ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 256 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 15,821ಕ್ಕೆ ಏರಿಕೆಯಾಗಿದೆ. ಇಂದು 290 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 13,459 ಜನ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿಂದು 3 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 303ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 2,088 ಸಕ್ರಿಯ ಪ್ರಕರಣಗಳಿವೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 158 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 179 ಜನ, ಖಾಸಗಿ ಆಸ್ಪತ್ರೆಯಲ್ಲಿ 293 ಜನ, ಮನೆಯಲ್ಲಿ 1,305 ಜನ ಐಸೋಲೇಷನ್, ಆರ್ಯುವೇದ ಕಾಲೇಜಿನಲ್ಲಿ 153 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಝೋನ್ ಸಂಖ್ಯೆ 6,632 ಕ್ಕೆ ಏರಿಕೆಯಾಗಿದೆ. ಇದರಲ್ಲಿ 3,840 ಝೋನ್ ವಿಸ್ತರಣೆಯಾಗಿದೆ. ಶಿವಮೊಗ್ಗ-93, ಭದ್ರಾವತಿ-60, ಶಿಕಾರಿಪುರ-52, ತೀರ್ಥಹಳ್ಳಿ-20, ಸೊರಬ-04, ಸಾಗರ-15, ಹೊಸನಗರ-06, ಬೇರೆ ಜಿಲ್ಲೆಯಿಂದ ಬಂದ 06 ಜನರಿಗೆ ಸೋಂಕು ತಗುಲಿದೆ.