ಶಿವಮೊಗ್ಗ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದರು. ಪಿಎಸ್ಐ ಪರೀಕ್ಷೆ ನಡೆದ ಕೇಂದ್ರ ಯಾರದ್ದು ರೀ? ಅದು ಯಾರದ್ದು ಅಂತಾ ನೀವ್ಯಾರು ಹೇಳೋದೇ ಇಲ್ಲ. ಅದರ ಬದಲು ಕಾಂಗ್ರೆಸ್ನವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯವರು ಅವರ ತಪ್ಪಿನಿಂದ ಬಚಾವಾಗಲು ಹೀಗೆ ಗೂಬೆ ಕೂರಿಸಬಾರದು ಎಂದರು.
ಈ ಹಿಜಾಬ್, ಹಲಾಲ್, ಆಜಾನ್ ಸಮಸ್ಯೆ ಯಾರಿಂದ ಆರಂಭವಾಯಿತು?. ರಾಜ್ಯದಲ್ಲಿ ಅಶಾಂತಿ ಹುಟ್ಟು ಹಾಕಿದವರು ಯಾರು? ಧಾರ್ಮಿಕ ವಿಚಾರದ ಮೂಲಕ ಜನರ ಭಾವನೆ ಕೆರಳಿಸುತ್ತಿರುವುದು ಯಾರು? ಸಂಘ- ಪರಿವಾರದವರು ಅಲ್ವಾ? ಸಮಾಜದಲ್ಲಿ ಶಾಂತಿ, ಭ್ರಾತೃತ್ವ ಹಾಳು ಮಾಡುತ್ತಿರೋದು ಯಾರು? ಬಿಜೆಪಿ, ಶ್ರೀರಾಮಸೇನೆ, ಭಜರಂಗದಳ, ಆರ್ಎಸ್ಎಸ್, ಹಿಂದೂ ಮಹಾಸಭಾದವರೇ ಮಾಡ್ತಿರೋದು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಯಾವಾಗ ಚುನಾವಣೆ ಬಂದ್ರೂ ನಾವು ಸಿದ್ದರಿದ್ದೇವೆ: ಚುನಾವಣೆ ಯಾವಾಗ ಬಂದ್ರೂ ಚುನಾವಣೆ ಎದುರಿಸಲು ನಾವು ಸಿದ್ದರಿದ್ದೇವೆ. ಜನರ ಮುಂದೆ 40% ಕಮಿಷನ್ ಬ್ರಹ್ಮಾಂಡ ಭ್ರಷ್ಟಾಚಾರ ಬಗ್ಗೆ ತಿಳಿಸುತ್ತೇವೆ. ಅಲ್ಲದೇ ಈ ಸರ್ಕಾರದ ಇನ್ನಷ್ಟು ಅಕ್ರಮಗಳ ಬಗ್ಗೆ ಜನರಿಗೆ ತಿಳೀಸಲಿದ್ದೇವೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಶಗ 144 ಸೆಕ್ಷನ್ ಜಾರಿ ಇದ್ದರು ಉಲ್ಲಂಘನೆಯ ಮಾಡಿದವರು ಯಾರು ಈಶ್ವರಪ್ಪ ಅಲ್ವಾ ಅವರ ಮೇಲೆ ಏಕೆ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಹರ್ಷನಿಗೆ 25 ಲಕ್ಷ ಕೊಟ್ರು, ಬೆಳತಂಗಡಿ ದಿನೇಶನ ಕೊಲೆಯಾದಗ ಯಾಕೆ ಕೊಟ್ಟಿಲ್ಲ. ದಿನೇಶನ್ನ ಕೊಲೆಮಾಡಿದವರು ಯಾರು - ಭಜರಂಗದಳದವರು. ನರಗುಂದದಲ್ಲಿ ಮುಸ್ಲಿಂ ಕೊಲೆ ಆಯ್ತು ಅದನ್ನು ಮಾಡಿದವರ್ಯಾರು ಶ್ರೀರಾಮಸೇನೆಯವರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸಣ್ಣ ಯಾಕೆ ಎಂದರು ಬಿಜೆಪಿಗರನ್ನು ಪ್ರಶ್ನಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯನ್ನು ನಾವು ಸಾಮಾನ್ಯ ಗಲಭೆ ಎಂದು ಪರಿಗಣಿಸಿಲ್ಲ.. ಇದರ ಹಿಂದೆ ಷಡ್ಯಂತ್ರವಿದೆ : ಸಿಎಂ ಬೊಮ್ಮಾಯಿ