ETV Bharat / state

ಜನರನ್ನು ತುಂಬಿಕೊಂಡು ರಾಜಸ್ಥಾನಕ್ಕೆ ಹೊರಟಿದ್ದ ಟ್ರಕ್ ಹಿಡಿದ ಗ್ರಾಮಸ್ಥರು - ರಾಜಸ್ಥಾನ ಟ್ರಕ್​

ಟ್ರಕ್​ನಲ್ಲಿ ಸುಮಾರು 40ಕ್ಕೂ ಹೆಚ್ಚು ಜನರನ್ನು ಕರ್ನಾಟಕದಿಂದ ರಾಜಸ್ಥಾನಕ್ಕೆ ತುಂಬಿಕೊಂಡು ಹೋಗುತ್ತಿದ್ದ ವಾಹನವನ್ನು ಗೊಂದಿ ಚಟ್ನಳ್ಳಿ ಗ್ರಾಮಸ್ಥರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

truck
ಟ್ರಕ್
author img

By

Published : May 13, 2020, 11:04 AM IST

ಶಿವಮೊಗ್ಗ: ವಸ್ತುಗಳನ್ನು ಸಾಗಿಸುವ ಟ್ರಕ್​ನಲ್ಲಿ ಮನುಷ್ಯರನ್ನು ತುಂಬಿಕೊಂಡು ಹೋಗುತ್ತಿದ್ದ ರಾಜಸ್ಥಾನದ ಟ್ರಕ್​ ಅನ್ನು ಶಿವಮೊಗ್ಗ ಹೊರವಲಯದ ಗೊಂದಿ ಚಟ್ನಳ್ಳಿ ಗ್ರಾಮಸ್ಥರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿನ್ನೆ ರಾತ್ರಿ ಗ್ರಾಮದ ಈಶ್ವರ ರೈಸ್ ಮಿಲ್ ಬಳಿ ನಿಂತಿದ್ದ ಟ್ರಕ್ ಮೇಲೆ ಅನುಮಾನಗೊಂಡ ಗ್ರಾಮದ ಕೆಲ ಯುವಕರು ಟ್ರಕ್ ಅನ್ನು ತಡೆದು ವಿಚಾರಿಸಿದಾಗ ಟ್ರಕ್ ನಲ್ಲಿ ಜನರು ಇರುವುದು ಕಂಡು ಬಂದಿದೆ. ಟ್ರಕ್​ನಲ್ಲಿ ಸುಮಾರು 40 ಜನ ಇದ್ದು, ಇವರೆಲ್ಲ ತಮ್ಮ ಸ್ವಂತ ಊರಿಗೆ ಹೋಗಲು ಟ್ರಕ್ ಏರಿದ್ದರು ಎನ್ನಲಾಗಿದೆ.

ಜನರನ್ನು ತುಂಬಿಕೊಂಡು ರಾಜಸ್ಥಾನಕ್ಕೆ ಹೊರಟಿದ್ದ ಟ್ರಕ್

ಇದು ರಾಜಾಸ್ಥಾನ ಮೂಲದ ಟ್ರಕ್ ಆಗಿದ್ದು, ಇವರೆಲ್ಲ ಅಲ್ಲಿಗೆ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ರಾಜಸ್ಥಾನದಿಂದ ಕರ್ನಾಟಕಕ್ಕೆ ಸಾಮಗ್ರಿ ತೆಗೆದುಕೊಂಡು ಬಂದಿದ್ದ ವಾಹನ ವಾಪಸ್ ಹೋಗುವಾಗ ಟ್ರಕ್ ಡ್ರೈವರ್ ಎಲ್ಲರನ್ನೂ ರಾಜಸ್ಥಾನಕ್ಕೆ ಕರೆದು ಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ಗ್ರಾಮದ ಯುವಕರು ಟ್ರಕ್​ ತಡೆದು ವಿಚಾರಿಸಿದಾಗ ಅದರಲ್ಲಿ ಜನರು ಇರವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಲಾರಿಯನ್ನು ಸಹ್ಯಾದ್ರಿ ಕಾಲೇಜಿನ ಕೋವಿಡ್​ ಪರೀಕ್ಷಾ ಕೇಂದ್ರಕ್ಕೆ ಕರೆದು ಕೊಂಡು ಹೋಗಿ ಬಿಟ್ಟಿದ್ದಾರೆ. ಇದೀಗ ಟ್ರಕ್​ನಲ್ಲಿದ್ದ ಎಲ್ಲರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್​ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.