ಶಿವಮೊಗ್ಗ : ಫೇಸ್ಬುಕ್ ಮೆಸೆಂಜರ್ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ಕಳುಹಿಸಿದ ವ್ಯಕ್ತಿಯೋರ್ವನನ್ನು ಶಿವಮೊಗ್ಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ನಿವಾಸಿ ರಘು ನಾಯ್ಕ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ರಘು ನಿರ್ಬಂಧಿತ ಮಕ್ಕಳ ಅಶ್ಲೀಲ ವಿಡಿಯೋವನ್ನು ನೋಡಿದ್ದಲ್ಲದೇ ಅದನ್ನು ತನ್ನ ಫೇಸ್ಬುಕ್ ಮೆಸೆಂಜರ್ ಮೂಲಕ ಫಾರ್ವರ್ಡ್ ಮಾಡಿದ್ದನು. ಈ ಕುರಿತು ಫೇಸ್ಬುಕ್ನ ಸೈಬರ್ ಟಿಪ್ಲೈನ್ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿತ್ತು.
ಕೇಂದ್ರ ಹಾಗೂ ರಾಜ್ಯದ ಐಟಿ ತಂಡ ನೀಡದ ಮಾಹಿತಿ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಶಿವಮೊಗ್ಗದ ಸಿಇಎನ್ ಪೊಲೀಸರು ಐಟಿ ಕಾಯ್ದೆಯ ಕಲಂ 67(ಬಿ) ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಸೈಬರ್ ಟಿಪ್ಲೈನ್ನಿಂದ ಬಂದ ಪ್ರಥಮ ಮಾಹಿತಿ : ಮಕ್ಕಳ ಅಶ್ಲೀಲ ವಿಡಿಯೋ ಅಥವಾ ಚಿತ್ರಗಳನ್ನು ಅಂರ್ತಜಾಲದ ಮೂಲಕ ಹುಡುಕುವುದು, ಶೇಖರಿಸಿಡುವುದು ಹಾಗೂ ಫಾರ್ವರ್ಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಪರಾಧ. ಈ ಹಿನ್ನೆಲೆಯಲ್ಲಿ ಆರೋಪಿ ರಘನನ್ನು ಬಂಧಿಸಲಾಗಿದೆ.