ETV Bharat / state

ಕಾಂಗ್ರೆಸ್​​ನ ಎಸ್​ಸಿ, ಎಸ್​ಟಿ ಸಮಾವೇಶಕ್ಕೆ ಬೆಲೆ ಎಲ್ಲಿದೆ?: ಬಿಎಸ್​ವೈ

ಮೀಸಲಾತಿ ಬಗ್ಗೆ ಯಾವುದೇ ಗೊಂದಲವಿಲ್ಲ. ಎಸ್​ಸಿ, ಎಸ್​ಟಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ‌. ಅದರಂತೆ ನಾವು ಮುಂದೆ ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿದರು.

BS Yediyurappa
ಬಿ.ಎಸ್.ಯಡಿಯೂರಪ್ಪ
author img

By

Published : Jan 9, 2023, 1:04 PM IST

ಕಾಂಗ್ರೆಸ್‌ ಎಸ್‌ಸಿ ಎಸ್‌ಟಿ ಸಮಾವೇಶದ ಬಗ್ಗೆ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ

ಶಿವಮೊಗ್ಗ: ನಿನ್ನೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ನಡೆಸಿದ ಎಸ್​ಸಿ, ಎಸ್​ಟಿ ಸಮಾವೇಶಕ್ಕೆ ಬೆಲೆ ಎಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾಡುವ ಪ್ರತಿ ಕೆಲಸಕ್ಕೂ ಟೀಕೆ ಮಾಡ್ತಾರೆ. ಎಸ್​ಸಿ, ಎಸ್​ಟಿ ಬಗ್ಗೆ ಮಾಡಿರುವ ತೀರ್ಮಾನವನ್ನು ತಿರುಚಿ ಮನಬಂದಂತೆ ಒಬ್ಬ ರಾಷ್ಟ್ರೀಯ ಅಧ್ಯಕ್ಷರಾಗಿ ‌ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಅದು ಎಷ್ಟು ಸರಿಯೆಂಬುದು ಅರ್ಥವಾಗದ ವಿಷಯ. ನಾವು ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದರು.

ನಮ್ಮ ನಿಲುವು ಸ್ಪಷ್ಟ: ಕಾಂಗ್ರೆಸ್​​ನವರು ವಾಸ್ತವ ಅರಿತು ಮಾತನಾಡಲಿ. ನೀವಂತೂ ಮಾಡಲಿಲ್ಲ. ನಾವು ಮಾಡಿದನ್ನು ಸ್ವಾಗತಿಸಬೇಕಿತ್ತು. ಟೀಕೆ, ಟಿಪ್ಪಣಿ ಮಾಡುವುದು ಅವರಿಗೆ ಗೌರವ ತರುವಂತದ್ದಲ್ಲ. ಮೀಸಲಾತಿ ಬಗ್ಗೆ ಯಾವುದೇ ಗೊಂದಲವಿಲ್ಲ. ಎಸ್​ಸಿ, ಎಸ್​ಟಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ‌. ಅದರಂತೆ ನಾವು ಮುಂದೆ ಹೋಗುತ್ತೇವೆ ಎಂದು ಹೇಳಿದರು.

ಸ್ಯಾಂಟ್ರೋ ರವಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದು ಕೊಂಡಿದ್ದೇನೆ. ಸಿಎಂ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಗಿ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಸಚಿವರುಗಳು ಭಾಗಿಯಾಗಿರುವ ಕುರಿತು ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ ವಿಚಾರ: ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಂಪುಟ ವಿಸ್ತರಣೆ ಆಗುತ್ತದೆ ಎಂಬ ಮಾಹಿತಿ ಇದೆ. ಈಶ್ವರಪ್ಪ ಅವರು ಸಂಪುಟ ಸೇರಬೇಕೆಂಬ ಅಪೇಕ್ಷೆ ನಮಗೂ ಇದೆ ಎಂದು ಪ್ರತಿಕ್ರಿಯಿಸಿದರು.

ಕೋಟೆ ನಾಡಲ್ಲಿ ನಡೆದ ಕಾಂಗ್ರೆಸ್‌ ಐಕ್ಯತಾ ಸಮಾವೇಶ: ಚಿತ್ರದುರ್ಗದಲ್ಲಿ ನಿನ್ನೆ ಎಸ್​ಸಿ, ಎಸ್​ಟಿ ಐಕ್ಯತಾ ಸಮಾವೇಶ ನಡೆಯಿತು. ಎಸ್.ಜೆ.ಎಂ.ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಲಕ್ಷಾಂತರ ಜನರನ್ನು ಸೇರಿಸಿ ಮಧ್ಯ ಕರ್ನಾಟಕದಲ್ಲಿ ನಡೆದ ಈ ಸಮಾವೇಶದಲ್ಲಿ ಮುಂಬರುವ ಚುನಾವಣೆಗೆ ದಲಿತರ ಮತಗಳನ್ನು ಸೆಳೆಯುವ ಕಸರತ್ತು ನಡೆಯಿತು. ರಾಜ್ಯದ 24 ವಿಧಾನಸಭಾ ಕ್ಷೇತ್ರಗಳಿಂದಲೂ ಜನರನ್ನು ಕರೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಚಿತ್ರದುರ್ಗದಲ್ಲಿ ಸಮಾವೇಶ ಆಯೋಜಿಸಲಾಗಿತ್ತು.

ಇದನ್ನೂ ಓದಿ: ಕೋಟೆನಾಡಲ್ಲಿಂದು ಕಾಂಗ್ರೆಸ್‌​ ಎಸ್​ಸಿ, ಎಸ್​ಟಿ ಬೃಹತ್‌ ಐಕ್ಯತಾ ಸಮಾವೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.