ETV Bharat / state

ಜೀರ್ಣೋದ್ದಾರವಾದ ಚಂಪಕ ಸರಸ್ಸು ಲೋಕಾರ್ಪಣೆ : ರಾಕಿಂಗ್ ಸ್ಟಾರ್ ಯಶ್‌ರ ಯಶೋ ಮಾರ್ಗದಿಂದ ಪುನಶ್ಚೇತನ

author img

By

Published : Jun 5, 2022, 8:30 PM IST

ಜಲತಜ್ಞ ಶಿವಾನಂದ ಕಳವೆ ಅವರ ಕರೆಯ ಮೇರೆಗೆ ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ಇದರ ಜೀರ್ಣೋದ್ದಾರ ಕಾರ್ಯಕ್ಕೆ ಕೈ ಹಾಕಲಾಗಿತ್ತು. ಸರಸ್ಸುವಿನಲ್ಲಿ ಗಿಡ-ಗಂಟಿ ಬೆಳೆದು ಸೀಳು ಬಿಟ್ಟು, ಬಿದ್ದು ಹೋಗಿದ್ದ ಕಲ್ಲುಗಳನ್ನು ಸ್ವಚ್ಛಗೊಳಿಸಿ, ಜೀರ್ಣೋದ್ದಾರ ಮಾಡಲಾಗಿದೆ.

ಜೀರ್ಣೋದ್ದಾರವಾದ ಚಂಪಕ ಸರಸ್ಸು ಲೋಕಾರ್ಪಣೆ
ಜೀರ್ಣೋದ್ದಾರವಾದ ಚಂಪಕ ಸರಸ್ಸು ಲೋಕಾರ್ಪಣೆ

ಶಿವಮೊಗ್ಗ : ಪಾಳು ಬಿದ್ದು ಸುಸೈಡ್ ಪಾಯಿಂಟ್ ಆಗಿದ್ದ ಕೆಳದಿ ಅರಸರಿಂದ ನಿರ್ಮಾಣದ ಚಂಪಕ ಸರಸ್ಸುವನ್ನು ನಟ ಯಶ್ ಅವರ ಯಶೋ ಮಾರ್ಗದ ಮೂಲಕ ಜೀರ್ಣೋದ್ಧಾರ ನಡೆಸಿ ಇಂದು ಲೋಕಾರ್ಪಣೆ ಮಾಡಲಾಯಿತು. ಸಾಗರ ತಾಲೂಕು ಆನಂದಪುರಂ ಬಳಿ ಚಂಪಕ ಸರಸ್ಸು ಕೆರೆಯನ್ನು ಕೆಳದಿಯ ಸೋಮಶೇಖರ ನಾಯ್ಕ ನಿರ್ಮಿಸಿದರು ಎಂದು ಇತಿಹಾಸ ತಿಳಿಸುತ್ತದೆ. ಸಾಮ್ರಾಜ್ಯ ವಿಸ್ತರಣೆಗಾಗಿ ಬಂದಾಗ ಆನಂದಪುರಂ ಬಳಿ ಮಹಿಳೆಗೆ ಮನಸೋತು ಆಕೆಯನ್ನು ಪ್ರೀತಿಸುತ್ತಾನೆ. ಆಕೆಯ‌ ನೆನಪಿಗೆ ಈ ಚಂಪಕ ಸರಸ್ಸು ನಿರ್ಮಿಸಿದರು ಎಂದು ತಿಳಿದು ಬರುತ್ತದೆ.

ಇದು ಚೌಕಾಕಾರದ ಒಂದು ಸುಂದರ ಕೊಳವಾಗಿದೆ. ಕಲ್ಲಿನಿಂದ ನಿರ್ಮಿಸಲಾದ ಇಲ್ಲಿ ಸುಂದರ ಕೆತ್ತನೆಯನ್ನು ಒಳಗೊಂಡಿದೆ. ಚಂಪಕ ಸರಸ್ಸು ಮುಂಭಾಗ ಎರಡು ಆನೆಗಳು ಸ್ವಾಗತ ನೀಡುತ್ತವೆ. ಇದರ ಮಧ್ಯ ಭಾಗದಲ್ಲಿ ಶಿವನ ಲಿಂಗವಿದೆ. ಅಲ್ಲಿಗೆ ಸಾಗಲು ಕಲ್ಲಿನ ದಾರಿ ಇದೆ. ಅತ್ಯಂತ ಸುಂದರವಾದ ಚಂಪಕ ಸರಸ್ಸು ಆಡಳಿತ ನಡೆಸುವವರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಜಲತಜ್ಞ ಶಿವಾನಂದ ಕಳವೆ ಅವರ ಕರೆಯ ಮೇರೆಗೆ ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದರು. ಸರಸ್ಸುವಿನಲ್ಲಿ ಗಿಡ ಗಂಟಿ ಬೆಳೆದು ಸೀಳು ಬಿಟ್ಟು, ಬಿದ್ದು ಹೋಗಿದ್ದ ಕಲ್ಲುಗಳನ್ನು ಸ್ವಚ್ಛಗೊಳಿಸಿ, ಜೀರ್ಣೋದ್ಧಾರ ಮಾಡಲಾಗಿದೆ. ಈ ಚಂಪಕ ಸರಸ್ಸುವನ್ನು ಇಂದು ಜಲತಜ್ಞರಾದ ಶಿವಾನಂದ ಕಳವೆ ಅವರು ಉದ್ಘಾಟಿಸಿದರು. ಸರಸ್ಸು ಆವರಣದಲ್ಲಿ ಕೆಳದಿ ಅರಸ ಇತಿಹಾಸಗಾರರಾದ ಗುಂಡಾಜೋಯಿಸ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಜೀರ್ಣೋದ್ದಾರವಾದ ಚಂಪಕ ಸರಸ್ಸು ಲೋಕಾರ್ಪಣೆ

ಯಶ್ ಅವರ ದೂರದೃಷ್ಟಿ ಹಾಗೂ ಪರಿಸರ, ಜಲಮೂಲಗಳ ರಕ್ಷಣೆಯ ಬಗ್ಗೆ ಆಸಕ್ತಿಯಿಂದ ಚಂಪಕ ಸರಸ್ಸು ಮತ್ತೆ ನಮಗೆ ಲಭ್ಯವಾಗಿದೆ ಎಂದು ಶಿವಾನಂದ ಕಳವೆ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ ಇತಿಹಾಸ ಪರಂಪರೆ ಉಳಿಸಿ ಸಮಿತಿ ಅವರಿಗೆ ಸನ್ಮಾನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸತೀಶ್ ಶಿವಣ್ಣ, ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಜೇಂದ್ರ ಗೌಡ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್‌ನ ರವಿಕುಮಾರ್ ಬಿ ಡಿ ಇತರರಿದ್ದರು.

ಓದಿ: ದಟ್ಟ ಅರಣ್ಯದ ನಡುವೆ ಪುಟ್ಟ ಶಾಲೆ: ಪಾಠದ ಜೊತೆ ಪರಿಸರ ಜ್ಞಾನ ನೀಡುವ ದೇಗುಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.