ETV Bharat / state

ನಮ್ಮ ಕುಟುಂಬದ ಮೇಲೆ ಮೊದಲಿನಿಂದಲೂ‌ ಸಹ ಪಿತೂರಿ‌ ನಡೆಸಲಾಗುತ್ತಿದೆ: ಸಂಸದ ಬಿ ವೈ ರಾಘವೇಂದ್ರ - ರಾಮಲಿಂಗಂ ಕಂಪನಿ

ನಮ್ಮ ಕುಟುಂಬದ ವಿರುದ್ದ ಮೊದಲಿನಿಂದಲೂ ಸಹ ಷಡ್ಯಂತ್ರ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದರು.

ಸಂಸದ ಬಿ ವೈ ರಾಘವೇಂದ್ರ
ಸಂಸದ ಬಿ ವೈ ರಾಘವೇಂದ್ರ
author img

By

Published : Sep 15, 2022, 3:38 PM IST

ಶಿವಮೊಗ್ಗ: ನಮ್ಮ ಕುಟುಂಬದ ವಿರುದ್ಧ ಮೊದಲಿನಿಂದಲೂ ಸಹ ಪಿತೂರಿ‌ ನಡೆಸಲಾಗುತ್ತಿದೆ. ನಮಗೆ ಕಾನೂನಿನ ಮೇಲೆ ಗೌರವವಿದೆ. ಹೀಗಾಗಿ ಈ ಪ್ರಕರಣದಿಂದ ಹೊರ ಬರುವ ವಿಶ್ವಾಸವಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಮ್ಮ ಕುಟುಂಬದ ವಿರುದ್ಧ ಮತ್ತೆ ತನಿಖೆಗೆ ಆದೇಶ ನೀಡಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಮಲಿಂಗಂ ಕಂಪನಿಯಿಂದ ಲಂಚ ಪಡೆದ ಪ್ರಕರಣದಲ್ಲಿ ಮತ್ತೆ ಕೋರ್ಟ್ ತನಿಖೆಗೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದರು. ಈ ಹಿಂದೆ ಇದೇ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿತ್ತು. ಆದರೂ ಸಹ ಖಾಸಗಿ ವ್ಯಕ್ತಿಯೊಬ್ಬರು ಮತ್ತೆ ದೂರು ನೀಡುವ ಪ್ರಯತ್ನ ಮಾಡಿದ್ದಾರೆ.

ಸಂಸದ ಬಿ ವೈ ರಾಘವೇಂದ್ರ ಅವರು ಮಾತನಾಡಿರುವುದು

ನಮ್ಮ ಕುಟುಂಬದ ವಿರುದ್ಧ ಮೊದಲಿನಿಂದಲೂ ಸಹ ಷಡ್ಯಂತ್ರ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ. ನಮಗೆ ದೇಶದ‌ ಸಂವಿಧಾನ ಹಾಗೂ ಕಾನೂನಿನ ಮೇಲೆ‌ ನಂಬಿಕೆ ಇದೆ ಎಂದರು.

ಓದಿ: 'ಅಂಬೇಡ್ಕರ್ ಭವನ ನಿರ್ಮಾಣ ಹೆಸರಲ್ಲಿ ಅಧಿಕಾರಿಗಳಿಂದ 40 ಲಕ್ಷ ರೂ ಲೂಟಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.