ETV Bharat / state

ಬಿಜೆಪಿಗೆ ಬಂದ ನೂತನ ಶಾಸಕರು  ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಬೇಕು: ವಲಸಿಗರಿಗೆ ಈಶ್ವರಪ್ಪ ಟಾಂಗ್​ - ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ

ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಬಂದಿರುವ ಶಾಸಕರು ಬಿಜೆಪಿ ವಿಚಾರ, ಸಿದ್ಧಾಂತ, ನಾಯಕತ್ವವನ್ನು ಒಪ್ಪಿ ನಡೆಯಬೇಕು ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

BJP district committee special meeting
ಬಿಜೆಪಿಯ ಜಿಲ್ಲಾ ಸಮಿತಿ ವಿಶೇಷ ಸಭೆ
author img

By

Published : Dec 17, 2019, 5:52 PM IST

ಶಿವಮೊಗ್ಗ: ಬಿಜೆಪಿಗೆ ಯಾರೇ ಬಂದರೂ‌ ಸರಿ. ಅವರು ಬಿಜೆಪಿಯ ನಾಯಕತ್ವ, ತತ್ವ- ಸಿದ್ದಾಂತ, ವಿಚಾರಗಳಿಗೆ ತಕ್ಕಂತೆ ನಡೆಯಬೇಕು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕರುಗಳಿಗೆ ಬಹಿರಂಗ ಸಭೆಯಲ್ಲೇ ಟಾಂಗ್‌ ನೀಡಿದ್ದಾರೆ.

ಕೆ.ಎಸ್.ಈಶ್ವರಪ್ಪ

ಶಿವಮೊಗ್ಗದ ಶುಭ ಮಂಗಳ ಸಮುದಾಯ ಭವನದಲ್ಲಿ ಬಿಜೆಪಿಯ ಜಿಲ್ಲಾ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ನೂತನ ಶಾಸಕರು ಬಿಜೆಪಿಯ ತತ್ವ- ಸಿದ್ದಾಂತಗಳಿಗೆ ಹೊಂದಿಕೊಂಡು ನಡೆಯಬೇಕು. ನಾವು ಪಕ್ಷವನ್ನು ತಾಯಿಯಂತೆ ಕಾಣುತ್ತೇವೆ. ಇದರಿಂದ ಪಕ್ಷಕ್ಕೆ ದ್ರೋಹ ಮಾಡಿದರೆ, ತಾಯಿಗೆ ದ್ರೋಹ ಮಾಡಿದಂತೆ ಆಗುತ್ತದೆ ಎಂದರು.

ಕಾಂಗ್ರೆಸ್‌ನಿಂದ ಬಂದ ನೂತನ ಶಾಸಕರೊಬ್ಬರು ನಮ್ಮ ಪಕ್ಷ ಬೇರೆ ಇರಬಹುದು, ಆದ್ರೆ ನಮ್ಮ ನಾಯಕ ಸಿದ್ದರಾಮಯ್ಯ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆಗೆ ಟಾಂಗ್‌ ನೀಡಿದ ಸಚಿವ ಈಶ್ವರಪ್ಪ ನೂತನ ಶಾಸಕರಿಗೆ ಬಹಿರಂಗ ಸಭೆಯಲ್ಲಿ ನೀತಿ ಪಾಠ ಮಾಡಿದ್ದಾರೆ. ನಾವು ಪಕ್ಷವನ್ನು ತಾಯಿಯಂತೆ ನೋಡುತ್ತೇವೆ. ಪಕ್ಷದ ನಾಯಕರೇ ನಮ್ಮ ನಾಯಕರು. ಪಕ್ಷ ಹೇಳಿದಂತೆ ನಡೆಯಬೇಕು. ಮನೆ ಬದಲಾಗಿದೆ. ಅದೇ ರೀತಿ ಸಿದ್ದಾಂತವು ಬದಲಾಗಬೇಕು ಎಂದರು.

Intro:ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದಿರುವ ಶಾಸಕರು ಬಿಜೆಪಿ ವಿಚಾರ, ಸಿದ್ಧಾಂತ, ನಾಯಕತ್ವವನ್ನು ಒಪ್ಪಿ ನಡೆಯಬೇಕು : ಕೆ.ಎಸ್. ಈಶ್ವರಪ್ಪ ಕಿವಿ ಮಾತು

ಶಿವಮೊಗ್ಗ: ಬಿಜೆಪಿಗೆ ಯಾರೇ ಬಂದರೂ‌ ಸರಿ, ಅವರು ಬಿಜೆಪಿಯ ತತ್ವ- ಸಿದ್ದಾಂತ, ವಿಚಾರಗಳಿಗೆ ತಕ್ಕಂತೆ ನಡೆಯಬೇಕು ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕರುಗಳಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ.Body:ಶಿವಮೊಗ್ಗದ ಶುಭ ಮಂಗಳ ಸಮುದಾಯ ಭವನದಲ್ಲಿ ಬಿಜೆಪಿಯ ಜಿಲ್ಲಾ ಸಮಿತಿ ವಿಶೇಷ ಸಭೆಯಲ್ಲಿ ಭಾಗಿಯಾಗಿ ಮಾತನಾಡುವ ವೇಳೆ ನೂತನ ಶಾಸಕರುಗಳಿಗೆ ಬಿಜೆಪಿಯ ತತ್ವ- ಸಿದ್ದಾಂತಗಳಿಗೆ ಹೊಂದಿ ಕೊಂಡು ನಡೆಯಬೇಕು, ನಾವು ಪಕ್ಷವನ್ನು ತಾಯಿಯಂತೆ ಕಾಣುತ್ತೆವೆ. ಇದರಿಂದ ಪಕ್ಷಕ್ಕೆ ದ್ರೋಹ ಮಾಡಿದರೆ, ತಾಯಿಗೆ ದ್ರೋಹ ಮಾಡಿದಂತೆ ಆಗುತ್ತದೆ ಎಂದರು.Conclusion: ಮೊನ್ನೆ ಅನಾರೋಗ್ಯಕ್ಕೆ ಒಳಗಾಗಿದ್ದ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಂತ್ರ ರಮೇಶ್ ಜಾರಕಿಹೊಳಿರವರು ನಮಗೆ ಈಗಲೂ ಸಿದ್ದರಾಮಯ್ಯ ನವರೆ ನಮ್ಮ ನಾಯಕರು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಡಿ.ಕೆ.ಶಿವಕುಮಾರ್ ಸಹ ಬಿಜೆಪಿಗೆ ಹೋದ ನಮ್ಮವರು ಈಗಲೂ ಸಹ ಯಡಿಯೂರಪ್ಪನವರನ್ನು ನಾಯಕ ಅಂತ ಒಪ್ಪದೆ, ಸಿದ್ದರಾಮಯ್ಯನವರನ್ನೆ ನಮ್ಮ ನಾಯಕರು ಅಂತ ಹೇಳುತ್ತಿರುವುದು ಸ್ವಾಗರ್ತ ಎಂಬ ಹೇಳಿಕೆಗೆ ಈಶ್ವರಪ್ಪ ಯಾರ ಹೆಸರನ್ನು ಹೇಳದೆ ಪಕ್ಷಕ್ಕೆ ಎಲ್ಲಾರು ತಲೆ ಬಾಗಬೇಕು, ಪಕ್ಷ ಹೇಳಿದಂತೆ ನಡೆಯಬೇಕು ಎಂದು ರಾಜ್ಯಾಧ್ಯಕ್ಷರ ಸಮ್ಮುಖದಲ್ಲೆ ಹೇಳಿದ್ದು ವಿಶೇಷವಾಗಿತ್ತು. ಮನೆ ಬದಲಾಗಿದೆ, ಅದೇ ರೀತಿ ಸಿದ್ದಾಂತವು ಬದಲಾಗಬೇಕು ಎಂದು ಖಾರವಾಗಿ ಮಾತನಾಡಿದರು.

ಬೈಟ್ : ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡಾ ಸಚಿವರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.