ಶಿವಮೊಗ್ಗ: 21ನೇ ಶತಮಾನ ಜ್ಞಾನದ ಶತಮಾನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕಾರೆಹಳ್ಳಿಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ರಜತ ಮಹೋತ್ಸವದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಯಾರು ಭೂಮಿ ಜಾಸ್ತಿ ಇತ್ತು. ಅವರು ಜಗತ್ತನ್ನು ಆಳುತ್ತಿದ್ದರು, ಮತ್ತೊಂದು ಕಾಲ ಬಂದು ಯಾರು ವ್ಯಾಪಾರ ಮಾಡ್ತಾ ಇದ್ದರೋ ಅವರು ಜಗತ್ತನನ್ನು ಆಳುತ್ತಿದ್ದರು.
ಆದರೆ, 21ನೇ ಶತಮಾನ ಭೂಮಿ, ಹಣ ಇದ್ದವರದ್ದು ಅಲ್ಲ, ಇದು ಜ್ಞಾನದ ಶತಮಾನ ಎಂದರು. ಮಕ್ಕಳೇ ನಿಮ್ಮ ಭವಿಷ್ಯದ ಜೊತೆಗೆ ಮನುಕುಲದ ಭವಿಷ್ಯ ರೂಪಿಸುವ ಜ್ಞಾನವನ್ನು ಈ ಸಂಸ್ಥೆಗಳು ನೀಡುತ್ತಿವೆ ಎಂದರು. ಇದುವರೆಗೂ ಶಿಕ್ಷಣ ನೀತಿ ವಿದ್ಯಾರ್ಥಿಗಳ ಕೇಂದ್ರವಾಗಿರಲಿಲ್ಲ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಶಿಕ್ಷಣದ ನೀತಿಬೇಕು.
ನಾವು ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಕೇಂದ್ರೀಕೃತ ಶಿಕ್ಷಣ ನೀತಿ ಅವಶ್ಯಕತೆ ಇದೆ. ಇದಕ್ಕಾಗಿ ನಾವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದೇವೆ. ಇದರಲ್ಲಿ ವಿದ್ಯಾರ್ಥಿ ಕೇಂದ್ರಿಕೃತ ಶಿಕ್ಷಣ ಅಡಗಿದೆ ಎಂದರು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.
ಸುಮಾರು 1.25 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂತಹ ಪುಣ್ಯದ ಕಾರ್ಯ ಇದು. ಅನ್ನದಾನದ ಜೊತೆಗೆ ಶಿಕ್ಷಣ ದಾನವನ್ನು ಸಂಸ್ಥೆ ಮಾಡುತ್ತಿದೆ ಎಂದರು. ಶಿಕ್ಷಣ ನೀಡುವಲ್ಲಿ ಆದಿಚುಂಚನಗಿರಿಯಂತಹ ಸಂಸ್ಥೆ ಪಾತ್ರ ಮಹತ್ವದ್ದು, ಇದನ್ನು ಸರ್ಕಾರ ಕೂಡ ಒಪ್ಪಿಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ನಾಗೇಶ್, ಆರೋಗ್ಯ ಸಚಿವ ಸುಧಾಕರ್, ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಡಾ.ನಿರ್ಮಲಾನಂದ ಸ್ವಾಮೀಜಿ, ಕಾರ್ಯದರ್ಶಿ ಪ್ರಸನ್ನಾನಂದ ಸ್ವಾಮೀಜಿ ಸೇರಿದಂತೆ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.
ಇದನ್ನೂ ಓದಿ: ರೌಡಿ ಗೂಂಡಾಗಳೆಂದರೆ ಕಾಂಗ್ರೆಸ್ ಪಕ್ಷ .. ಸಚಿವ ಅಶ್ವತ್ಥನಾರಾಯಣ ತಿರುಗೇಟು