ಶಿವಮೊಗ್ಗ: ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಹೊಸದಾಗಿ ದಾಖಲಾಗುವ ಅಥವಾ ಸಂರಕ್ಷಿಸಲ್ಪಟ್ಟ 18 ವರ್ಷದೊಳಗಿನ ಮಕ್ಕಳನ್ನು ನೇರವಾಗಿ ಸಂಸ್ಥೆಗೆ ದಾಖಲಿಸದೆ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡುವುದು ಕಡ್ಡಾಯ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಮಗ್ರ ಮಕ್ಕಳ ಕಲ್ಯಾಣ ಯೋಜನೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಹೊಸದಾಗಿ ದಾಖಲಾಗುವ ಅಥವಾ ಸಂರಕ್ಷಿಸಲ್ಪಟ್ಟ 18 ವರ್ಷದೊಳಗಿನ ಮಕ್ಕಳನ್ನು ನೇರವಾಗಿ ಸಂಸ್ಥೆಗೆ ದಾಖಲಿಸದೆ ಕ್ವಾರಂಟೈನ್ ಮಾಡುವುದು ಕಡ್ಡಾಯವಾಗಿದೆ.
ಕ್ವಾರಂಟೈನ್‍ಗಾಗಿ ಬಾಲಕಿಯರಿಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಬಾಲಕರಿಗಾಗಿ ಸರ್ಕಾರಿ ಬಾಲಕರ ಬಾಲಮಂದಿರ ಆಲ್ಕೊಳ ಮತ್ತು ಸಂಘರ್ಷಕ್ಕೊಳಪಟ್ಟ ಬಾಲಕರಿಗೆ ಸರ್ಕಾರಿ ವೀಕ್ಷಣಾಲಯ ಗುರುತಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.