ETV Bharat / state

ನಾನು ತಪ್ಪಿತಸ್ಥನಲ್ಲ, ಕೋರ್ಟ್​ನಲ್ಲೂ ನನಗೆ ಕ್ಲೀನ್​ಚಿಟ್ ಸಿಗುತ್ತೆ: ಈಶ್ವರಪ್ಪ ವಿಶ್ವಾಸ

author img

By

Published : Aug 24, 2022, 5:02 PM IST

Updated : Aug 24, 2022, 5:34 PM IST

ಗುತ್ತಿಗೆದಾರ ಸಂತೋಷ್​ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತನಿಖಾಧಿಕಾರಿಗಳ ಗಮನಕ್ಕೆ ತಂದು ಸ್ಪಷ್ಟಪಡಿಸಿದ್ದೇನೆ. ಪ್ರಕರಣದಲ್ಲಿ ಕೋರ್ಟ್​ ತ್ವರಿತವಾಗಿ ತೀರ್ಪು ನೀಡಲಿ ಎಂದು ಪ್ರಾರ್ಥಿಸುವೆ ಎಂದು ಬಿಜೆಪಿ ಶಾಸಕ ಕೆ.ಎಸ್​.ಈಶ್ವರಪ್ಪ ಹೇಳಿದರು.

contractor-santosh-patil-suicide-case-i-will-get-clean-chit-in-court-says-eshwarappa
ನಾನು ತಪ್ಪಿತಸ್ಥನಲ್ಲ, ಕೋರ್ಟ್​ನಲ್ಲೂ ನನಗೆ ಕ್ಲೀನ್​ಚಿಟ್ ಸಿಗುತ್ತೆ: ಈಶ್ವರಪ್ಪ ವಿಶ್ವಾಸ

ಶಿವಮೊಗ್ಗ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನಾನು ತಪ್ಪಿತಸ್ಥನಲ್ಲ. ಕೋರ್ಟ್​ನಲ್ಲೂ ನನಗೆ ಕ್ಲೀನ್​ಚಿಟ್ ಸಿಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಅರ್ಜಿ ಸಲ್ಲಿಕೆ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತನಿಖೆಯಲ್ಲಿ ನನಗೆ ಕ್ಲೀನ್​ಚಿಟ್ ಸಿಕ್ಕಿದೆ. ಪ್ರಕರಣದಿಂದ ಮುಕ್ತವಾಗಿ ಹೊರಬಂದಿದ್ದೇನೆ. ಅವರಿಗೆ ಕೋರ್ಟ್‌ಗೆ ಹೋಗೋ ಅಧಿಕಾರ ಇದೆ, ಹೋಗಿದ್ದಾರೆ ಎಂದರು.

ಇದನ್ನೂ ಓದಿ: ಸಂತೋಷ್​ ಪಾಟೀಲ ಆತ್ಮಹತ್ಯೆ ಪ್ರಕರಣ : ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕುಟುಂಬಸ್ಥರು

ಸಂತೋಷ್​ಗೂ ನನಗೂ ಯಾವುದೇ ಸಂಬಂಧವಿಲ್ಲ: ನನ್ನ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡದಿದ್ರೆ ತಪ್ಪಾಗುತ್ತೆ?. ಎಫ್ಐಆರ್ ದಾಖಲಾಗಿದೆ ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆಗಿನ ಗೃಹಮಂತ್ರಿ ಕೆ.ಜೆ ಜಾರ್ಜ್​ ಕೂಡ ಗಣಪತಿ ಆತ್ಮಹತ್ಯೆ ಕೇಸ್‌ನಲ್ಲಿ ರಾಜೀನಾಮೆ ಕೊಟ್ಟಿದ್ದರು. ಗಣಪತಿ ಅವರೇ ಡೆತ್​ನೋಟ್​ ಬರೆದಿಟ್ಟಿದ್ದರು. ನಾನು ವಿಪಕ್ಷ ಸ್ಥಾನದಲ್ಲಿದ್ದು ರಾಜೀನಾಮೆ ಕೊಡಿ ಎಂದು ಜಾರ್ಜ್ ಅವರಿಗೆ ಒತ್ತಾಯ ಮಾಡಿದ್ದೆ. ಅವರು ತನಿಖೆಯಲ್ಲಿ ಕ್ಲೀನ್​ಚಿಟ್ ಪಡೆದು ಮತ್ತೆ ಕ್ಯಾಬಿನೆಟ್ ಸೇರಿಕೊಂಡರು. ಈಗ ಪ್ರಶ್ನೆ ಬಂದಿರೋದು ನನ್ನ ಮೇಲೆ ಆಪಾದನೆ ಬಂದಿದ್ದಕ್ಕೆ. ಸಂತೋಷ್​ಗೂ ನನಗೂ ಸಂಬಂಧವೇ ಇಲ್ಲ ಎಂದು ತನಿಖಾಧಿಕಾರಿಗಳ ಗಮನಕ್ಕೆ ತಂದು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.

ಕೋರ್ಟ್ ತ್ವರಿತವಾಗಿ ತೀರ್ಪು ನೀಡಲಿ: ಆತ ಆತ್ಮಹತ್ಯೆ ಯಾಕೆ ಮಾಡಿಕೊಂಡ ಎಂದು ತನಿಖೆಯ ರಿಪೋರ್ಟ್​ನಿಂದ ಗೊತ್ತಾಗಬೇಕು. ಅದು ನನಗೆ ಗೊತ್ತಿಲ್ಲ. ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾಟ್ಸ್​​ಆ್ಯಪ್‌ನಲ್ಲಿ ನನ್ನ ಹೆಸರಿತ್ತು. ಹೀಗಾಗಿ ರಾಷ್ಟ್ರೀಯ ನಾಯಕರ ಅನುಮತಿ ಪಡೆದು ರಾಜೀನಾಮೆ ಕೊಟ್ಟೆ. ಇದೆಲ್ಲ ಕೋರ್ಟ್ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೆ. ನನಗೆ ಜವಾಬ್ದಾರಿ ಕೊಡೋದು, ಮಂತ್ರಿ ಸ್ಥಾನ ಸಿಗೋದು ಬಿಡೋದು ಬೇರೆ. ಕೋರ್ಟ್​ ಕೂಡ ತ್ವರಿತವಾಗಿ ತೀರ್ಪು ನೀಡಲಿ ಎಂದು ಪ್ರಾರ್ಥಿಸುವುದಾಗಿ ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಉಡುಪಿ ಕೃಷ್ಣನ ದರ್ಶನ ಮಾಡಬೇಕು: ಸಿದ್ದರಾಮಯ್ಯ ಈಗಾಗಲೇ ಕನಕ ಗುರು ಪೀಠ, ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದು ಸಂತೋಷವಾಗಿದೆ. ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ವಿಶ್ವಪ್ರಸಿದ್ಧ ಉಡುಪಿ ಕೃಷ್ಣನ ದರ್ಶನವನ್ನೂ ಸಿದ್ದರಾಮಯ್ಯ ಪಡೆಯಬೇಕು. ಕನಕದಾಸರ ಭಕ್ತರಿಗೆ ಮೆಚ್ಚಿ ಕೃಷ್ಣ ದರ್ಶನ ನೀಡಿದ್ದಾನೆ. ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಹೋಗಿಲ್ಲ ಎನ್ನುವ ಅನುಮಾನ ಎಲ್ಲರಂತೆ ನನಗೂ ಇದೆ ಎಂದರು.

ಇದನ್ನೂ ಓದಿ: ಈಶ್ವರಪ್ಪಗೆ ಕ್ಲೀನ್​​ಚಿಟ್: ಬಿ ರಿಪೋರ್ಟ್​​ನಲ್ಲಿ ಇಲ್ಲದ ದಾಖಲೆ ಸಲ್ಲಿಸಲು ಪೊಲೀಸರಿಗೆ‌ ಕೋರ್ಟ್​ ನಿರ್ದೇಶನ

Last Updated : Aug 24, 2022, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.