ETV Bharat / state

ಬಗರ್ ಹುಕುಂ ಗೋಲ್​ಮಾಲ್: ಅರ್ಜಿ ಹಾಕದವರಿಗೆ ಸಾಗುವಳಿ ಪತ್ರ ನೀಡಿರುವ ಆರೋಪ

ಸಾಗುವಳಿ ಮಾಡದೆ, ಸಾಗುವಳಿ ಅರ್ಜಿ ಹಾಕದೆ ಇರುವವರಿಗೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಲಾಗಿದೆ. ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುವ ದಲಿತ ಕುಟುಂಬಗಳಿಗೆ ನೀಡಬೇಕಾದ ಸಾಗುವಳಿ ಪತ್ರವನ್ನು ಸಾಗುವಳಿ ಮಾಡದ, ಬಗರ್ ಹುಕುಂ ಅರ್ಜಿಯೇ ಸಲ್ಲಿಸದ ಕುಟುಂಬಗಳಿಗೆ ಬಗರ್ ಹುಕುಂ ಸಾಗುವಳಿ ಪತ್ರ ನೀಡಿರುವ ಘಟನೆ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

Bagar hukum Golmaal in Bhadravati
ಬಗರ್ ಹುಕುಂ
author img

By

Published : Jul 6, 2021, 4:24 PM IST

Updated : Jul 6, 2021, 8:52 PM IST

ಶಿವಮೊಗ್ಗ: ಅಧಿಕಾರಿಗಳ ಲಂಚಬಾಕತನ ಹಾಗೂ ಗೋಲ್​ಮಾಲ್​​ನಿಂದಾಗಿ‌ ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುವ ದಲಿತ ಕುಟುಂಬಗಳಿಗೆ ನೀಡಬೇಕಾದ ಸಾಗುವಳಿ ಪತ್ರವನ್ನು ಸಾಗುವಳಿ ಮಾಡದ, ಬಗರ್ ಹುಕುಂ ಅರ್ಜಿಯೇ ಸಲ್ಲಿಸದ ಕುಟುಂಬಗಳಿಗೆ ಬಗರ್ ಹುಕುಂ ಸಾಗುವಳಿ ಪತ್ರ ನೀಡಿರುವ ಘಟನೆ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.

ಅರ್ಜಿ ಹಾಕದವರಿಗೆ ಸಾಗುವಳಿ ಪತ್ರ ನೀಡಿರುವ ಆರೋಪ

ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿಯ ನಾಗಸಮುದ್ರ ಗ್ರಾಮದ ಗುಡ್ಡದಮ್ಮನಹಳ್ಳಿಯಲ್ಲಿ ಅಧಿಕಾರಿಗಳು ದಲಿತರಿಗೆ ಅನ್ಯಾಯವನ್ನು ಎಸಗಿದ್ದಾರೆ. ಭದ್ರಾವತಿ ತಾಲೂಕು ನಾಗಸಮುದ್ರದ ಸರ್ವೆ ನಂಬರ್ 47 ರಲ್ಲಿ ಅಕ್ರಮವಾಗಿ ಸಾಗುವಳಿ ಚೀಟಿಯನ್ನು ನೀಡಲಾಗಿದೆ.

ಸಾಗಸಮುದ್ರದ ಗ್ರಾಮದ ಗುಡ್ಡದಮ್ಮನಹಳ್ಳಿ ಗ್ರಾಮದ ಎ.ಕೆ.ಜಯಪ್ಪ, ಶಿವಪ್ಪ, ಸಾಕಮ್ಮ, ಪೂಜಾರಿ ಮಲ್ಲೇಶಪ್ಪ ಹಾಗೂ ಆನಂದಪ್ಪ ಎಂಬುವರು ಸರ್ವೆ ನಂಬರ್ 47 ರಲ್ಲಿ ಕಳೆದ 40-50 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಇವರೆಲ್ಲ ದಲಿತ ಸಮಾಜಕ್ಕೆ ಸೇರಿದ್ದವರಾಗಿದ್ದಾರೆ. ಇವರೆಲ್ಲಾ ತಮಗೆ ತಾವು ಉಳುವೆ ಮಾಡುವ ಭೂಮಿಗೆ ಸಾಗುವಳಿ ಪತ್ರಕ್ಕಾಗಿ ಫಾರಂ 50, 53 ರಲ್ಲಿ 2017-18 ರಲ್ಲಿ ಅರ್ಜಿ‌ ಸಲ್ಲಿಸಿದ್ದಾರೆ. ಆದರೆ ಇವರಿಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ, ಸತಾಯಿಸಿದ್ದಾರೆ.

ಸಾಗುವಳಿ ಮಾಡದೆ, ಸಾಗುವಳಿ ಅರ್ಜಿ ಹಾಕದೆ ಇರುವವರಿಗೆ ಬಗರ್ ಹುಕುಂ ಭೂಮಿಯನ್ನು ಮಂಜೂರು ಮಾಡಲಾಗಿದೆ. ಸರ್ವೆ ನಂಬರ್ 47 ರ ಮೂಲ ಮಂಜೂರಾತಿ ಕಡತ ಎಲ್ಎನ್ ಡಿ ಸಿ ಆರ್ 210/98-99 ರ ಕಡತ ರಲ್ಲಿ ಅಕ್ರಮ ಎಸಗಿ ಬಗರ್ ಹುಕುಂ ಭೂಮಿ ಭೂಮಿಯನ್ನು ಮಂಜೂರು ಮಾಡಲಾಗಿದೆ. ಮಲ್ಲೇಶಪ್ಪ, ಎಸ್.ಬಿ.ರಮೇಶ್, ಎನ್.ಶಾಂತಕುಮಾರ್, ರಾಮಪ್ಪ, ಯಶೋದಮ್ಮ ಹಾಗೂ ಟಿ.ಮಂಜಪ್ಪ ನವರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಲಾಗಿದೆ.

ಈ ಅಕ್ರಮವು ಅಂದಿನ ಕಂದಾಯ ಸಚಿವರಾಗಿರುವ ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ಮಾಡಲಾಗಿದೆ. ಅಂದು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಹೆಚ್.ಜಿ. ಮಲ್ಲಯ್ಯ ನವರು ತಮ್ಮ ಸ್ವ- ಜಾತಿ ರವರಿಗೆ ಅಕ್ರಮವಾಗಿ ಭೂಮಿಯನ್ನು ಮಂಜೂರು ಮಾಡಿಸಿದ್ದಾರೆ. ಅಕ್ರಮ ಸಾಗುವಳಿ ಪತ್ರವನ್ನು ಮಂಜೂರು ಮಾಡುವಲ್ಲಿ ತಾಲೂಕು ಕಚೇರಿಯ ವಿಷಯ ನಿರ್ವಾಹಕರಾದ ಶ್ರೀಮತಿ ಆಶಾ, ರಾಜಸ್ವ ನಿರೀಕ್ಷಕರಾದ ಸತ್ಯನಾರಾಯಣ , ಗ್ರಾಮ ಲೆಕ್ಕಾಧಿಕಾರಿ ರವಿ ಕುಮಾರ್ ಹಾಗೂ ಭೂ ಮಾಪಕರಾದ ಮನ್ಮಥ್ ಕುಮಾರ್ ರವರು ಹಾಗೂ ಅಂದಿನ ತಹಶೀಲ್ದಾರ್ ಎಂ.ಆರ್.ನಾಗರಾಜ್ ರವರು ಸೇರಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿ ಸಾಗುವಳಿ ಮಾಡುವ ದಲಿತ ಕುಟುಂಬದವರಿಗೆ ಅನ್ಯಾಯ ಮಾಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ರು ಸಹ ಯಾವುದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಲಾಗಿದೆ.

Last Updated : Jul 6, 2021, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.