ETV Bharat / state

ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್: ಸಿಇಎನ್ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು - ಮಕ್ಕಳ ಅಶ್ಲೀಲ ಫೋಟೋ

ಅಮೆರಿಕದ ಸೈಬರ್​ ಟಿಪ್​ ಲೈನ್​ ಸಂಸ್ಥೆ ನೀಡಿದ ಮಾಹಿತಿ ಆಧಾರದಲ್ಲಿ ಶಿವಮೊಗ್ಗದ ಸಿಇಎನ್ ಪೊಲೀಸರು ಮಕ್ಕಳ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಿದ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

CEN Police Station Shivamogga
ಸಿಇಎನ್ ಪೊಲೀಸ್​ ಠಾಣೆ ಶಿವಮೊಗ್ಗ
author img

By

Published : Jan 25, 2023, 12:28 PM IST

ಶಿವಮೊಗ್ಗ: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಜಿಲ್ಲೆಯ ಇಬ್ಬರ ವಿರುದ್ಧ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುವ ಕುರಿತು ಅಮೆರಿಕಾದ ಸೈಬರ್ ಟಿಪ್ ಲೈನ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಶಿವಮೊಗ್ಗದ ಸಿಇಎನ್ ಶಿಕಾರಿಪುರ ಹಾಗೂ ಭದ್ರಾವತಿ ತಾಲೂಕಿನ ತಲಾ ಒಬ್ಬರ ಮೇಲೆ ಕೇಸು ದಾಖಲಿಸಲಾಗಿದೆ.

ಮಕ್ಕಳ ಅಶ್ಲೀಲ ಫೋಟೊ ಹಾಗೂ ವಿಡಿಯೋಗಳನ್ನು ನೋಡುವುದು, ಸಾಮಾಜಿಕ ಜಾಲತಾಣಗಳಲ್ಲಿ ನೋಡುವುದು, ವಿಡಿಯೋ ಕಳುಹಿಸುವುದು ಮತ್ತು ಮಾಡುವುದು ನಿಷೇಧಿತವಾಗಿದೆ. ಹೀಗಿದ್ದರೂ ಫೋಟೋಗಳನ್ನು ಅಪ್ಲೋಡ್ ಮಾಡುವುದನ್ನು ಮಾಡಿದರೆ ಅವರ ವಿರುದ್ಧ ಸೈಬರ್ ಕ್ರೈಂ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಾಗಿದೆ.

ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸರ್ಚ್ ಹಾಗೂ ಅಪ್ಲೋಡ್ ಮಾಡುವವರ ಮೇಲೆ ಅಮೆರಿಕಾದ ಟಿಪ್ ಲೈನ್ ಎಂಬ ಸಂಸ್ಥೆಯು ಹದ್ದಿನ ಕಣ್ಣಿಟ್ಟು, ಗಮನಿಸುತ್ತಿರುತ್ತದೆ. ಈ ಸಂಸ್ಥೆಯು ನೀಡಿದ ಮಾಹಿತಿ ಮೇರೆಗೆ ಶಿವಮೊಗ್ಗ ಸಿಇಎನ್ ಪೊಲೀಸರು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ಅಪ್ಲೋಡ್ ಮಾಡಿದರೆ ಶಿಕ್ಷೆ ಖಂಡಿತ: ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ, ಅದು ಸಾಬೀತಾದರೆ, ಕಾನೂನಿನಡಿ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ ದಂಡವನ್ನು ವಿಧಿಸುವ ಅವಕಾಶವಿದೆ. ಕಳೆದ ತಿಂಗಳು ಸೊರಬ ತಾಲೂಕಿನ ಓರ್ವ ವ್ಯಕ್ತಿ ಸಹ ಶಿಕ್ಷೆಗೆ ಒಳಗಾಗಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ.

ಚಿಕ್ಕೋಡಿ - ತಾಯಿಯ ಆಪರೇಷನ್​ಗೆ ಕೂಡಿಟ್ಟ ಹಣ ಕಳ್ಳತನ ಮಾಡಿದ ಖದೀಮರು: ಚಿಕ್ಕೋಡಿ ತಾಲೂಕಿನ ಕರೋಶಿ, ಬಂಬಲವಾಡ, ಯಾದಗೂಡ, ಮುಗಳಿ ಗ್ರಾಮದಲ್ಲಿ ಮಧ್ಯರಾತ್ರಿ ಸರಣಿ ಮನೆಗಳ್ಳತನ ನಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಕರೋಶಿ ಗ್ರಾಮದಲ್ಲಿ 6 ಮನೆಗೆ ಕನ್ನ ಹಾಕಿದ ಖದೀಮರು ವಿಶಾಲ ಪಾಂಡಾರೆ ಎಂಬುವವರ ಮನೆಯಲ್ಲಿ 2 ಲಕ್ಷ ‌ನಗದು 12 ಗ್ರಾಂ ಬಂಗಾರ ಕಳ್ಳತನ ಮಾಡಿದ್ದಾರೆ.

ವಿಶಾಲ್ ಪಾಂಡಾರೆ ಅವರ ತಾಯಿಯ ಆಪರೇಷನ್​​​ಗೆ ಎಂದು ಕೂಡಿಟ್ಟಿದ್ದ ಹಣವನ್ನೇ ಖದೀಮರು ಕದ್ದೊಯ್ದಿದ್ದಾರೆ. ಕಳ್ಳತನ ನಡೆದಿರುವುದು ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.ಉಳಿದ ಮನೆಗಳಲ್ಲಿ ಸಣ್ಣ ಪುಟ್ಟ ‌ನಗದು ಹಾಗೂ ಬೆಳ್ಳಿ ಆಭರಣಗಳ ಕಳ್ಳತನವಾಗಿದೆ. ರಾತ್ರೋರಾತ್ರಿ ಮನೆಗಳ ಬೀಗ ಒಡೆದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳ್ಳರ ಚಲನವಲನ ಕರೋಶಿ ಗ್ರಾಮದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಚಿಕ್ಕೋಡಿ ಉಪವಿಭಾಗದಲ್ಲಿ ಕಳ್ಳತನ: ಚಳಿಗಾಲದ ಬಂತು ಎಂದರೆ ಚಿಕ್ಕೋಡಿ ಉಪವಿಭಾಗದಲ್ಲಿ ನಿರಂತರ ದೇವಸ್ಥಾನ ಮನೆಗಳ್ಳತನ ಪ್ರಕರಣ ನಡೆಯುತ್ತವೆ. 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ, ಇದುವರೆಗೂ ಸರಣಿ ಮನೆಗಳ್ಳತನ ನಡೆಸುವ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ. ಇದರಿಂದ ಕೆಲವು ಸಾರ್ವಜನಿಕರು ಪೊಲೀಸ್ ಇಲಾಖೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ನುಗ್ಗಿದ್ದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.