ETV Bharat / state

ರೈತರಿಗೆ ಮಾರಕವಾದ ಕೃಷಿ ಕಾಯಿದೆಗಳನ್ನು ರದ್ದುಪಡಿಸಲಿ: ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ - ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಪರಿಶೀಲನೆ

3 ಕೃಷಿ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವೇಳೆ ಕಾಂಗ್ರೆಸ್​ನವರು ನಮ್ಮ ಜೊತೆ ಒಡನಾಟ ಇಟ್ಟುಕೊಂಡು ರದ್ದುಗೊಳಿಸುವ ಆಶ್ವಾಸನೆ ನೀಡಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿರುವುದು ಆತಂಕ ಮೂಡಿಸಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

Kodihalli Chandrasekhara spoke at the press conference.
ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
author img

By

Published : Jul 1, 2023, 8:50 PM IST

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ರದ್ದುಪಡಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, 3 ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ಬಳಿಕ ಕಾಂಗ್ರೆಸ್​ನವರು ನಮ್ಮ ಜೊತೆ ಒಡನಾಟ ಇಟ್ಟುಕೊಂಡು ಬಿಜೆಪಿ ಸರ್ಕಾರ ತಪ್ಪು ಮಾಡಿದೆ. ಸರ್ಕಾರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.

ಈ ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ಆಶಾವಾದ ನಾವು ಇಟ್ಟುಕೊಂಡಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಕೃಷಿ ಕಾಯ್ದೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇದು ಆತಂಕ ಮೂಡಿಸಿದೆ ಎಂದು ತಿಳಿಸಿದರು.

ಕಾರ್ಪೋರೇಟ್ ಕಂಪನಿಗಳು, ಎಂಎನ್ಸಿ ಕಂಪನಿಗಳನ್ನು ಕೃಷಿ ವಲಯಕ್ಕೆ ಕರೆದುಕೊಂಡು ಬರಬೇಕೆಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಈ ಹಿನ್ನೆಲೆ ನರೇಂದ್ರ ಮೋದಿ ಅವರು ಹೇಗೆ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದರೂ, ಅದೇ ರೀತಿ ಸಿದ್ದರಾಮಯ್ಯ ಅವರು ಕೂಡ ಕಾಯ್ದೆಗಳನ್ನು ಕೈಬಿಡಬೇಕೆಂದು ಕೋಡಿಹಳ್ಳಿ ಒತ್ತಾಯಿಸಿದರು.

ರೈತ ಸಂಘದ ಸಂಸ್ಥಾಪಕ ಎಚ್.ಎಸ್. ರುದ್ರಪ್ಪ ದಿನಾಚರಣೆ : 1947ರ ನಂತರ ಸರ್ಕಾರದ ಪ್ರತಿಷ್ಠಿತ ವ್ಯಕ್ತಿಯಾಗಿ, ರಾಜ್ಯ ಸರ್ಕಾರದಲ್ಲಿ ವಿವಿಧ ಮಂತ್ರಿ ಖಾತೆಗಳನ್ನು ಕೃಷಿ ,ತೋಟಗಾರಿಕೆ , ಇಡಬ್ಲುಡಿ, ಅರಣ್ಯ ಮುಜರಾಯಿ ಹಾಗೂ ಸ್ಪೀಕರ್ ಆಗಿ , ಒಮ್ಮೆ ಎಂಪಿ ಯಾಗಿ ಬಹಳ ಜವಾಬ್ದಾರಿ ವ್ಯಕ್ತಿಯಾಗಿ ನಡೆದುಕೊಂಡರು. ನಂತರ ವಯಸ್ಸಾಗಿದೆ ಎಂದು ಸುಮ್ಮನೆ ಕೂಡಲಿಲ್ಲ. ರೈತರ ಪರವಾಗಿ ಒಂದು ಚಳವಳಿ ಕಟ್ಟಲು ಶುರು ಮಾಡಿದರು. ಎನ್ ಡಿ ಸುಂದರೇಶ್ ಅವರ ಜೊತೆಗೂಡಿ ಕಬ್ಬು ಬೆಳೆಗಾರರ ಸಂಘವನ್ನು ಮಾಡಿದರು.

ನಂತರದಲ್ಲಿ 1980 ಜುಲೈ 21 ನರಗುಂದ, ನವಲಗುಂದದಲ್ಲಿ ರೈತರ ಮೇಲೆ ಅಂದಿನ ಕಾಂಗ್ರೆಸ್ ಸರ್ಕಾರ ಆರ್ ಗುಂಡೂರಾವ್ ಮುಖ್ಯಮಂತ್ರಿ ಇದ್ದಾಗ ರೈತರ ಮೇಲೆ ಗುಂಡಿನ ಮಳೆಗರೆದರು. ನವಲಗುಂದ ಹಾಗೂ ನರಗುಂದದಲ್ಲಿ ರೈತರ ಮೇಲೆ ಗುಂಡಿನ ದಾಳಿ ನಡೆದ ವೇಳೆ ಎನ್.ಡಿ. ಸುಂದರೇಶ್ ಹಾಗೂ ಎಚ್.ಎಸ್. ರುದ್ರಪ್ಪ ಅವರು ರೈತರ ನೆರವಿಗೆ ಬಂದಿದ್ದರು. ಅವರ ಕರೆ ಮೇರೆಗೆ ಬೀದಿಗಿಳಿದು ಹೋರಾಟ ಮಾಡಿ, ನಾಡನ್ನು ಸುತ್ತಿ ಸಂಘಟನೆ ಕಟ್ಟಲು ಛಲದಿಂದ ಕೆಲಸ ಮಾಡಿದ್ದೆವು. ಅಂತಹ ಮಹಾನ್ ನಾಯಕರನ್ನು ಸ್ಮರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ. ಹೀಗಾಗಿ ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದಲ್ಲಿ ಜು. 19 ರಂದು ರೈತ ಸಂಘದ ಸಂಸ್ಥಾಪಕ ಎಚ್.ಎಸ್. ರುದ್ರಪ್ಪ ಅವರ ಜನ್ಮದಿನಾಚರಣೆಗೆ ಪೂರ್ವಭಾವಿ ಸಿದ್ದತೆ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಇದೇ ವೇಳೆ ಕೋಡಿಹಳ್ಳಿ ಚಂದ್ರಶೇಖರ್​ ಮಾಹಿತಿ ನೀಡಿದರು.

ಇದನ್ನೂಓದಿ: ಅಕ್ಕಿ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ: ಸಚಿವ ಎಸ್ ಎಸ್ ಮಲ್ಲಿಕಾರ್ಜುನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.