ETV Bharat / state

ಹಾಸನ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳ ಕೊರೊನಾ ವರದಿ ಹೀಗಿದೆ...

author img

By

Published : Oct 20, 2020, 10:57 PM IST

ಇಂದು ಹಾಸನ ಜಿಲ್ಲೆಯಲ್ಲಿ 245, ಶಿವಮೊಗ್ಗ ಜಿಲ್ಲೆಯಲ್ಲಿ 156 ಹಾಗೂ ತುಮಕೂರು ಜಿಲ್ಲೆಯಲ್ಲಿ 240 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

covid
covid

ಹಾಸನ/ಶಿವಮೊಗ್ಗ/ತುಮಕೂರು: ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 245 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 23,566ಕ್ಕೆ ಏರಿಕೆಯಾಗಿದೆ. 3 ಸಾವಿನೊಂದಿಗೆ ಮೃತರ ಸಂಖ್ಯೆ 400 ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಇಂದು ಬಿಡುಗಡೆಯಾದ 375 ಜನರು ಸೇರಿ ಈವರೆಗೆ 20,593 ಮಂದಿ ಗುಣಮುಖರಾಗಿದ್ದಾರೆ. 2573 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 48 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

corona update
ಆರೋಗ್ಯಾಧಿಕಾರಿ ಸತೀಶ್

ತಾಲೂಕುವಾರು ಪ್ರಕರಣ:

ಇಂದು ಆಲೂರು-4, ಅರಕಲಗೂಡು-34, ಅರಸೀಕೆರೆ-6, ಬೇಲೂರು-23, ಚನ್ನರಾಯಪಟ್ಟಣ-17, ಹಾಸನ-118, ಹೊಳೆನರಸೀಪುರ-26, ಸಕಲೇಶಪುರ-17 ಪ್ರಕರಣಗಳು ದಾಖಲಾಗಿವೆ.

ಆರೋಗ್ಯಧಿಕಾರಿ ಮನವಿ:

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ನೆಗಡಿ, ಕೆಮ್ಮು ಏನಾದರೂ ಇದ್ದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊrಒನಾ ಸೋಂಕು ತಡೆಗಟ್ಟುವಲ್ಲಿ ಎಲ್ಲಾರು ಸಹಕರಿಸಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 156 ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 18,514ಕ್ಕೆ ಏರಿಕೆಯಾಗಿದೆ.

ಇಂದು 155 ಜನ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ 17,334 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 02 ಸಾವು ಸಂಭವಿಸಿದೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 336ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 859 ಜನ ಚಿಕಿತ್ಸೆಯಲ್ಲಿದ್ದಾರೆ.

corona update
ಕೋವಿಡ್ ಆಸ್ಪತ್ರೆ

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 140 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್​ನಲ್ಲಿ 8 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 120 ಜನ ಇದ್ದಾರೆ. ಮನೆಯಲ್ಲಿ 565 ಜನ ಐಸೋಲೇಷನ್​ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 26 ಸೋಂಕಿತರಿದ್ದಾರೆ.

ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ 7,136ಕ್ಕೆ ಏರಿಕೆ ಹಾಗಿದೆ. ಇದರಲ್ಲಿ‌ 4,934 ಜೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಕಿತರ ಸಂಖ್ಯೆ:

ಶಿವಮೊಗ್ಗ-33.

ಭದ್ರಾವತಿ-16.

ಶಿಕಾರಿಪುರ-17.

ತೀರ್ಥಹಳ್ಳಿ-42.

ಸೊರಬ-32.

ಸಾಗರ-03.

ಹೊಸನಗರ- 11

ಬೇರೆ ಜಿಲ್ಲೆಯಿಂದ ಶಿವಮೊಗ್ಗ ಜಿಲ್ಲೆಗೆ ಇಬ್ಬರು ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 3,132 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 3,064 ಜನರ ವರದಿ ಬಂದಿದೆ.

ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು 240 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆ 18566ಕ್ಕೆ ಏರಿಕೆಯಾಗಿದೆ.

corona update
ತುಮಕೂರಿನಲ್ಲಿಂದು 240 ಸೋಂಕಿತರು ಪತ್ತೆ

ತುಮಕೂರು ತಾಲೂಕಿನಲ್ಲಿ 64 ಮಂದಿಗೆ ಸೋಂಕು ತಗುಲಿದ್ದರೆ, ತಿಪಟೂರು ತಾಲುಕಿನಲ್ಲಿ 53, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 31, ಗುಬ್ಬಿ ತಾಳುಕಿನಲ್ಲಿ 28, ತುರುವೇಕೆರೆ ತಾಲೂಕಿನಲ್ಲಿ 14, ಮಧುಗಿರಿ ಮತ್ತು ಪಾವಗಡ ತಾಲೂಕಿನಲ್ಲಿ ತಲಾ 12, ಶಿರಾ ತಾಲೂಕಿನಲ್ಲಿ 11 , ಕುಣಿಗಲ್ ತಾಲೂಕಿನಲ್ಲಿ 8, ಕೊರಟಗೆರೆ ತಾಲೂಕಿನಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ.

ಇಂದು 223 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಇದುವರೆಗೂ 16,249 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 1930 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ನಾಲ್ವರು ಸೋಂಕಿತರು ಮೃತಪಟ್ಟಿದ್ದು ಮೃತರ ಸಂಖ್ಯೆ 248ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.