ಶಿವಮೊಗ್ಗ: ಬ್ರಿಟನ್ ಪ್ರಜೆಗೆ (Britain citizen) ಭದ್ರಾವತಿಯಲ್ಲಿ ನಾಮಕರಣ ಶಾಸ್ತ್ರ (Naming ceremony) ಹಾಗು ಲಿಂಗಧಾರಣೆ ನಡೆಯಿತು.
ವಿವರ:
ಭದ್ರಾವತಿ ಮೂಲದ ಪುನೀತ್ ಹಾಗೂ ರಾಧಿಕಾ ದಂಪತಿ ಲಂಡನ್ನಲ್ಲಿ ನೆಲೆಸಿದ್ದಾರೆ. ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲಂಡನ್ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಕಳೆದ ಆರು ತಿಂಗಳ ಹಿಂದೆ ಲಂಡನ್ನಲ್ಲಿಯೇ ಹೆಣ್ಣು ಮಗು ಜನಿಸಿದೆ. ಇದೀಗ ಮಗುವಿನ ನಾಮಕರಣ ಭದ್ರಾವತಿಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಸಲಾಯಿತು.
![Britain citizen naming ceremony done in bhadravathi](https://etvbharatimages.akamaized.net/etvbharat/prod-images/kn-smg-01-birteshparje-namakarana-7204213_15112021131501_1511f_1636962301_117.jpg)
ಮಗುವಿಗೆ ಲಿಂಗಾಯತ ಧರ್ಮದಂತೆ ಲಿಂಗಧಾರಣೆ ನಡೆಯಿತು. ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ (Basava Marulasidda Swamiji) ಲಿಂಗಧಾರಣೆ ಮಾಡಿ ಮಗುವಿಗೆ 'ನಿಧಿ' ಎಂದು ಹೆಸರಿಟ್ಟರು.
ಪುನೀತ್ ದಂಪತಿ ವಿದೇಶಕ್ಕೆ ಹೋಗಿದ್ದರೂ ಕೂಡಾ ಭಾರತೀಯ ಸಂಸ್ಕೃತಿಯಂತೆ ಮಗುವಿಗೆ ಇಲ್ಲಿಯೇ ನಾಮಕರಣ ಮಾಡಿದ್ದು, ಬ್ರಿಟನ್ ಪ್ರಜೆ ಭಾರತಕ್ಕೆ ಬಂದು 'ನಿಧಿ'ಯಾಗಿದ್ದಾಳೆ.
ಇದನ್ನೂ ಓದಿ:RRRಗೆ ಹೆದರಿ ಚಿತ್ರ ಮುಂದಕ್ಕೆ ತಳ್ಳಿದ ಗಂಗೂಬಾಯಿ