ETV Bharat / state

ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಗೆ ನಾಳೆ ಸಿಎಂ ಚಾಲನೆ - ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಗೆ ನಾಳೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

ಯುವ ನಿಧಿ ವೇದಿಕೆ
ಯುವ ನಿಧಿ ವೇದಿಕೆ
author img

By ETV Bharat Karnataka Team

Published : Jan 11, 2024, 8:48 PM IST

Updated : Jan 11, 2024, 9:54 PM IST

ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಹಾಗೂ ಕೊನೆಯ ಗ್ಯಾರಂಟಿ ಯುವ ನಿಧಿಗೆ ನಾಳೆ ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ. ನಾಳೆ ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಆನ್​ಲೈನ್​ನಲ್ಲಿ ಇದುವರೆಗೂ ಯಾರು ಯುವ ನಿಧಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೋ ಅವರಿಗೆ ನೇರವಾಗಿ ಹಣ ಜಮಾ ಮಾಡಲಿದ್ದಾರೆ.

ಹೀಗಿದೆ ವೇದಿಕೆ ಸಿದ್ಧತೆ: ಪದವಿ ನಿರುದ್ಯೋಗಿಗಳಿಗೆ ಹಾಗೂ ಡಿಪ್ಲೊಮಾ ಮುಗಿಸಿದವರಿಗೆ ಹಣ ಪಾವತಿ ಆಗಲಿದೆ. ನಾಳಿನ ಯುವ ನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್​ನಲ್ಲಿ ವೇದಿಕೆ ಸಿದ್ದವಾಗಿದೆ. ಸುಮಾರು ನೂರು ಅಡಿ ಅಗಲದ ವೇದಿಕೆ ಸಿದ್ದಗೊಳಿಸಲಾಗಿದೆ. ವೇದಿಕೆಯ ಮುಂಭಾಗ ವಿಐಪಿಗಳಿಗೆ ಪ್ರತ್ಯೇಕ ಆಸನ ಸಿದ್ದವಾಗಿದೆ. ಸುಮಾರು 1 ಲಕ್ಷ ಖುರ್ಚಿ ಹಾಕಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 1.50 ಲಕ್ಷ ಜನ ಸೇರುವ ಸಾಧ್ಯತೆ ಇದೆ.

ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆ ಅಲ್ಲದೇ ದಾವಣಗೆರೆ, ಚಿಕ್ಕಮಗಳೂರು, ಶಿರಸಿ,‌ ಕಾರವಾರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಜನ ಆಗಮಿಸಲಿದ್ದಾರೆ.‌ ಇದಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಿಎಂ ಹಾಗೂ ಡಿಸಿಎಂ ವಿಮಾನ ನಿಲ್ದಾಣದಿಂದ ನೇರವಾಗಿ ಫ್ರೀಡಂ ಪಾರ್ಕ್ ವೇದಿಕೆಗೆ ಆಗಮಿಸಲಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ವಿಮಾನ ನಿಲ್ದಾಣಕ್ಕೆ ತೆರಳಿ, ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಿಎಂ, ಡಿಸಿಎಂ ಜೊತೆಗೆ ಕೌಶಲ್ಯಾಭಿವೃದ್ದಿ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಾಥ್ ನೀಡಲಿದ್ದಾರೆ.

ಯೋಜನೆ ಫಲಾನುಭವಿಗಳು ಯಾರು?: ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣ https://sevasindhugs.karnataka.gov.in/ ನಲ್ಲಿ ಅರ್ಜಿ ಸಲ್ಲಿಸಬೇಕು. ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಪದವಿ, ಡಿಪ್ಲೋಮಾಗಳನ್ನು 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡಿರಬೇಕು ಹಾಗೂ 2023ರಲ್ಲಿ ತೇರ್ಗಡೆಯಾಗಿದ್ದು, 180 ದಿವಸಗಳವರೆಗೆ ನಿರುದ್ಯೋಗಿಗಳಾಗಿ ಅಭ್ಯರ್ಥಿಗಳು ಕನಿಷ್ಠ 6 ವರ್ಷ ಕರ್ನಾಟಕದ ನಿವಾಸಿಗಳಾಗಿರಬೇಕು. ಅಂತವರು ಈ ಯೋಜನೆ ಫಲಾನುಭವಿಗಳಾಗುತ್ತಾರೆ.

ಯೋಜನೆಗೆ ಅನರ್ಹರು ಯಾರು? : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು, ಸ್ವ-ಉದ್ಯೋಗಿಗಳು, ಕನಿಷ್ಠ 6 ವರ್ಷ ಕರ್ನಾಟಕ ನಿವಾಸಿಗಳಲ್ಲದವರು ಮತ್ತು ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಕರ್ನಾಟಕ ಹೊರತಾಗಿ ಬೇರೆ ರಾಜ್ಯದಲ್ಲಿ ವ್ಯಾಸಂಗ ಮಾಡಿದವರು, ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಯೋಜನೆಗೆ ಅನರ್ಹರಾಗಿರುತ್ತಾರೆ.

2023ರಲ್ಲಿ ಪದವಿ ಅಥವಾ ಡಿಪ್ಲೋಮಾ ತೇರ್ಗಡೆಯಾದ ನಂತರ ಕನಿಷ್ಠ 6 ತಿಂಗಳವರೆಗೆ ಉದ್ಯೋಗವನ್ನು ಪಡೆಯದ ಮತ್ತು ಕರ್ನಾಟಕದಲ್ಲಿ ವಾಸವಿದ್ದು, ವಿದ್ಯಾರ್ಥಿಯಾಗಿರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ವಾಸವಿರುವ ವಿದ್ಯಾರ್ಥಿ ಎಂದರೆ, ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ ಅಥವಾ ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು.

6 ವರ್ಷಗಳ ವಾಸವಿರುವುದನ್ನು ಎಸ್‌ಎಸ್‌ಎಲ್​ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣಪತ್ರ ಅಥವಾ ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ NIOS(ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್‌ಸ್ಕೂಲಿಂಗ್) ನೀಡಿದ ಎಸ್‌ಎಸ್‌ಎಲ್​ಸಿ ಅಂಕಪಟ್ಟಿಯನ್ನು ಸಹ ವಾಸಸ್ಥಳ ಪರಿಶೀಲನೆಗಾಗಿ ಪರಿಗಣಿಸಲಾಗುವುದು.

ಅಭ್ಯರ್ಥಿಯ ಪದವಿ ಅಥವಾ ಡಿಪ್ಲೋಮಾ ಹೊಂದಿರುವ ಸ್ಥಿತಿಯ ಬಗ್ಗೆ ಪರಿಶೀಲಿಸಲು National Academic Depository (NAD)ಯಲ್ಲಿ ಅಪ್ಲೋಡ್​ ಮಾಡಲಾದ ಅಭ್ಯರ್ಥಿಗಳ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದು.

ಫಲಿತಾಂಶಗಳ ಪ್ರಕಟಣೆಯ ದಿನಾಂಕದಿಂದ ಒಂದು ವಾರದೊಳಗೆ ವಿದ್ಯಾರ್ಥಿಗಳ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರಗಳು ಅಥವಾ ತಾತ್ಕಾಲಿಕ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರಗಳು ಓಂಎಂಆರ್​ನಲ್ಲಿ ಅಪ್ಲೊಡ್ ಮಾಡಲಾಗಿರುವುದನ್ನು ವಿಶ್ವವಿದ್ಯಾಲಯಗಳು ಮತ್ತು ಮಂಡಳಿಗಳು ಖಚಿತಪಡಿಸಿಕೊಳ್ಳಬೇಕು.

ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ಮೊದಲು ಡಿಜಿಲಾಕರ್​ನಲ್ಲಿ ಡಿಜಿ ಲಾಕರ್ ಖಾತೆಯನ್ನು ಸೃಜಿಸುವ ಮೂಲಕ ತಮ್ಮ NAD ಪ್ರಮಾಣಪತ್ರ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು. NAD ಕರ್ನಾಟಕ ಪೋರ್ಟಲ್​ನಲ್ಲಿ ಚಾಟ್‌ಬಾಕ್ಸ್ ಉಪಯುಕ್ತತೆಯನ್ನು ಬಳಸಿಕೊಂಡು, ಅಭ್ಯರ್ಥಿಗಳು ತಮ್ಮ ಡಿಜಿ ಲಾಕರ್​ನಲ್ಲಿ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರಗಳ ಲಭ್ಯತೆಯನ್ನು ಪರಿಶೀಲನೆ ಮಾಡತಕ್ಕದ್ದು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಆಧಾರ್ ಸಂಖ್ಯೆ ಸೇರ್ಪಡೆಯಾದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಹಾಗೂ ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಎಲ್ಲ ಅಗತ್ಯ ದಾಖಲೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮುಂಚಿತವಾಗಿ ಅಂದರೆ ತಾತ್ಕಾಲಿಕ ಪದವಿ ಪತ್ರ ಪಡೆದು 180 ದಿನಗಳು ಪೂರ್ಣಗೊಳ್ಳುವ ಮುಂಚೆ ಅರ್ಜಿ ಸಲ್ಲಿಸತಕ್ಕದ್ದು. ಆದರೆ 180 ದಿನಗಳ ನಂತರ ಸೌಲಭ್ಯವನ್ನು ನೀಡಲಾಗುವುದು. ಅಭ್ಯರ್ಥಿಯು ಅವಳು ಅಥವಾ ಅವನು ನಿರುದ್ಯೋಗಿ ಎಂದು ದೃಢೀಕರಿಸಬೇಕು ಮತ್ತು ಘೋಷಣೆಯನ್ನು ಸಲ್ಲಿಸಬೇಕು.

ಉದ್ಯೋಗ ದೊರಕಿದ ನಂತರ ಅಭ್ಯರ್ಥಿಯು ತಕ್ಷಣವೇ ಮುಚ್ಚಳಿಕೆ ಪತ್ರ ನೀಡತಕ್ಕದ್ದು. ನೋಂದಾಯಿತ ವಿವರಗಳನ್ನು NAD ಮೂಲಕ ಪರಿಶೀಲಿಸಲಾಗುವುದು. ಪದವಿ ಅಥವಾ ಡಿಪ್ಲೋಮಾದ ಪ್ರಮಾಣಪತ್ರಗಳನ್ನು manual ಅಪ್ಲೊಡ್ ಮಾಡಿದರೆ, ಅಪ್ ಲೋಡ್ ಮಾಡಿದ ದಾಖಲೆಗಳ ವಿವರಗಳನ್ನು ಆಯಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಅವರಿಗೆ ರವಾನಿಸಲಾಗುವುದು.

ತಪ್ಪು ಘೋಷಣೆ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಮತ್ತು ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು. ಅಭ್ಯರ್ಥಿಯು ನಿರುದ್ಯೋಗಿ ಎಂದು ಪ್ರತಿ ತಿಂಗಳು ಕಡ್ಡಾಯವಾಗಿ ದೃಢೀಕರಿಸಬೇಕು. ಸೇವಾ ಸಿಂಧು ಪೋರ್ಟಲ್​ನಲ್ಲಿ ಉದ್ಯೋಗಿ ಅಥವಾ ನಿರುದ್ಯೋಗಿಯಾಗಿರುವುದನ್ನು ನಿಗದಿತ ನಮೂನೆಯಲ್ಲಿ ಪ್ರತಿ ತಿಂಗಳ 25 ನೇ ತಾರೀಖು ಘೋಷಣೆ ಮಾಡತಕ್ಕದ್ದು. ಸ್ವೀಕೃತವಾದ ಘೋಷಣೆಯ ಆಧಾರದ ಮೇಲೆ, ಮುಂದಿನ ತಿಂಗಳ ಭತ್ಯೆಯನ್ನು ಪಾವತಿ ಮಾಡಲಾಗುವುದು. ಪ್ರತಿ ತಿಂಗಳು ಘೋಷಣೆ ಮಾಡದಿದ್ದಲ್ಲಿ 90 ದಿನಗಳ ನಂತರ ನಿಷ್ಕ್ರಿಯಗೊಳಿಸಲಾಗುವುದು.

ಅಭ್ಯರ್ಥಿಗಳು ತಾನು ಕರ್ನಾಟಕ ರಹವಾಸಿಯೆಂದು. ಸರ್ಕಾರಿ ಉದ್ಯೋಗದಲ್ಲಿಲ್ಲವೆಂದು, ಸ್ವ-ಉದ್ಯೋಗಿಯಲ್ಲವೆಂದು ಮತ್ತು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿಲ್ಲವೆಂದು ಅರ್ಜಿಯ ಪ್ರಾರಂಭದಲ್ಲಿಯೇ ಘೋಷಣೆ ಮಾಡಬೇಕಾಗುತ್ತದೆ. ಉದ್ಯೋಗ ದೊರಕಿದ ತಕ್ಷಣ ಪ್ರತಿ ತಿಂಗಳು 25ನೇ ತಾರೀಖಿನೊಳಗೆ ಘೋಷಣೆ ಮಾಡುವ ಸಂದರ್ಭದಲ್ಲಿ ಉದ್ಯೋಗಿಯೆಂದು ಘೋಷಿಸಬೇಕು.

ನೋಂದಾಯಿತ ಅಭ್ಯರ್ಥಿಗಳ ದತ್ತಾಂಶವು ಸ್ಕಿಲ್ ಕನೆಕ್ಟ್ ಪೋರ್ಟಲ್‌ಗೆ ಜೋಡಣೆಯಾಗಲಿದ್ದು, ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ದೀರ್ಘಾವಧಿ ಅಥವಾ ಅಲ್ಪಾವಧಿ ತರಬೇತಿಗಳನ್ನು ನೀಡಲು ಮತ್ತು ಈಗಾಗಲೇ ನೋಂದಾಯಿಸಿಕೊಂಡ ಉದ್ಯೋಗದಾತರು ಅಭ್ಯರ್ಥಿಗಳ ದತ್ತಾಂಶವನ್ನು ಬಳಸಿಕೊಂಡು ಅವರಿಗೆ ಉದ್ಯೋಗ ದೊರೆಯುವ ಸೌಲಭ್ಯ ಕೂಡಾ ದೊರೆಯಲಿದೆ.

ಇದನ್ನೂ ಓದಿ: 'ಯುವನಿಧಿ'ಗೆ 7 ದಿನದಲ್ಲಿ ಕೇವಲ 19,800 ಅರ್ಜಿ: ಯೋಜನೆಗೆ ಉತ್ಸುಕತೆ ತೋರದ ನಿರುದ್ಯೋಗಿಗಳು

Last Updated : Jan 11, 2024, 9:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.