ETV Bharat / state

ನಮ್ಮ‌ ನಾಯಕ ಯಡಿಯೂರಪ್ಪನವರ ಮನೆ ಮೇಲಿನ ದಾಳಿ ಖಂಡನೀಯ: ಶಿಕಾರಿಪುರ ಬಂಜಾರ ಮುಖಂಡರು - ಮಾಜಿ ಸಿಎಂ ಯಡಿಯೂರಪ್ಪನವರ ಮನೆ ಮೇಲೆ ನಡೆದ ಕಲ್ಲು ತೂರಾಟ

ಯಡಿಯೂರಪ್ಪನವರ ಮನೆ ಮೇಲೆ ದಾಳಿ ಕುರಿತು ಶಿಕಾರಿಪುರ ಬಂಜಾರ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

banjara
ಶಿಕಾರಿಪುರ ಬಂಜಾರ ಮುಖಂಡರು
author img

By

Published : Mar 28, 2023, 9:16 PM IST

ಶಿಕಾರಿಪುರದಲ್ಲಿ ನಡೆದ ಬಂಜಾರರ ಸುದ್ದಿಗೋಷ್ಟಿ

ಶಿವಮೊಗ್ಗ: ನಿನ್ನೆ ಮಾಜಿ ಸಿಎಂ ಯಡಿಯೂರಪ್ಪನವರ ಮನೆ ಮೇಲೆ ನಡೆದ ಕಲ್ಲು ತೂರಾಟ ಹೊರ ಜಿಲ್ಲೆಗಳಿಂದ ಬಂದ ಕಿಡಿಗೇಡಿಗಳ‌ ಕೃತ್ಯವಾಗಿದೆ ಎಂದು ಶಿಕಾರಿಪುರದ ಬಂಜಾರ ಮುಖಂಡರು ತಿಳಿಸಿದ್ದಾರೆ. ಶಿಕಾರಿಪುರ ಪಟ್ಟಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡರುಗಳು ನಿನ್ನೆ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಿನ್ನೆ ಎಲ್ಲಾ ಸರಿಯಾಗಿಯೇ ಇತ್ತು. ತಾಲೂಕು ಆಫೀಸ್ ಗೆ ಮನವಿ ಕೊಡುವವರಿದ್ದೆವು. ಈ ವೇಳೆ ಪೊಲೀಸರು ಮೂರು ಗೇಟುಗಳನ್ನು ಬಂದ್ ಮಾಡಿದ್ದರು.

ಅಷ್ಟೆ ಅಲ್ಲ, ಬ್ಯಾರಿಕೇಡ್​ ಹಾಕಿ ಜನರನ್ನು ಕಂಟ್ರೋಲ್ ಮಾಡಲಿಲ್ಲ. ಇದು ಪೊಲೀಸರ ವೈಫಲ್ಯ ಎಂದು ಹೇಳಲು‌ ಬಯಸುತ್ತೇನೆ. ನಮ್ಮಲ್ಲಿನ ಕೆಲ ಕಿಡಿಗೇಡಿಗಳು ಹೊರ ಜಿಲ್ಲೆಯಿಂದ ಬಂದು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕುಮ್ಮಕ್ಕು ಕೊಟ್ಟು ಕಿಡಿಗೇಡಿಗಳು ಮಾಹಿತಿ ನೀಡಿ ನಮ್ಮ ನಾಯಕರ ಮನೆಯ ಮೇಲೆ ಕಲ್ಲು ಎಸೆದು, ದೊಂಬಿಯನ್ನು ಮಾಡಿರುತ್ತಾರೆ. ಇದಕ್ಕೆ ತಾಲೂಕು ಬಿಜೆಪಿಯಿಂದ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಈ ಘಟನೆಯಿಂದ ನಮ್ಮ ನಾಯಕರುಗಳಿಗೆ ತೀವ್ರ ನೋವಾಗಿದೆ. ನಮ್ಮ ನಾಯಕರು ನಮ್ಮ ಜನಾಂಗಕ್ಕೆ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಅವರ ಸಹಕಾರ ಇದೇ ರೀತಿ ಮುಂದೆ ಇರಲಿ, ಅವರು ನಮ್ಮ ಸಮಾಜದ ಬಗ್ಗೆ ಅನುಮಾನ ಹೊಂದುವುದು ಬೇಡ. ನಮ್ಮ ಸಮಾಜಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸೊರಗೊಂಡನಕೊಪ್ಪ ಅಭಿವೃದ್ಧಿ ಪಡಿಸಿದ್ದಾರೆ. ನಮ್ಮ‌ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ತಾಂಡಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಾಂಕ್ರಿಟ್ ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಲಭ್ಯವನ್ನು ಒದಗಿಸಿದ್ದಾರೆ. ಶಾಲಾ ಕಾಲೇಜು, ವಿದ್ಯುತ್ ಸೌಲಭ್ಯ ಸೇರಿದಂತೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಸದಾಶಿವ ವರದಿಯಲ್ಲಿ ಒಳಮೀಸಲಾತಿಯ ವಿಷಯ ಕಳೆದ 20 ವರ್ಷಗಳಿಂದ ಚರ್ಚೆಯಲ್ಲಿತ್ತು.‌ ಆದರೆ ಇದನ್ನು ಎಲ್ಲಾ ಪಕ್ಷಗಳು ಅಧಿಕಾರಿಕ್ಕೆ ಬಂದರೆ ವರದಿಯನ್ನು ಜಾರಿ ಮಾಡುವುದಾಗಿ ಹೇಳಿದರು. ಮಾಜಿ ಸಿಎಂಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಸಹ ವರದಿ ಜಾರಿ ಮಾಡುವುದಾಗಿ ಹೇಳಿದ್ದರು‌. ರಾಜ್ಯ ಬಿಜೆಪಿ ಸರ್ಕಾರ ವರದಿಯಂತೆ ಒಳಮೀಸಲಾತಿಯನ್ನು ಜಾರಿ ಮಾಡಲು ಕೇಂದ್ರಕ್ಕೆ ರಾಜ್ಯ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿ ಶಿಫಾರಸು ಮಾಡಿದ್ದಾರೆ. ಇದರಿಂದ ಸಹಜವಾಗಿ ನಮ್ಮ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ನಮ್ಮ ಸಮಾಜದ ಹಿರಿಯರು, ಸ್ವಾಮೀಜಿಗಳು ಮುಂದೆ ಕಾನೂನು ಹೋರಾಟ ಸೇರಿದಂತೆ ಎಲ್ಲವನ್ನೂ ನಡೆಸಲು ನಿರ್ಧಾರ ಮಾಡಿದ್ದರು. ಅದರಂತೆ ಶಿಕಾರಿಪುರ ತಾಲೂಕಿನ ಎಲ್ಲಾ ಮುಖಂಡರುಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ಬಂದಾಗ, ಬೇರೆ ಬೇರೆ ಕಡೆಯಿಂದ ಬಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನಮ್ಮ ನಾಯಕರು, ಬಂಜಾರ ಸಮುದಾಯದ ಬಂಧುಗಳು, ಸಂತ ಸೇವಾಲಾಲ್ ಹಾಗೂ ಮರಿಯಮ್ಮನ ಆರಾಧಕರಾದ ಯಡಿಯೂರಪ್ಪನವರ ಮನೆಗೆ ಹೋಗಿ ಕಲ್ಲು ತೂರಾಟ ಮಾಡಿರುವ ಸಮಾಜದ ಕಿಡಿಗೇಡಿಗಳನ್ನು ಕೃತ್ಯವನ್ನು ಖಂಡಿಸುತ್ತೇವೆ. ನಮ್ಮ ನಾಯಕರಾದ ಯಡಿಯೂರಪ್ಪನವರಿಗೆ ನಮ್ಮ ಸಮಾಜದಿಂದ ಅತ್ಯಂತ ನೋವಿನಿಂದ ಹೇಳ ಬಯಸುತ್ತೇವೆ. ನಾವು ದೃತಿಗೆಟ್ಟಿಲ್ಲ, ನೀವು ದೃತಿಗೆಡಬೇಡಿ. ಮುಂದೆ ಇದನ್ನು ಸರಿಪಡಿಸಿಕೊಂಡು ಹೋಗೋಣ, ನಿಮ್ಮ ದೊಡ್ಡಗುಣವನ್ನು ನಾವು ಮಾಧ್ಯಮಗಳಲ್ಲಿ ನೋಡಿದೆವು. ಡಿಸಿ, ಎಸ್ಪಿ ಅವರಿಗೆ ನಮ್ಮ ಸಮಾಜದವರನ್ನು ಬಂಧಿಸಬೇಡಿ ಎಂದು ಹೇಳಿರುವುದು ನಿಮ್ಮ ದೊಡ್ಡಗುಣ ಎಂದರು. ಈ ವೇಳೆ ಬಂಜಾರ ಸಮುದಾಯದ ಮುಖಂಡರು ಹಾಜರಿದ್ದರು.

ಇದನ್ನೂ ಓದಿ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ರಾಜಕೀಯ ಪ್ರೇರಿತ: ಅರವಿಂದ ಬೆಲ್ಲದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.