ಶಿವಮೊಗ್ಗ: ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 42 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 446ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ 28 ಜನ ಗುಣಮುಖರಾಗಿರುವುದು ಸಂತಸದ ವಿಚಾರವಾಗಿದೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 197 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 242 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 7 ಸಾವು ಅಂತ ಹೇಳಲಾಗಿತ್ತು. ಆದರೆ ವಾಸ್ತವವಾಗಿ 10 ಸಾವು ಸಂಭವಿಸಿದೆ. ನಿನ್ನೆ 170 ಜನರ ಸ್ವ್ಯಾಬ್ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 20,945 ಜನರ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 19,246 ಜನರ ವರದಿ ಬಂದಿದೆ. ಇನ್ನೂ 541 ಜನರ ವರದಿ ಬರಬೇಕಿದೆ.
ಜಿಲ್ಲೆಯಲ್ಲಿ 120ಕ್ಕೂ ಅಧಿಕ ಕಡೆ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ನಿನ್ನೆ ಪತ್ತೆಯಾದ ಪ್ರಕರದಲ್ಲಿ ಐಎಲ್ಐನಿಂದಲೇ ಹೆಚ್ಚು ಜನ ಸೋಂಕಿಗೆ ಒಳಗಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹಚ್ಚಾಗುವ ಸಾಧ್ಯತೆಗಳಿವೆ.