ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರೇ ಒಂದು ಶಕ್ತಿ ಇದ್ದಂತೆ. ಯಡಿಯೂರಪ್ಪಗೆ ಕಾರ್ಯಕರ್ತರಾಗಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸವಾಲುಗಳ ನಡುವೆ ಕೆಲಸ ಮಾಡಿದ್ದಾರೆ. ಈ ಕೆಲಸವನ್ನು ತೃಪ್ತಿದಾಯಕವಾಗಿ ಎದೆಗುಂದದೆ ಮಾಡಿದ್ದಾರೆ. ಪ್ರವಾಹ, ಕೊರೊನಾ ಹಾಗೂ ರಾಜಕೀಯ ಸವಾಲುಗಳನ್ನು ಎದುರಿಸಿ ಕೆಲಸ ಮಾಡಿದ್ದಾರೆ ಎಂದು ಬಿಎಸ್ವೈ ಆಡಳಿತವನ್ನ ಹೊಗಳಿದ್ದಾರೆ.
ಯಡಿಯೂರಪ್ಪ45 ವರ್ಷಗಳಿಂದ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಇಷ್ಟು ವರ್ಷ ನಮ್ಮ ಸಂಘಟನೆ ಯಡಿಯೂರಪ್ಪಗೆ ಎಲ್ಲ ಅವಕಾಶವನ್ನು ನೀಡಿದೆ. ಆದರೆ, ಪಕ್ಷದ ತೀರ್ಮಾನದಂತೆ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಉತ್ತಮವಾದ ಅವಕಾಶವಿದೆ ಎಂದು ತಿಳಿದ ಪಕ್ಷದ ವರಿಷ್ಠರು ಯುವಕರಿಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ಸಿಎಂ ಆಗಿ ಬಸವರಾಜ ಬೊಮ್ಮಯಿ ಅವರಿಗೆ ಅವಕಾಶ ನೀಡಲಾಗಿದೆ ಎಂದರು.
ಸಿಎಂ ಅಗಿ ಅಧಿಕಾರ ಸ್ವೀಕಾರ ಮಾಡಿರುವ ಬಸವರಾಜ ಬೊಮ್ಮಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಪ್ರದೇಶಗಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೆಹಲಿಗೆ ಹೋಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಷ್ಟರಲ್ಲಿ ವಿರೋಧ ಪಕ್ಷಗಳು ಸಿಎಂ ವಿರುದ್ದ ಟೀಕಿಸುವುದು ಸರಿಯಲ್ಲ ಎಂದರು.
ನಮ್ಮ ಜಿಲ್ಲೆಯಲ್ಲಿ ಈಶ್ವರಪ್ಪ, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ಹಾಲಪ್ಪ ಹಾಗೂ ಅಶೋಕ ನಾಯ್ಕ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಗೆ ಮಂತ್ರಿಗಿರಿಯಲ್ಲಿ ಹೆಚ್ಚಿನ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತೆನೆ ಎಂದರು.
ಓದಿ: 'ನನ್ನನ್ನು ಸಂಪುಟದಿಂದ ಬಿಡಬಹುದು, ಸೇರಿಕೊಳ್ಳಬಹುದು, ವರಿಷ್ಠರ ತೀರ್ಮಾನಕ್ಕೆ ಬದ್ಧ'