ETV Bharat / state

ಅಪ್ಪ-ಮಕ್ಕಳು ರೆಸ್ಟ್​ ತೆಗೆದುಕೊಳ್ಳಲಿ... ಹೆಚ್​ಡಿಕೆ, ದೊಡ್ಡ ಗೌಡರಿಗೆ ಟಾಂಗ್​ ಕೊಟ್ಟ ಆಯನೂರು - DK Shivakumar

ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹಾಗೂ ಆರೋಗ್ಯ ಸಮಸ್ಯೆ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೆಸ್ಟ್ ತೆಗೆದುಕೊಳ್ಳಲಿ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್​, ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆಶಿ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್​ ಪ್ರತಿಕ್ರಿಯೆ
author img

By

Published : Apr 1, 2019, 2:33 PM IST

ಶಿವಮೊಗ್ಗ: ಯಡಿಯೂರಪ್ಪನವರು ರಾಜಕೀಯದಲ್ಲಿ ಆರೋಗ್ಯವಾಗಿ ಹಾಗೂ ಸಕ್ರಿಯರಾದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್​ ಪ್ರತಿಕ್ರಿಯಿ ನೀಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರ ರೆಸ್ಟ್ ತೆಗೆದುಕೊಳ್ಳಲಿ ಎಂದಿದ್ದ ಡಿ.ಕೆ. ಶಿವಕುಮಾರ್ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪನವರು ರಾಜಕೀಯದಲ್ಲಿ ಸಕ್ರಿಯರಾದ್ದಾರೆ. ಈ ಹೇಳಿಕೆ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರಿಗೆ ಹಾಗೂ ಆರೋಗ್ಯ ಸಮಸ್ಯೆ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅನ್ವಯಿಸುತ್ತದೆ ಹೊರೆತು ಯಡಿಯೂರಪ್ಪನವರಿಗಲ್ಲ ಎಂದರು.

ಡಿಕೆಶಿ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್​ ಪ್ರತಿಕ್ರಿಯೆ

ಯಡಿಯೂರಪ್ಪನವರು ರಾಜಕೀಯದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಆದರೆ, ಒಂದು ಕಡೆ ದೇವೇಗೌಡರಿಗೆ 86 ವರ್ಷವಾಗಿದ್ದು ಇನ್ನೊಂದು ಕಡೆ ಕುಮಾರಸ್ವಾಮಿ ಅವರಿಗೆ ಏಳೆಂಟು ಆಪರೇಷನ್​ಗಳಾಗಿವೆ ಹಾಗಾಗಿ, ಅವರು ರೆಸ್ಟ್ ತೆಗೆದುಕೊಳ್ಳಲಿ ಎಂಬುವುದನ್ನ ಡಿ.ಕೆ. ಶಿವಕುಮಾರ್​ ನೇರವಾಗಿ ಹೇಳಲಾಗದೇ ಯಡಿಯೂರಪ್ಪನವರ ಹೆಸರಿನ ಮೇಲೆ ಪರೋಕ್ಷವಾಗಿ ಅವರಿಗೆ ಹೇಳಿದ್ದಾರೆ ಎಂದು ಟಾಂಗ್ ನೀಡಿದರು.

ಮುಂದುವರೆದು ಮಾತನಾಡಿದ ಆಯನೂರು, ನೂರು ಡಿಕೆಶಿಗಳು ಬಂದರು ಜಿಲ್ಲೆಯಲ್ಲಿ ರಾಘವೇಂದ್ರ ಅವರನ್ನು ಸೋಲಿಸುವುದು ಅಸಾಧ್ಯ. ಜಿಲ್ಲೆಯಲ್ಲಿ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಮಂಡ್ಯದಲ್ಲಿ ಒಬ್ಬ ಹೆಣ್ಣು ಮಗಳನ್ನ ಸೋಲಿಸಲು ಇಡೀ ಮೈತ್ರಿ ಪಕ್ಷ ತಿಣುಕಾಡುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೋ ಒಂದು ಪಕ್ಷದ ಅಭ್ಯರ್ಥಿಯನ್ನ ಎರವಲು ಪಡೆಯುವ ಮೂಲಕ ಕಾಂಗ್ರೆಸ್​ ಮುಕ್ತ ಜಿಲ್ಲೆಯನ್ನ ಮಾಡಲಾಗಿದೆ ಎಂದರು. ಮಧು ಬಂಗಾರಪ್ಪನವರಿಗೆ ಜಿಲ್ಲೆಯಲ್ಲಿ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಡಿಕೆಶಿ ಅವರ ಬೆನ್ನು ಬಿದ್ದಿದ್ದಾರೆ. ಆದರೆ, ಇದು ಬಳ್ಳಾರಿ ಅಲ್ಲ ಎಂಬುದನ್ನು ಡಿಕೆಶಿ ನೆನಪಿಟ್ಟುಕೊಳ್ಳಬೇಕು ಎಂದರು.

Intro:ಶಿವಮೊಗ್ಗ,
ಯಡಿಯೂರಪ್ಪ ಮತ್ತು ರಾಘವೇಂದ್ರ ರೆಸ್ಟ್ ನೀಡಲಿ ಎನ್ನುವ ಕುರಿತ ಡಿ.ಕೆ ಶಿವಕುಮಾರ್ ಹೇಳಿಕೆ ಗೆ ಪ್ರತಿಕ್ರಿಯೆ ನೀಡಿದ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್
ಈ ಹೇಳಿಕೆಯನ್ನು ಪರೋಕ್ಷವಾಗಿ ಹೆಚ್ ಡಿ ದೇವೆಗೌಡರಿಗೆ ಹಾಗೂ ಆರೋಗ್ಯ ಸಮಸ್ಯೆ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿ ಯವರಿಗೆ ಹೇಳಿದ ಹೇಳಿಕೆ ಹೊರತು ಈ ಯಡಿಯೂರಪ್ಪ ಅವರಿಗೆ ಅನ್ವಹಿಸುವುದಿಲ್ಲ ಎಂದರು.

Body:ಯಡಿಯೂರಪ್ಪ ನವರು ರಾಜಕೀಯ ದಲ್ಲಿ ಆರೋಗ್ಯ ವಾಗಿ ಸಕ್ರಿಯವಾಗಿ ಇದ್ದಾರೆ ಆದರೆ ದೇವೆಗೌಡರಿಗೆ ೮೬ ವರ್ಷ ಆಗಿದೆ ಹಾಗೂ ಕುಮಾರಸ್ವಾಮಿ ಅವರಿಗೆ ಏಳೆಂಟು ಆಪರೇಷನ್ ಗಳಾಗಿವೆ ಹಾಗಾಗಿ ಅವರು ರೆಸ್ಟ್ ತೆಗೆದುಕೊಳ್ಳಲಿ ಎಂಬುವುದನ್ನ ನೇರವಾಗಿ ಹೇಳಳಾಗದೇ ಯಡಿಯೂರಪ್ಪ ನವರ ಹೆಸರಿನ ಮೇಲೆ ಪರೋಕ್ಷವಾಗಿ ಅವರಿಗೆ ಹೇಳಿದ್ದಾರೆ ಎಂದು ಟಾಂಗ್ ನೀಡಿದರು. ನಂತರದಲ್ಲಿ ಮಾತನಾಡಿದ ಅವರು ನೂರು ಡಿಕೆಸಿ ಬಂದರು ರಾಘವೇಂದ್ರ ಅವರೆ ಗೆಲುವು ಸಾಧಿಸುವುದು ಖಚಿತ ಎಂದರು.
ನಂತರದಲ್ಲಿ ಮಾತನಾಡಿದ ಅವರು ಮಂಡ್ಯ ದಲ್ಲಿ ಒಬ್ಬ ಹೆಣ್ಣು ಮಗಳನ್ನ ಸೋಲಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್ ಎರಡು ಪಕ್ಷಗಳು ತೀಣಕಾಡುತ್ತಿವೆ ಎಂದರು.

Conclusion:ಶಿವಮೊಗ್ಗ ಜಿಲ್ಲೆಯ ಲ್ಲಿ ಯಾವುದೋ ಒಂದು ಪಕ್ಷದ ಅಭ್ಯರ್ಥಿ ಯನ್ನ ಎರವಲು ಪಡೆಯುವ ಮೂಲಕ ಕಾಂಗ್ರೆಸ್ ಮುಕ್ತ ಜಿಲ್ಲೆಯ ನ್ನ ಮಾಡಲಾಗಿದೆ ಎಂದರು.
ಮಧುಬಂಗಾರಪ್ಪ ನವರಿಗೆ ಜಿಲ್ಲೆಯ ಯಾವುದೇ ಕಾಂಗ್ರೆಸ್ ಮುಖಂಡರ ಮೇಲೆ ನಂಬಿಕೆ ಇಲ್ಲ ದೇ ಅನಿವಾರ್ಯವಾಗಿ ಡಿಕೆಸಿ ಅವರ ಬೆನ್ನು ಬಿದ್ದಿದ್ದಾರೆ ಆದರೆ ಇದು ಬಳ್ಳಾರಿ ಅಲ್ಲ ಎಂಬುದನ್ನು ನೆನಪಿಟ್ಟುಕೋಳ್ಳಬೇಕು ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.