂಬಾತ ಈ ಕೃತ್ಯ ಎಸಗಿ ಪರಾರಿಯಾಗಿದ್ದನು. ರವಿ ಭಂಡಾರಿ ಕಳೆದ ಒಂದು ತಿಂಗಳಿನಿಂದ ಬಸವೇಶ್ವರ ನಗರದ ಕೆ.ಎಚ್.ಬಿ ಕಾಲೋನಿಯ ಪಿಜಿಯೊಂದಲ್ಲಿ ಸಹೋದರನೊಂದಿಗೆ ಅಡುಗೆ ಕೆಲಸ ಮಾಡಿಕೊಂಡಿದ್ದ. ಅದೇ ಪಿಜಿಯಲ್ಲಿ ಪದ್ಮಾವತಿ ಎಂಬ ಮಹಿಳೆ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ತನ್ನ ತಾಯಿಯೊಂದಿಗೆ ರವಿ ಭಂಡಾರಿ ಅನ್ಯೋನ್ಯವಾಗಿರುತ್ತಾನೆ, ಮಾತನಾಡುತ್ತಿರುತ್ತಾನೆ ಎಂದು ಮಗ ರಾಹುಲ್ ಕೋಪಗೊಂಡಿದ್ದ. ಇದರಿಂದ ಆತನನ್ನು ಕರೆ ಮಾಡಿ ಕರೆಸಿ ಹತ್ಯೆ ಮಾಡಿದ್ದಾನೆ. ಪರಾರಿಯಾಗಿರುವ ರಾಹುಲ್ಗೆ ಪತ್ತೆ ಕಾರ್ಯ ಮುಂದುವರೆದಿದೆ.
ಈ ಸುದ್ದಿಗಳನ್ನೂ ಓದಿ: ಪ್ರೀತಿಗೆ ಅಡ್ಡಿ ಆರೋಪ.. ಕೊಡಲಿಯಿಂದ ಪತಿಯನ್ನೇ ತುಂಡರಿಸಿ ಕೊಂದ ಮಹಿಳೆ