ETV Bharat / state

ಹಣಗೆರೆಯಲ್ಲಿ ಭಕ್ತರ ದರ್ಶನಕ್ಕೆ ನಿಷೇಧ: ಆದರೂ ಮೈಲಿಗಲ್ಲಿಗೆ ಪೂಜೆ ಸಲ್ಲಿಸಿದ ಜನರು

author img

By

Published : Jul 2, 2020, 8:41 AM IST

ದೇವರ ದರ್ಶನ ಭಾಗ್ಯ ಸಿಗದ ಭಕ್ತರು ಹಣಗೆರೆಯ ದೇವಾಲಯದ ಬಳಿ ಇರುವ ಮೈಲಿಗಲ್ಲಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

hangere
ಮೈಲಿಗಲ್ಲಿಗೆ ಪೂಜೆ ಸಲ್ಲಿಸಿ ಭಕ್ತಿ ಮೆರೆದ ಭಕ್ತರು

ಶಿವಮೊಗ್ಗ: ಜಿಲ್ಲೆಯ ಭಾವೈಕ್ಯತೆಯ ಕೇಂದ್ರವಾದ ಹಣಗೆರೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದರೆ, ದೇವರ ದರ್ಶನ ಭಾಗ್ಯ ಸಿಗದ ಭಕ್ತರು ಹಣಗೆರೆಯ ದೇವಾಲಯದ ಬಳಿ ಇರುವ ಮೈಲಿಗಲ್ಲಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಹಣಗೆರೆಯಲ್ಲಿ ಕೊರೊನಾದಿಂದ ಭಕ್ತರಿಗೆ ನಿಷೇಧ: ಮೈಲಿಗಲ್ಲಿಗೆ ಪೂಜೆ ಸಲ್ಲಿಸಿ ಭಕ್ತಿ ಮೆರೆದ ಭಕ್ತರು

ತೀರ್ಥಹಳ್ಳಿ ತಾಲೂಕಿನ ಕಾಡಿನ ಮಧ್ಯದಲ್ಲಿ ಇರುವ ಹಣಗೆರೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ದೇವತೆಗಳು ಒಂದೇ ಸೂರಿನಡಿ‌ ನೆಲೆಸಿವೆ. ಇಲ್ಲಿಗೆ ದೇಶ - ವಿದೇಶಗಳಿಂದ ಸಹ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಸದ್ಯ ಕೊರೊನಾ ದಿಂದಾಗಿ ಭಕ್ತರಿಗೆ ಪ್ರವೇಶ ನೀಡಿಲ್ಲ. ದೇವಾಲಯ ಚಿಕ್ಕದಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಎಂಬ ಕಾರಣ ಧಾರ್ಮಿಕ ‌ದತ್ತಿ ಇಲಾಖೆಗೆ ಒಳಪಡುವ ಈ ದೇವಾಲಯದಲ್ಲಿ ಭಕ್ತರ ಭೇಟಿಗೆ ನಿಷೇಧ ಹೇರಲಾಗಿದೆ.

ಹೀಗಾಗಿ ಭಕ್ತರು, ದೇವರನ್ನು ಕಾಣದೇ ನಿರಾಸೆಗೊಳಗಾಗಿದ್ದಾರೆ. ಕೆಲವರು ಇಲ್ಲಿನ ಮೈಲಿಗಲ್ಲಿಗೆ ಅರಿಶಿನ, ಕುಂಕುಮ ಹಚ್ಚಿ ಪೂಜೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಇಷ್ಟಗಳನ್ನ ಈಡೇರಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.