ETV Bharat / state

ಬೆಂಗಳೂರು ಗಲಭೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು: ವೈ.ಎಸ್.ವಿ.ದತ್ತ

author img

By

Published : Aug 19, 2020, 3:26 PM IST

ಬೆಂಗಳೂರಿನ ಗಲಭೆ ಪ್ರಕರಣವನ್ನು‌ ಹೈಕೋರ್ಟ್​ನ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ನಾಯಕ ವೈ.ಎಸ್​.ವಿ ದತ್ತ ಆಗ್ರಹಿಸಿದ್ದಾರೆ.

YSV Datta latest news
ವೈ.ಎಸ್.ವಿ.ದತ್ತ

ಶಿವಮೊಗ್ಗ: ಬೆಂಗಳೂರಿನ ಗಲಭೆ ಪ್ರಕರಣವನ್ನು‌ ಹೈಕೋರ್ಟ್​ನ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ನಮ್ಮ ವರಿಷ್ಠ ದೇವೆಗೌಡರ ಹಾಗೂ ನಮ್ಮ ಪಕ್ಷದ ಒತ್ತಾಯವಾಗಿದೆ ಎಂದು ಜೆಡಿಎಸ್​ ನಾಯಕ ವೈ.ಎಸ್.ವಿ ದತ್ತ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸರ್ಕಾರ ಈಗ ನ್ಯಾಯಾಧೀಶರಿಂದ ತನಿಖೆ ನಡೆಸುತ್ತಿದೆ. ಆದರೆ ನ್ಯಾಯಾಂಗ ತನಿಖೆ ನಡೆಸದೆ ಹೋದರೆ ನ್ಯಾಯ ಸಿಗುವುದಿಲ್ಲ. ಸರ್ಕಾರ ತಕ್ಷಣ ಇದನ್ನು ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೆಗೌಡರು ಆಗ್ರಹಿಸಿದ್ದಾರೆ. ಯಾವುದೇ ಮುಲಾಜಿಲ್ಲದೆ, ಯಾವುದೇ ಪಕ್ಷವನ್ನು‌ ನೋಡದೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವೈ.ಎಸ್.ವಿ.ದತ್ತ, ಜೆಡಿಎಸ್ ನಾಯಕ

‌ಈ ಹಿಂದೆ ನಡೆದ‌ ಸಾಕಷ್ಟು ಗಲಭೆಗಳ‌ ತನಿಖೆಯನ್ನು ಸಹ‌ ನ್ಯಾಯಂಗ‌ ತನಿಖೆಯ ಮೂಲಕವೇ ನಡೆಸಲಾಗಿದೆ. ಈ ಗಲಭೆಗೆ ಪಕ್ಷಗಳು ಕಾರಣವೇ? ವೋಟ್ ​ಬ್ಯಾಂಕ್​ಗಾಗಿ ನಡೆಸಲಾಯಿತೆ? ಅಥವಾ ಅವರ ಕುಟುಂಬದವರು ಕಾರಣವೇ? ಎಂಬುದು ತನಿಖೆಯಿಂದ ಹೊರಬರಲು‌ ಸಾಧ್ಯವಾಗುತ್ತದೆ ಎಂದಿದ್ದಾರೆ.

ಹಿಂದು ಧರ್ಮದವರಿರಲಿ, ಇಸ್ಲಾಂ ಧರ್ಮದಲ್ಲೇ ಇರಲಿ, ಇದು ಖಂಡನೀಯಾವಾಗಿದೆ. ಡಿ.ಜೆ ಹಳ್ಳಿ ಗಲಭೆಯಲ್ಲಿ ನಡೆದ ಅನಾಹುತ ಬಗ್ಗೆ‌‌ ಸರ್ಕಾರ ಸೂಕ್ತ ತನಿಖೆ‌‌ ನಡೆಸಿ, ಆರೋಪಿಗಳಿಗೆ ಸೂಕ್ತ ಶಿಕ್ಷೆ ದೊರುಕುವಂತೆ ಮಾಡಬೇಕಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.