ETV Bharat / state

ಹೃದಯಾಘಾತದಿಂದ ಗುತ್ತಿಗೆ ಕಾರ್ಮಿಕ ಸಾವು: ಶವವಿಟ್ಟು ಪ್ರತಿಭಟನೆ - contract labor died

ಕಬ್ಬಿಣ ಸಾಗಿಸುತ್ತಿರುವಾಗ ಹೃದಯಘಾತದಿಂದ ಗುತ್ತಿಗೆ ಕಾರ್ಮಿಕನೋರ್ವ ಸಾವನಪ್ಪಿದ್ದಾನೆ. ಭದ್ರಾವತಿಯ ವಿಐಎಸ್ಎಲ್​​ನಲ್ಲಿ ಈ ಘಟನೆ‌ ನಡೆದಿದೆ.

contract labor died
ಹೃದಯಾಘಾತದಿಂದ ಗುತ್ತಿಗೆ ಕಾರ್ಮಿಕ ಸಾವು: ಶವವಿಟ್ಟು ಪ್ರತಿಭಟನೆ
author img

By

Published : Jan 25, 2021, 3:39 PM IST

ಶಿವಮೊಗ್ಗ: ಗುತ್ತಿಗೆ ಕಾರ್ಮಿಕನೊಬ್ಬ ಹಠಾತ್ ಸಾವನ್ನಪ್ಪಿದ ಘಟನೆ ಭದ್ರಾವತಿಯ ವಿಐಎಸ್ಎಲ್​​ನಲ್ಲಿ‌ ನಡೆದಿದೆ.

ಅಂಥೋಣಿ ರಾಜ್ (45) ಮೃತ ಕಾರ್ಮಿಕ. ಇಂದು ಕಾರ್ಖಾನೆಯ ಒಳಗೆ‌ ಕಬ್ಬಿಣ ಸಾಗಿಸುತ್ತಿರುವಾಗ ಹೃದಯಘಾತವಾಗಿತ್ತು . ತಕ್ಷಣ ಇತರೆ ಕಾರ್ಮಿಕರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಈ ವೇಳೆ ಯಾವುದೇ ವಾಹನ ಲಭ್ಯವಾಗಲಿಲ್ಲ. ಅಷ್ಟರಲ್ಲಿಯೇ ಅಂಥೋಣಿ‌ ರಾಜ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು.

contract labor died
ವಿಐಎಸ್​​ಎಲ್​​ ನ ಆಡಳಿತ ಮಂಡಳಿಯ ಜೊತೆ ಶಾಸಕ‌ ಸಂಗಮೇಶ್ ಮಾತುಕತೆ

ನಂತರ ಸ್ಥಳಕ್ಕೆ ಬಂದ ಶಾಸಕ‌ ಸಂಗಮೇಶ್, ವಿಐಎಸ್​​ಎಲ್ ಆಡಳಿತ ಮಂಡಳಿಯ ಜೊತೆ‌ ಮಾತನಾಡಿ, ಗುತ್ತಿಗೆದಾರನಿಂದ ಮೃತ ಕುಟುಂಬಕ್ಕೆ 10 ಲಕ್ಷ ರೂ. ಹಾಗೂ ವಿಐಎಸ್​​ಎಲ್​​ನ ಟೌನ್​ಶಿಪ್​ನಲ್ಲಿ ಕುಟುಂಬದ ಇಬ್ಬರಿಗೆ ಕೆಲಸ ನೀಡುವ ಭರವಸೆ ನೀಡಲಾಯಿತು. ಇದರಿಂದ ಅಂಥೋಣಿ ರಾಜ್ ಕುಟುಂಬಸ್ಥರು ಪ್ರತಿಭಟನೆ ಕೈ ಬಿಟ್ಟು ಶವವನ್ನು‌ ತೆಗೆದುಕೊಂಡು ಹೋಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.