ಶಿವಮೊಗ್ಗ: ನಗರದ ಶಿರಾಳಕೊಪ್ಪದ ಗೋರಿಯ ಚಾದರದಲ್ಲಿ ನಿನ್ನೆ ರಾತ್ರಿ ಉಸಿರಾಡಿದ ಅನುಭವ ಉಂಟಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ರಂಜಾನ್ ಸಮಯದಲ್ಲಿ ಇಂತಹ ಘಟನೆ ನಡೆದಿರುವು ಸ್ಥಳೀಯರಲ್ಲಿ ಕುತೂಹಲ ಕೆರಳಿಸಿದೆ.
ಶಿರಾಳಕೊಪ್ಪ ಪಟ್ಟಣದ ಹಜ್ರತ್ ಸೈಯದ್ ಶಾಹಿದ್ ಅಲಿ ಶಾ ಖಾದ್ರಿ ದರ್ಗಾದಲ್ಲಿ ಗೋರಿಯ ಮೇಲೆ ಹೊದಿಸಿದ್ದ ಚಾದರದಲ್ಲಿ ಉಸಿರಾಟದ ಅನುಭವವಾಗಿದೆ. ಈ ದರ್ಗಾಗೆ ನೂರಾರು ವರ್ಷದ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಇಂತಹ ವಿಸ್ಮಯದ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ವಿಚಾರ ಪಟ್ಟಣದಲ್ಲಿ ಹರಡುತ್ತಿದ್ದಂತಯೇ ಜನ ದರ್ಗಾದ ಬಳಿ ಆಗಮಿಸಲು ಆರಂಭಿಸಿದ್ದಾರೆ. ಆದರೆ ಪೊಲೀಸರು ಜನರನ್ನು ನಿಯಂತ್ರಿಸಿ ವಾಪಸ್ ಕಳುಹಿಸಿದ್ದಾರೆ.