ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ನೂತನ ಅಧ್ಯಕ್ಷರ ಆಯ್ಕೆ ನಡೆದಿದ್ದು, ಶಿಕಾರಿಪುರದ ಎಂ.ಬಿ. ಚನ್ನವೀರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಸೋಮವಾರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಭೆ ಕರೆಯಲಾಗಿತ್ತು. ಆದರೆ, ನಾಮಪತ್ರ ಸಲ್ಲಿಸಿದ್ದ ಯಾರೊಬ್ಬರೂ ಹಾಜರಾಗದಿದ್ದರಿಂದ ಚುನಾವಣಾ ಸಭೆ ಅಲ್ಲಿಗೆ ನಿಂತಿತ್ತು. ಇಂದು ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮುಂದುವರೆಯಿತು.
ನಾಮಪತ್ರ ಸಲ್ಲಿಸಿದ್ದ ಷಡಕ್ಷರಿ ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದುಕೊಂಡರು. ಈ ವೇಳೆಗಾಗಲೇ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ಆಯ್ಕೆಯಾಗಬೇಕು ಎಂದು ಸಭೆ ನಡೆಸಿ ತೀರ್ಮಾನ ಮಾಡುವಷ್ಟರಲ್ಲಿ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಮುಗಿದ ಕಾರಣ ಕೊನೆಯಲ್ಲಿ ಕಣದಲ್ಲಿ ಇಬ್ಬರು ಮಾತ್ರ ಉಳಿದುಕೊಂಡಿದ್ದರು.
ಕೊನೆಗೆ ಯೋಗೇಶ್ ಗೌಡ ಸಹ ಚನ್ನವೀರಪ್ಪನವರಿಗೆ ಮತ ಹಾಕುವ ಮೂಲಕ ಅಧ್ಯಕ್ಷ ಹಾದಿಯನ್ನು ಸುಗಮಗೊಳಿಸಿದರು. ನಂತರ ಚುನಾವಣಾಧಿಕಾರಿ ನಾಗೇಂದ್ರ ಹೊನ್ನಾಳಿ ಅವರು ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾಗಿ ಚನ್ನವೀರಪ್ಪನವರ ಹೆಸರನ್ನು ಘೋಷಿಸಿದರು. ನಂತರ ಮಾತನಾಡಿದ ಅಧ್ಯಕ್ಷ ಚನ್ನವೀರಪ್ಪನವರು, ಪ್ರತಿ ಸಾರಿಯಂತೆ ಈ ಬಾರಿಯೂ ನಮ್ಮಲ್ಲಿ ಆಯ್ಕೆ ಅವಿರೋಧವಾಗಿದೆ. ಮುಂದೆ ಬ್ಯಾಂಕ್ ನ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು. ಈ ವೇಳೆ ಡಿಸಿಸಿ ಬ್ಯಾಂಕ್ನ ಎಲ್ಲಾ ನಿರ್ದೇಶಕರು ಹಾಜರಿದ್ದರು.