ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ 457 ಜನರಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ನಿನ್ನೆ 5 ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 371 ತಲುಪಿದೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 295, ಕೋವಿಡ್ ಕೇರ್ ಸೆಂಟರ್ನಲ್ಲಿ 12, ಖಾಸಗಿ ಆಸ್ಪತ್ರೆಯಲ್ಲಿ 268, ಆಯುರ್ವೇದ ಆಸ್ಪತ್ರೆಯಲ್ಲಿ 32 ಹಾಗೂ ಹೋಮ್ ಐಸೋಲೇಷನ್ನಲ್ಲಿ 1,545 ಸೋಂಕಿತರು ಸೇರಿ ಒಟ್ಟು 2,152 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 7,242ಕ್ಕೆ ಏರಿಕೆಯಾಗಿದೆ. ಇದರಲ್ಲಿ 6,769 ಝೋನ್ಗಳು ವಿಸ್ತರಣೆಯಾಗಿವೆ.
ತಾಲೂಕುವಾರು ಸೋಂಕಿತರ ಸಂಖ್ಯೆ:
ಶಿವಮೊಗ್ಗ 240, ಭದ್ರಾವತಿ 39, ಶಿಕಾರಿಪುರ 56, ತೀರ್ಥಹಳ್ಳಿ 30, ಸೊರಬ 45, ಸಾಗರ 14, ಹೊಸನಗರ 12 ಹಾಗೂ ಹೊರ ಜಿಲ್ಲೆಯಿಂದ 21ಜನರಿಗೆ ಕೋವಿಡ್ ದೃಢಪಟ್ಟಿದೆ. ನಿನ್ನೆ 2, 399 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 2,502 ಜನರ ವರದಿ ಬಂದಿದೆ.
ಇದನ್ನೂ ಓದಿ: ಕೊರೊನಾದಿಂದ ಸತ್ತ ವ್ಯಕ್ತಿಯ ಸುಟ್ಟ ಶವ ತಿಂದ ಮಾನಸಿಕ ಅಸ್ವಸ್ಥ!