ETV Bharat / state

ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಆಂಜನೇಯನ ಗುಡಿ ಧ್ವಂಸ : ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ

ಹನುಮನ ಗುಡಿ ಕೆಡವಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಜರಂಗದಳದ ಕಾರ್ಯಕರ್ತರು ಜಮಾಯಿಸಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗುಡಿ ಕೆಡವಿದ ಜಾಗದಲ್ಲಿ ಕೇಸರಿ ಧ್ವಜ ನೆಟ್ಟು ಗುಡಿಯನ್ನು ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ..

Bajrang Dal activists protested in Shimoga
ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತರ ಪ್ರತಿಭಟನೆ
author img

By

Published : Dec 5, 2021, 7:51 PM IST

ಶಿವಮೊಗ್ಗ : ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಸಾಗರ ರಸ್ತೆಯ ಎಪಿಎಂಸಿ ಮುಂಭಾಗದಲ್ಲಿದ ರಸ್ತೆಯ ಪಕ್ಕದಲ್ಲಿದ್ದ ಆಂಜನೇಯನ ಗುಡಿಯನ್ನು ನೆಲಸಮಗೊಳಿಸಲಾಗಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಆಂಜನೇಯನ ಗುಡಿ ಧ್ವಂಸ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಬಜರಂಗದಳ ಕಾರ್ಯಕರ್ತರು..

ಇಂದು ಬೆಳಗ್ಗೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುವವರು ರಸ್ತೆ ಕಾಮಗಾರಿ ನೆಪವೊಡ್ಡಿ ಕಳೆದ ಹಲವು ವರ್ಷಗಳಿಂದ ಪೂಜಿಸಲ್ಪಡುತ್ತಿದ್ದ ಆಂಜನೇಯನ ಗುಡಿಯನ್ನು ಜೆಸಿಬಿಯಿಂದ ಕೆಡವಿದ್ದಾರೆ. ಆದರೆ, ರಸ್ತೆ ಕಾಮಗಾರಿಗೆ ಯಾವುದೇ ತೊಂದರೆ ಇಲ್ಲದೆ ಹೋದರೂ ಸಹ ಗುಡಿಯನ್ನು ನಾಶ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಹನುಮನ ಗುಡಿ ಕೆಡವಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಜರಂಗದಳದ ಕಾರ್ಯಕರ್ತರು ಜಮಾಯಿಸಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗುಡಿ ಕೆಡವಿದ ಜಾಗದಲ್ಲಿ ಕೇಸರಿ ಧ್ವಜ ನೆಟ್ಟು ಗುಡಿಯನ್ನು ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಾಳೆಹೊನ್ನೂರು ಜವಾಹರ್​ ನವೋದಯ ವಿದ್ಯಾಲಯದಲ್ಲಿ ಕೋವಿಡ್​ ಸ್ಫೋಟ.. 70 ಮಂದಿಗೆ ಸೋಂಕು ದೃಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.