ETV Bharat / state

ಕಾಂಗ್ರೆಸ್​ನವರ ಸಿಎಂ ಆಗುವ ತಿರುಕನ ಕನಸು ನನಸಾಗುವುದಿಲ್ಲ: ಬಿಎಸ್​ವೈ - BSY

ಕಾಂಗ್ರೆಸ್​ನವರ ಮುಖ್ಯಮಂತ್ರಿ ಆಗಬೇಕು ಎನ್ನುವ ತಿರುಕನ ಕನಸು ನನಸಾಗುವುದಿಲ್ಲ. ನಮ್ಮದೇ ಸರ್ಕಾರ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಭವಿಷ್ಯ ನುಡಿದರು.

ಕಾಂಗ್ರೆಸ್​​ನವರ ತಿರುಕನ ಕನಸು ನನಸಾಗುವುದಿಲ್ಲ ಎಂದ ಬಿಎಸ್​ವೈ

author img

By

Published : Aug 14, 2022, 3:20 PM IST

ಶಿವಮೊಗ್ಗ: ಕಾಂಗ್ರೆಸ್​​ನವರ ತಿರುಕನ ಕನಸು ನನಸಾಗುವುದಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿ ಜನರಿಗೆ ಸಾಧನೆಗಳನ್ನು ತಿಳಿಸುವ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ನವರು ಇವುಗಳನ್ನು ಸಹಿಸಿಕೊಳ್ಳಲಾಗದೇ ಜನರಲ್ಲಿ ಗೊಂದಲ, ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅದರಿಂದ ಏನು ಲಾಭ ಆಗುವುದಿಲ್ಲ. ಕಾಂಗ್ರೆಸ್​ನವರ ಮುಖ್ಯಮಂತ್ರಿ ಆಗಬೇಕು ಎನ್ನುವ ತಿರುಕನ ಕನಸು ನನಸಾಗುವುದಿಲ್ಲ, ನಮ್ಮದೇ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆ, ಎಲ್ಲರೂ ಒಟ್ಟಾಗಿ ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್​ನವರ ಸಿಎಂ ಆಗುವ ತಿರುಕನ ಕನಸು ನನಸಾಗುವುದಿಲ್ಲ: ಬಿಎಸ್​ವೈ

ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ ಅವರ ಹೇಳಿಕೆ ಮಹಿಳಾ ಸಮಾಜಕ್ಕೆ ಮಾಡಿರುವ ಅಪಮಾನವಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು, ಯಾವುದೇ ಕಾರಣಕ್ಕೂ ಆ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ, ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೀರ ಸಾವರ್ಕರ್ ಅವರ ಬಗ್ಗೆ ಅಪಮಾನ ಮಾಡಿದವನ ಬಂಧನವಾಗಿದೆ. ಇಂತಹ ವ್ಯಕ್ತಿಗಳಿಗೆ ಶಿಕ್ಷೆಯಾದಾಗ ಮಾತ್ರ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸುವುದಿಲ್ಲ. ಹಾಗಾಗಿ ಯಾರು ಸಹ ಕಾನೂನು ಕೈಗೆ ತಗೆದುಕೊಳ್ಳಬಾರದು. ಶಾಂತ ರೀತಿಯಿಂದ ವರ್ತಿಸಬೇಕು ಎಂದು ಬಿಎಸ್​ವೈ ಸಲಹೆ ನೀಡಿದರು.

ಇದನ್ನೂ ಓದಿ: 75 ಎಲೆಕ್ಟ್ರಿಕ್ ಬಸ್​​ಗಳ ಸಂಚಾರಕ್ಕೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.