ETV Bharat / state

ತಂದೆ - ತಾಯಿ ಹೊರಹಾಕಿದ್ದ ಕುಮಾರ್ ಬಂಗಾರಪ್ಪರ ಬೋಧನೆ ಕಾಂಗ್ರೆಸ್​ಗೆ ಬೇಕಿಲ್ಲ; ಬೇಳೂರು ಗೋಪಾಲಕೃಷ್ಣ - ತಂದೆ ತಾಯಿಯನ್ನ ಹೊರಹಾಕಿದ ಕುಮಾರ ಬಂಗಾರಪ್ಪ

ಬಂಗಾರಪ್ಪ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಕುಮಾರ್ ಬಂಗಾರಪ್ಪ ಅವರಿಗಿಲ್ಲ. ರಾತೋ ರಾತ್ರಿ ತಂದೆ ತಾಯಿಯನ್ನ ಹೊರಹಾಕಿದ ಕುಮಾರ ಬಂಗಾರಪ್ಪರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

KN_SMG
ಬೇಳೂರು ಗೋಪಾಲಕೃಷ್ಣ
author img

By

Published : Oct 20, 2022, 11:05 AM IST

Updated : Oct 20, 2022, 11:54 AM IST

ಶಿವಮೊಗ್ಗ: ರಾತ್ರೋ ರಾತ್ರಿ ತಂದೆ ತಾಯಿಯನ್ನು ಮನೆಯಿಂದ ಹೊರಹಾಕಿದ ವ್ಯಕ್ತಿಯಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿಯಬೇಕಾಗಿದ್ದಿಲ್ಲ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರು ‌ಶಾಸಕ ಕುಮಾರ್ ಬಂಗಾರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಕುಮಾರ್ ಬಂಗಾರಪ್ಪ ಅವರಿಗಿಲ್ಲ. ರಾತ್ರೋ ರಾತ್ರಿ ತಂದೆ ತಾಯಿಯನ್ನು ಮನೆಯಿಂದ ಹೊರಹಾಕಿದ ವ್ಯಕ್ತಿಯಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿಯಬೇಕಾಗಿದ್ದಿಲ್ಲ. ಕುಮಾರ್ ಕುಟುಂಬದ ಸದಸ್ಯರನ್ನೆಲ್ಲ ಕಳೆದುಕೊಂಡಿದ್ದಾರೆ, ರಾಜ್ಯದ ಬಂಗಾರಪ್ಪ ಅಭಿಮಾನಿಗಳು ಕಳೆದುಕೊಂಡಿದ್ದಾರೆ. ನಿಮ್ಮಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಮಧು ಬಂಗಾರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರಿಂದ‌ ಪಕ್ಷಕ್ಕೆ ಹೊಸ ಶಕ್ತಿ‌ ಸಿಕ್ಕಿದೆ. ಅದರಲ್ಲಿ ಎರಡು ಮಾತಿಲ್ಲ ಎಂದರು. ಮಧುಬಂಗಾರಪ್ಪ ಕಾಂಗ್ರೆಸ್​ನಲ್ಲಿ‌ ಉಳಿತಾರೋ ಬಿಡ್ತಾರೋ ಅಂತ ಹೇಳಿಕೆ ಕೊಡುವ ಯೋಗ್ಯತೆ ಕುಮಾರ್ ಬಂಗಾರಪ್ಪ ಅವರಿಗಿಲ್ಲ ಎಂದ ಬೇಳೂರು, ಮಧು ರಾಜ್ಯದ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಶಕ್ತಿ ಬಂದಿದೆ. ಸೊರಬದಲ್ಲಿ ರೈತರ ಪಾದಯಾತ್ರೆ ಮಾಡಿದ್ದಾರೆ ಎಂದರು. ಬಂಗಾರಪ್ಪ ರಾಜ್ಯದ ಜನರಿಗೆ ಹಕ್ಕುಪತ್ರ ಕೊಟ್ರು, ಸೊರಬದಲ್ಲಿ ಮಗ ಹಕ್ಕುಪತ್ರ ರದ್ದು ಮಾಡಿಸಿದ್ದಾರೆ. ಇದು ಕುಮಾರ್ ಬಂಗಾರಪ್ಪ ನವರ ನೀಚತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರ್ ಬಂಗಾರಪ್ಪ ವಿರುದ್ದ ಬೇಳೂರು ಗೋಪಾಲಕೃಷ್ಣ ಹೇಳಿಕೆ

ಕುಮಾರ್ ಬಂಗಾರಪ್ಪ ಸಮಾಧಿ ಬಗ್ಗೆ ಮಾತನಾಡಿದ್ದಾರೆ. ನನಗೆ ನೀರಾವರಿ ಮುಖ್ಯ, ಅಪ್ಪ ಅಮ್ಮನ ಸಮಾಧಿಯನ್ನು ಸ್ವಂತ ದುಡ್ಡಲ್ಲಿ ಕಟ್ಟುತ್ತೇನೆ. ಸೊರಬ ಕ್ಷೇತ್ರಕ್ಕೆ ನೀರಾವರಿ ಕೊಡಿ ಎಂದು ಮಧು ಬಂಗಾರಪ್ಪ ಮನವಿ ಮಾಡಿದ್ದರು. ಆ ನೀರಾವರಿ ಕೆಲಸವನ್ನೆ ಇಂದು ಮಾಡುತ್ತಿದ್ದಾರೆ ಎಂದರು. ಬಿಜೆಪಿಯವರು, ಯಡಿಯೂರಪ್ಪ ಅವರು ಸೇರಿಕೊಂಡು ಬಂಗಾರಪ್ಪನವರನ್ನು ಸಾಯಿಸಿದ್ರು ಅಂತ ಇದೇ ಕುಮಾರ್ ಬಂಗಾರಪ್ಪ ಅವರು ಹೇಳಿದ್ರು, ಅಲ್ಲದೇ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಲ್ಲಿದ್ದಾಗ ಬಿಜೆಪಿ ಅವರನ್ನು ಗಡಿಮಾರಮ್ಮನ ತರ ಗಡಿದಾಟಿಸಿ ಬಿಡಬೇಕು ಅಂತ ಹೇಳಿಕೆ ನೀಡಿದ್ದರು. ಆದ್ದರಿಂದ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಬಗ್ಗೆ, ನಮ್ಮ‌ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದರು.

ಕುಮಾರ್ ಬಂಗಾರಪ್ಪನವರೇ ನಿಮ್ಮ ವಿರುದ್ದವೇ ನಿಮ್ಮ ಪಕ್ಷದ ಹಿರಿಯ ನಾಯಕ ಪದ್ಮನಾಭ ಭಟ್ ಹೇಳಿಕೆ ನೀಡಿದ್ದಾರೆ. ಈ ಮನುಷ್ಯ ತಂದೆ ತಾಯಿಯನ್ನೇ ಮನೆಯಿಂದ ಹೊರಹಾಕಿದ ವ್ಯಕ್ತಿ ಪಕ್ಷದ ಕಾರ್ಯಕರ್ತರನ್ನು ನೋಡಿಕೊಳ್ಳುವುದಕ್ಕೆ ಆಗುತ್ತಾ ಎಂದು ಹೇಳಿದ್ದಾರೆ. ಅದನ್ನು ತಿಳಿದುಕೊಂಡು ಮಾತನಾಡಿ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಿ.ಡಿ ಮಂಜುನಾಥ್, ಡಾ.ಶ್ರೀನಿವಾಸ್ ಕರಿಯಣ್ಣ,ಎಸ್.ರವಿಕುಮಾರ್, ರಮೇಶ್ ಶಂಕರಘಟ್ಟ ಮೊದಲಾದವರಿದ್ದರು.

ತಾಕತ್ ಇದ್ರೆ ಯತ್ನಾಳ್ ಸಸ್ಪೆಂಡ್ ಮಾಡಿ: ಇದೇ ವೇಳೆ ಬಿಜೆಪಿಯವರಿಗೆ ತಾಕತ್ ಇದ್ರೆ ಶಾಸಕ ಯತ್ನಾಳ್ ಅವರನ್ನು ಸಸ್ಪೆಂಡ್ ಮಾಡಲಿ. ನೋಟಿಸ್ ಬೇಡ, ಸಸ್ಪೆಂಡ್ ಮಾಡುವ ತಾಕತ್ ಇದೆಯಾ ಎಂದು ಹೇಳಿ ಎಂದು ಬೇಳೂರು ಗೋಪಾಲಕೃಷ್ಣ ಬಿಜೆಪಿಯವರಿಗೆ ಸವಾಲು ಹಾಕಿದರು. ಯಾಕೆಂದರೆ ಯತ್ನಾಳ್ ಬಳಿ ಸಿಡಿ ಇದೆ, ಎಷ್ಟು ಜನರ ಸಿಡಿ ಇದೆ ಅಂತ ಗೊತ್ತಿಲ್ಲ. ಇಬ್ಬರು ಮಂತ್ರಿಗಳ ಹಾಗೂ ಶಾಸಕರ ಸಿಡಿ ಅವರ ಹತ್ತಿರ ಇದೆ. ಹೀಗಾಗಿಯೇ ಬಿಜೆಪಿಯವರು ಸ್ಟೇ ತಂದಿದ್ದಾರೆ ಎನ್ನುವ ಅನುಮಾನವಿದೆ. ಹಾಗಾಗಿ ಅವರಿಂದ ಯತ್ನಾಳ್​ಗೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ವಾರಾಣಸಿ ದೆಹಲಿಯಲ್ಲಿ ಎನ್​ಐಎ ದಾಳಿ.. ಐಸಿಸ್​ ಮಾಡ್ಯೂಲ್ ಶಂಕಿತನ ಬಂಧನ

Last Updated : Oct 20, 2022, 11:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.