ETV Bharat / state

ಎರಡನೇ ಶಬರಿಮಲೆ ಎಂಬ ಖ್ಯಾತಿಯ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ - ಈಟಿವಿ ಭಾರತ್ ಕನ್ನಡ ಸುದ್ದಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮದಲ್ಲಿ ಇರುವ ಅಯ್ಯಪ್ಪ ಸ್ವಾಮಿ ಸನ್ನಿದಾನ ಕರ್ನಾಟಕದ ಶಬರಿ ಮಲೆ ಎಂದು ಪ್ರಸಿದ್ದಿ ಪಡೆದುಕೊಂಡಿದೆ. ಇಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪನಿಗೆ ನಡೆಸುವ ಎಲ್ಲಾ ವಿಧಿ ವಿಧಾನವನ್ನು ಇಲ್ಲೂ ನಡೆಸುವುದು ವಿಶೇಷ.

ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ
ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ
author img

By

Published : Jan 15, 2023, 7:48 PM IST

ಸಂತೋಷ್ ವಿಶ್ವ ಭಾರತಿ ಗುರೂಜೀ ಅವರು ಮಾತನಾಡಿದರು

ಶಿವಮೊಗ್ಗ: ಎರಡನೇ ಶಬರಿಮಲೈ ಎಂದು ಖ್ಯಾತಿ ಪಡೆದಿರುವ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.‌ ಮಕರ ಸಂಕ್ರಾಂತಿಯ ಅಂಗವಾಗಿ ಪ್ರತಿ ವರ್ಷ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತೆ. ಕೇರಳದ ಶಬರಿ ಮಲೆಯಲ್ಲಿ ನಡೆಯುವ ಎಲ್ಲಾ ಸಂಪ್ರದಾಯಗಳು ಇಲ್ಲಿ ಜರುಗುವುದು ವಿಶೇಷವಾಗಿದೆ.

ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮದಲ್ಲಿ ಇರುವ ಅಯ್ಯಪ್ಪ ಸ್ವಾಮಿ ಸನ್ನಿದಾನ ಕರ್ನಾಟಕದ ಶಬರಿ ಮಲೆ ಎಂದು ಪ್ರಸಿದ್ಧಿ ಪಡೆದುಕೊಂಡಿದೆ. ಶಬರಿಮಲೆಯಲ್ಲಿ ಅಯ್ಯಪ್ಪನಿಗೆ ನಡೆಸುವ ಎಲ್ಲಾ ವಿಧಿ ವಿಧಾನಗಳನ್ನು ಇಲ್ಲೂ ನಡೆಸುವುದು ವಿಶೇಷ. ಬೆಜ್ಜವಳ್ಳಿಯನ್ನು ಹರಿಹರತ್ಮಾಜ ಪೀಠ ಎಂದು ಕರೆಯುತ್ತಾರೆ. ಇಂದು ಪೀಠದ ಸಂತೋಷ ವಿಶ್ವಭಾರತಿ ಶ್ರೀಪಾದಂಗಳ ಅವರ ಪೀಠಾರೋಹಣದ ವರ್ಧಂತೋತ್ಸವವನ್ನು ಸಹ ಆಚರಿಸಲಾಯಿತು.‌ ಶಬರಿಮಲೆಗೆ ಹೋಗಲು ಆಗದವರು ಇಲ್ಲಿಗೆ ಬೆಜ್ಜವಳ್ಳಿಯ ಅಯ್ಯಪ್ಪನ ಸನ್ನಿಧಿಗೆ ಬಂದು ದರ್ಶನ ಪಡೆಯುವುದು ವಿಶೇಷವಾಗಿದೆ.

ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಅವರು ಮಾತನಾಡಿದರು

ಶಬರಿಮಲೆಯಂತೆ ತಿರುವಭರಣ ಉತ್ಸವ ವಿಶೇಷ: ಅಯ್ಯಪ್ಪ ಸ್ವಾಮಿಯು ರಾಜ ವಂಶಸ್ಥ. ಇವರು ಎಲ್ಲಾವನ್ನು ಬಿಟ್ಟು ಕಾಡಿಗೆ ಬಂದು ಭಕ್ತರನ್ನು ಕಾಪಾಡಲು ನೆಲೆಸುತ್ತಾರೆ. ಆದರೆ ರಾಜಕುಮಾರನಾದ ಅಯ್ಯಪ್ಪನಿಗೆ ವರ್ಷಕ್ಕೊಮ್ಮೆ ಅರಮನೆಯಿಂದ ಆಭರಣಗಳನ್ನು ತಂದು ತೊಡಿಸಿ, ಪೂಜೆ ನಡೆಸಲಾಗುತ್ತದೆ. ಶಬರಿ ಮಲೆಯಲ್ಲಿ ಆಭರಣಗಳು ರಾಜಮನೆತನದ ಮನೆಯಿಂದ ಬರುತ್ತದೆ. ಅದರಂತೆ ಬೆಜ್ಜವಳ್ಳಿಯಲ್ಲಿ ಗುರು ಮನೆಯಿಂದ ಸನ್ನಿಧಿಗೆ ಆಭರಣವನ್ನು ಪೆಟ್ಟಿಗೆಯ ಮೆರವಣಿಗೆ ಮೂಲಕ ತರಲಾಗುತ್ತದೆ. ಈ ವೇಳೆ ಆಭರಣವನ್ನು ಅತ್ಯಂತ ವೈಭವವಾಗಿ ಮೆರವಣಿಗೆಯಲ್ಲಿ ತರಲಾಗುತ್ತದೆ. ಮೆರವಣಿಗೆಯಲ್ಲಿ ವೀರಗಾಸೆ, ಗೊಂಬೆ ಕುಣಿತ, ಚಂಡೆ ಮದ್ದಳೆಯ ಸಮೇತ ಚಾಮರಗಳ ಸಮೇತವಾಗಿ ಸನ್ನಿದಾನಕ್ಕೆ ತರಲಾಗುತ್ತದೆ. ಜೊತೆಗೆ ವಿವಿಧ ದೇವತೆಗಳನ್ನು ಆಹ್ವಾನ ನಡೆಸಿ ಮೆರವಣಿಗೆಯ ಮೂಲಕ ಕರೆದುಕೊಂಡು ಬರಲಾಗುತ್ತದೆ.

ಮೆರವಣಿಗೆಯಿಂದ ತಂದ ಆಭರಣಗಳನ್ನು ಹರಿಹರ ಪುತ್ರನಿಗೆ ತೊಡಿಸಿ, ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಭಕ್ತರು ತಂಡೋಪತಂಡವಾಗಿ ಆಗಮಿಸಿ ಅಯ್ಯಪ್ಪನ ದರ್ಶನ ಪಡೆದುಕೊಳ್ಳುತ್ತಾರೆ. ಈ ವೇಳೆ ಇಷ್ಟಾರ್ಥ ನೆರವೇರಿಸಿದರೆ, ತುಲಾಭಾರ ನಡೆಸುತ್ತಾರೆ. ಅದರಂತೆ ಇಂದು ಕೇಂದ್ರದ ರಕ್ಷಣಾ ಹಾಗೂ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು ಆಗಮಿಸಿದ್ದು, ಅವರು ಸಹ ತುಲಾಭಾರ ನಡೆಸಿದರು.

ಭಕ್ತೆ ಆರತಿ ಶೆಟ್ಟಿಯವರು ಮಾತನಾಡಿದರು

ಗರುಡ ದರ್ಶನ ನೀಡುವುದು ವಿಶೇಷ: 'ಕೋವಿಡ್​ನಿಂದಾಗಿ ಭಕ್ತರಿಗೆ ಕಳೆದ ಎರಡು‌ ಮೂರು ವರ್ಷಗಳಿಂದ ಅಯ್ಯಪ್ಪನ ದರ್ಶನವಾಗಿರಲಿಲ್ಲ. ಇಂದು ಮಕರ‌ ಸಂಕ್ರಾಂತಿಗೆ ರಾಜ್ಯವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ. ಇಲ್ಲಿ ತಿರುವಭರಣ ಗುರು ಮನೆಯಿಂದ ಹೊರಡುವಾಗ ದೇವಾಲಯದ ಬಳಿ ಗರುಡ ದರ್ಶನ ನೀಡುವುದು ವಿಶೇಷವಾಗಿದೆ' ಎಂದು ಹರಿಹರತ್ಮಾಜ ಪೀಠದ ಪೀಠಾಧಿಪತಿಗಳಾದ ಸಂತೋಷ ವಿಶ್ವ ಭಾರತಿ ಶ್ರೀಪಾಂದಗಳ ಅವರು ತಿಳಿಸಿದ್ದಾರೆ.

ಇನ್ನು ಇಂದಿನ ಜಾತ್ರಾ ಮಹೋತ್ಸವಕ್ಕೆ ಕೇಂದ್ರದ ರಕ್ಷಣಾ ಹಾಗೂ ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು ಆಗಮಿಸಿ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದು ವಿಶೇಷವಾಗಿತ್ತು. ಅವರು ಈ ವೇಳೆ ಮಾತನಾಡಿ, ನಾನು ಸಂತೋಷ ವಿಶ್ವ ಭಾರತಿ ಶ್ರೀಪಾದಂಗಳ ಅವರ ಆಹ್ವಾನದ ಮೇರೆಗೆ ಆಗಮಿಸಿದ್ದೆ. ಇಲ್ಲಿನ ಆಚರಣೆ, ಪದ್ಧತಿ ನೋಡಿ ಸಂತೋಷವಾಯಿತು. ನಮ್ಮ ದೇಶದ ಪರಂಪರೆ ಶ್ರೀಮಂತಿಕೆಯನ್ನು ನೋಡಿದೆ. ನಾನು ಸಹ ಶಬರಿಮಲೆಗೆ ಹೋಗಿ ಬಂದಿದ್ದೇನೆ ಎಂದು ಬೆಜ್ಜವಳ್ಳಿಗೆ ಭೇಟಿ ನೀಡಿದ ಸಂತಸವನ್ನು ಹಂಚಿಕೊಂಡರು.

ಮಹಿಳೆಯರಿಗೆ ಪ್ರವೇಶ ಬೆಜ್ಜವಳ್ಳಿಯ ವಿಶೇಷ: 'ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಆದರೆ, ಬೆಜ್ಜವಳ್ಳಿಯಲ್ಲಿ ಮಹಿಳೆಯರಿಗೂ ಪ್ರವೇಶ ನೀಡಿರುವುದು ನಮಗೆ ಸಂತೋಷ ತಂದಿದೆ. ಕಳೆದ 38 ವರ್ಷಗಳಿಂದ ನಾನು ಇಲ್ಲಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದೇನೆ. ತಿರುವಭರಣ ಬರುವಾಗ ಗುರುಡ ದರ್ಶನ ನಮಗೆ ಅಚ್ಚರಿ ಹಾಗೂ ರೋಮಾಂಚನವನ್ನುಂಟು ಮಾಡುತ್ತಿದೆ. ಅಯ್ಯಪ್ಪ ನಂಬಿದ ಭಕ್ತರನ್ನು ಎಂದೂ ಕೈ ಬಿಟ್ಟಿಲ್ಲ ಎನ್ನುತ್ತಾರೆ' ಕ್ಷೇತ್ರದ ಭಕ್ತೆ ಆರತಿ ಶೆಟ್ಟಿ ಅವರು.

ಇನ್ನು ಕ್ಷೇತ್ರದಲ್ಲಿ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ನಡೆಸಲಾಗುತ್ತದೆ. ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿರುತ್ತದೆ.

ಓದಿ: ಉಣಕಲ್ ಸಿದ್ದಪ್ಪಜ್ಜನ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.