ಶಿವಮೊಗ್ಗ: ಕೊಳವೆ ಬಾವಿಯ ಮೋಟಾರ್ ಆನ್ ಮಾಡಲು ಹೋಗಿದ್ದ ಸಹೋದರರಿಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಹಾರೋಗೊಪ್ಪ ಬಿ ಕ್ಯಾಂಪ್ನಲ್ಲಿ ನಡೆದಿದೆ. ಶೇಖರ್ ನಾಯ್ಕ(35) ಹಾಗೂ ಕುಮಾರಸ್ವಾಮಿ ನಾಯ್ಕ(35) ಮೃತರು.
ಇವರಿಬ್ಬರು ತಮ್ಮ ಹೊಲ ಸರ್ವೆ ನಂಬರ್ 52/12ರಲ್ಲಿ ಕೊಳವೆಬಾವಿಯ ಸ್ವಿಚ್ ಆನ್ ಮಾಡಲು ಹೋಗಿದ್ದಾರೆ. ಗಾಳಿ ಮಳೆಗೆ ಸ್ವಿಚ್ ಬೋರ್ಡ್ ನೆಲಕ್ಕೆ ಬಿದ್ದಿತ್ತು. ಈ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರಿಬ್ಬರು ಅಣ್ಣ-ತಮ್ಮಂದಿರ ಮಕ್ಕಳೆಂದು ತಿಳಿದುಬಂದಿದೆ.
ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಡಗು: ಮದ್ಯದ ಅಮಲಿನಲ್ಲಿ ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡ ಭೂಪ!