ETV Bharat / state

ತಪ್ಪು ಸರಿಪಡಿಸಿಕೊಂಡು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರ್ತದೆ.. ಕಾರ್ಯಕರ್ತರು ಧೃತಿಗೆಡಬೇಕಿಲ್ಲ: ಶಾಸಕ ಚನ್ನಬಸಪ್ಪ - ಕಾಂಗ್ರೆಸ್ ಶಾಸಕರು

ಬಿಜೆಪಿ ಸರ್ಕಾರ ಇದ್ದಾಗಲೂ ಕಾಂಗ್ರೆಸ್ ಶಾಸಕರು ಇರುವಲ್ಲಿ ಅನುದಾನ ಕೊಟ್ಟಿದೆ. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯವರು ಪಾಲಿಟಿಕ್ಸ್ ಮಾಡಿಲ್ಲ. ಕಾಂಗ್ರೆಸ್​ನವರು ಕೂಡ ಮಾಡಲ್ಲ: ಶಾಸಕ ಎಸ್ ಎನ್ ಚನ್ನಬಸಪ್ಪ ಪ್ರತಿಕ್ರಿಯೆ

MLA S N Channabasappa spoke at the press conference.
ಶಾಸಕ ಎಸ್ ಎನ್ ಚನ್ನಬಸಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
author img

By

Published : May 17, 2023, 9:21 PM IST

ಶಿವಮೊಗ್ಗ: ಶಾಸಕ ಎಂಬ ಹೆಸರು ನಿಮಿತ್ತ ಮಾತ್ರ, ಸೇವಕ ನಿಜವಾದ ಅರ್ಥ. ನಾನು ಜನಸೇವಕನಾಗಿ ಮತದಾರರ ಋಣ ತೀರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ, ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರಿಗೆ, ನನಗೆ ಮಾರ್ಗದರ್ಶನ ಮಾಡಿದ ಪಕ್ಷದ ಹಿರಿಯರಿಗೆ, ಸಂಘ ಪರಿವಾರದವರಿಗೆ, ರಾಜ್ಯ, ರಾಷ್ಟ್ರದ ನಾಯಕರಿಗೆ ನನ್ನ ಧನ್ಯವಾದಗಳು ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿಲ್ಲ ನಿಜ.

ಬಿಜೆಪಿಗೆ ಸೋಲು ಇದೇ ಮೊದಲಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ನಮ್ಮ ನಾಯಕರು ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.

ಈಗಾಗಲೇ ಶಿವಮೊಗ್ಗ ನಗರದ ಅಭಿವೃದ್ಧಿ ಆಗಿದೆ. ಇನ್ನೂ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಯ ಕಡೆ ಗಮನಹರಿಸುತ್ತೇನೆ. ಹಿಂದುತ್ತ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವೆ. ಶಿವಮೊಗ್ಗಕ್ಕೆ ಶಾಂತಿ ಬೇಕು ಎಂಬುದು ನಿಜ. ಆದರೆ ಅದು ಎಲ್ಲಾ ಸಮುದಾಯದ ಕಡೆಯಿಂದ ಬರಬೇಕು ಎಂದು ತಿಳಿಸಿದರು.

ನಾವು ಯಾವತ್ತೂ ಶಾಂತಿಯನ್ನು ಕದಡಲು ಹೋಗಲ್ಲ. ಹೋಗುವುದೂ ಇಲ್ಲ. ಒಟ್ಟಾರೆ ಮತದಾರರ ಋಣ ತೀರಿಸುವಂತಹ ಕೆಲಸ ಮಾಡುತ್ತೇನೆ. ಅವರು ನನಗೆ ಮತದಾನ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಇದ್ದಾಗಲೂ ಕಾಂಗ್ರೆಸ್ ಶಾಸಕರು ಇರುವಲ್ಲಿ ಅನುದಾನ ಕೊಟ್ಟಿದೆ. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯವರು ಪಾಲಿಟಿಕ್ಸ್ ಮಾಡಿಲ್ಲ. ಕಾಂಗ್ರೆಸ್​ನವರು ಕೂಡ ಮಾಡಲ್ಲ. ಕಾಗೋಡು ತಿಮ್ಮಪ್ಪನವರು ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿ, ಸನ್ಮಾನ ಮಾಡಿದ್ದರು. ಜಿಲ್ಲೆಯಲ್ಲಿ ರಾಜಕೀಯ ಚಿತ್ರಣ ಬೇರೆ ಇದೆ. ಬಿಜೆಪಿ ಕಾಂಗ್ರೆಸ್​ನವರು ಭೇದ ಮಾಡದೇ ಒಟ್ಟೊಟ್ಟಿಗೆ ಹೋಗುತ್ತೇವೆ ಎಂದು ಹೇಳಿದರು.

ಬಿ ಎಲ್​ ಸಂತೋಷ್ ವಿರುದ್ಧ ಅವಹೇಳನ ಸಲ್ಲ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಸಂತೋಷ್ ಜಿ. ಅವರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಸಂಘಟನೆಯ ಹರಿಕಾರರು, ರಾಷ್ಟ್ರ ಭಕ್ತರು. ಇಂತಹವರಿಗೆ ಅವಹೇಳನ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿ ನಾಯಕರೂ ಕೂಡ ಅವರ ಬಗ್ಗೆ ಮಾತನಾಡಿದರೆ ಅದೂ ತಪ್ಪಾಗುತ್ತದೆ. ಸಂತೋಷ್ ಜಿ. ಅವರನ್ನು ಪ್ರಶ್ನೆ ಮಾಡುವವರು ಬಿಜೆಪಿಯಲ್ಲಿ ಇರಬಾರದು ಎಂದ ಅವರು, ಟೀಕೆ ಮಾಡುವವರು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದೇ ಹೋದಲ್ಲಿ ಅವರ ಬಗ್ಗೆ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ನಾಗರಾಜ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ,. ಬಾಲು, ಮೋಹನ್ ರೆಡ್ಡಿ, ಮಂಜುನಾಥ್ ಇದ್ದರು.

ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತ ಚರ್ಚೆ ಆರಂಭ: ಮುಂಚೂಣಿಯಲ್ಲಿ ಬೊಮ್ಮಾಯಿ‌ ಹೆಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.