ETV Bharat / state

ಶಿವಮೊಗ್ಗದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ: 30 ಕ್ಕೂ ಹೆಚ್ಚು ಅಧಿಕಾರಿಗಳು ಕ್ವಾರಂಟೈನ್

ಶಿಕಾರಿಪುರ ತಾಲೂಕಿನ ತಬ್ಲಿಘಿಗಳು ಗುಜರಾತ್​​ನ ಅಹಮದಾಬಾದ್​​ಗೆ ತೆರಳಿದ್ದರು. ನಿನ್ನೆ ವಾಪಸ್ ಬಂದ ಅವರನ್ನು ಪರೀಕ್ಷಿಸಿದಾಗ 8 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಹಾಗಾಗಿ ಅವರ ಜೊತೆಗಿದ್ದ ಸುಮಾರು 30 ಅಧಿಕಾರಿಗಳನ್ನು ಕ್ವಾರಂಟೈನ್ ಆಗಲು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್
author img

By

Published : May 10, 2020, 8:32 PM IST

ಶಿವಮೊಗ್ಗ: ಜಿಲ್ಲೆಯಲ್ಲಿ 8 ಕೊರೊನಾ ಪಾಸಿಟಿವ್​​​ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಲು ಆದೇಶ ನೀಡಿದೆ.

ಶಿಕಾರಿಪುರ ತಾಲೂಕಿನ ತಬ್ಲಿಘಿಗಳು ಗುಜರಾತ್​​ನ ಅಹಮದಾಬಾದ್​​ಗೆ ತೆರಳಿದ್ದರು. ನಿನ್ನೆ ವಾಪಸ್ ಬಂದಾಗ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ 9 ಜನರಲ್ಲಿ 8 ಜನರಿಗೆ ಕೊರೊನಾ ಪಾಸಿಟಿವ್​ನ ಪ್ರಥಮ ಹಂತದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಸಿಮ್ಸ್ ಬೋಧನಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್

ಇನ್ನು, ನಿನ್ನೆ ಬಂದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಅವರನ್ನು ಬಾಪೂಜಿ ನಗರದ ಹಾಸ್ಟೆಲ್​, ಮಲ್ಲಿಗೇನಹಳ್ಳಿಯ ಹಾಸ್ಟೆಲ್​ಗೆ ಬಿಟ್ಟು ಬರಲಾಗಿತ್ತು. ಇವರ ಜೊತೆಗಿದ್ದ ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಹಾಸ್ಟೆಲ್​ನಲ್ಲಿದ್ದ ಅಧಿಕಾರಿಗಳನ್ನು ಕ್ವಾರಂಟೈನ್ ಆಗಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.