ಶಿವಮೊಗ್ಗ: ಯುವ ಮತದಾರರ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.ಈ ವೇಳೆಯಲ್ಲಿ ಮಾತನಾಡಿದ ಅವರು ಅರ್ಹರಾದ ಎಲ್ಲಾ ನೋಂದಾಯಿತ ಮತದಾರರು ತಾವು ಮತ ಚಲಾಯಿಸುವುದು, ಅಲ್ಲದೇ ಇತರರಿಗೆ ಪ್ರೇರೇಪಿಸುವಂತೆ ಅವರು ವಿನಂತಿಸಿದರು. ಚುನಾವಣೆಯನ್ನ ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯುತ್ತೇವೆ. ಏಕೆ ಏಂದರೆ ಚುನಾವಣೆ ನಡೆಯುತ್ತಿರುವುದೆ ಮತದಾನದ ಮೇಲೆ ಎಂದರು.
ಹಾಗಾಗಿ ಎಲ್ಲರೂ ತಪ್ಪದೇ ಮತ ನೀಡುವ ಮೂಲಕ ಪ್ರಜಾಪ್ರಭುತ್ವವನ್ನ ಬಲಪಡಿಸುವುದರೊಂದಿಗೆ ಮತದಾನದ ಶೇಕಡಾ ವಾರನ್ನು ಜಿಲ್ಲೆಗಳ ಪಟ್ಟಿಯಲ್ಲಿ, ಜಿಲ್ಲೆಯನ್ನ ಮೊದಲ ಸ್ಥಾನಕ್ಕೆ ಏರಿಸುವ ಕಾರ್ಯ ಮಾಡಬೇಕಿದೆ ಎಂದರು.ಈ ಸಂದರ್ಭದಲ್ಲಿ ಎಲ್ಲಾ ಯುವ ಮತದಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯುನ್ಮಾನ ಮತ ಯಂತ್ರಗಳ ಬಳಕೆ, ಮತ ಖಾತ್ರಿ ಕುರಿತಂತೆ ವಿ ವಿ ಪ್ಯಾಟ್ ಬಳಕೆ ಮಾಡುವ ಕುರಿತು ಚುನಾವಣಾ ಸಿಬ್ಬಂದಿ, ಯುವ ಮತದಾರರಿಗೆ ಮಾಹಿತಿ ನೀಡಿದರು.