ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ನಲ್ಲಿ ನಿರ್ಮಿಸಲಾಗಿದ್ದ ದಸರಾ ಹಬ್ಬದ ಬನ್ನಿ ಮುಡಿಯುವ ಮಂಟಪ ಭಾರಿ ಮಳೆಗೆ ಕುಸಿದು ಬಿದ್ದಿದೆ. ಸಂಜೆ ವೇಳೆಗೆ ಸುರಿದ ಧಾರಾಕಾರ ಮಳೆಗೆ ಬನ್ನಿ ಮಂಟಪ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದೇವತೆಗಳನ್ನು ಈ ಬನ್ನಿ ಮಂಟಪಕ್ಕೆ ತಂದು ಬನ್ನಿ ಮುಡಿಯಲಾಗುತ್ತದೆ. ಆದರೆ ದೇವತೆಗಳು ಬನ್ನಿ ಮಂಟಪದ ಹತ್ತಿರ ಬರುವ ಮುನ್ನವೇ ಮಳೆಗೆ ಮಂಟಪ ಕುಸಿದು ಬಿದ್ದಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿ ತಕ್ಷಣ ಬಿದ್ದಿರುವ ಮಂಟಪ ತೆರವುಗೊಳಿಸುತ್ತಿದ್ದಾರೆ.