ETV Bharat / state

ಮಹಿಳೆಯ ಟಿಕ್​ಟಾಕ್​ ವಿಡಿಯೋಗೆ ಅಶ್ಲೀಲ ಆಡಿಯೋ ಸೇರಿಸಿ ಪೋಸ್ಟ್​ ಮಾಡುತ್ತಿದ್ದ ವ್ಯಕ್ತಿ ಸೆರೆ - ನಕಲಿ ಟಿಕ್​ಟಾಕ್​ ಕ್ರೈಂ ನ್ಯೂಸ್​

ನಕಲಿ ಟಿಕ್​ ಟಾಕ್ ಖಾತೆಯನ್ನು ತೆರೆದು ಮಹಿಳೆಯ ವೀಡಿಯೋವನ್ನು ಅಶ್ಲೀಲವಾಗಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಡುತ್ತಿದ್ದ ಆರೋಪಿ ಯನ್ನು ಬಂಧಿಸಿದ್ದಾರೆ

ಆರೋಪಿ ಸಂಜಯ್
author img

By

Published : Oct 12, 2019, 3:30 PM IST

ಶಿವಮೊಗ್ಗ: ನಕಲಿ ಟಿಕ್​ ಟಾಕ್ ಖಾತೆಯನ್ನು ತೆರೆದು ಮಹಿಳೆಯ ವೀಡಿಯೋವನ್ನು ಅಶ್ಲೀಲವಾಗಿ ವಾಯ್ಸ್​ ಎಡಿಟ್ ಮಾಡಿ ಟಿಕ್​ಟಾಕ್​​ನಲ್ಲಿ ಅಪ್​ಲೋಡ್ ಮಾಡಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸಿ.ಇ.ಎನ್ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಭದ್ರಾವತಿ ತಾಲೂಕು ಮಲ್ಲಿಗೇನ ಹಳ್ಳಿಯ ವಾಸಿಯಾದ ಸಂಜಯ್ (32) ಈತ ಕುವೆಂಪು ವಿಶ್ವ ವಿದ್ಯಾನಿಲಯದ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳಿಗೆ ಹಾಡು ಕಲಿಸುವಾಗ ವಿಡಿಯೋ ಮಾಡಿಕೊಂಡು ಅದಕ್ಕೆ ಟಿಕ್​ಟಾಕ್​ ಮೂಲಕ ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಡುತ್ತಿದ್ದ. ಈತನ ಕುರಿತು ಮಹಿಳೆಯು ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ಕೈ ಗೊಂಡ ಸಿಇಎನ್ ಇನ್ಸ್ಪೆಕ್ಟರ್ ಗುರುರಾಜ್ ಕರ್ಕಿರವರು ಆರೋಪಿ ಸಂಜಯ್​ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಈತ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದನು. ಇನ್ನು ಎ.ಎಸ್.ಐ. ಮಂಜುನಾಥ್, ರಾಹತ್ ಅಲಿ, ಕೃಷ್ಣಮೂರ್ತಿ ಹಾಗೂ ಸಿ ಹೆಚ್.ಸಿ ಗಳಾದ ನರಸಿಂಹಮೂರ್ತಿ, ನಾಗರಾಜ್, ಜಗದೀಶ್, ವಿಠೋಬರಾವ್ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

Intro:ನಕಲಿ TIK TOK ಖಾತೆಯ ಮೂಲಕ ಅಶ್ಲೀಲ ವಿಡಿಯೋ ಮಾಡುತ್ತಿದ್ದವನ ಬಂಧನ.

ಶಿವಮೊಗ್ಗ: ನಕಲಿ ಟಿಕ್ ಟಾಕ್ ಖಾತೆಯನ್ನು  ತೆರೆದು ಮಹಿಳೆಯ ವೀಡಿಯೋವನ್ನು ಅಶ್ಲೀಲವಾಗಿ ವಾಯ್ಸ್ ಎಡಿಟ್ ಮಾಡಿ TIK TOK  ನಲ್ಲಿ ಅಪ್ ಲೋಡ್ ಮಾಡಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವಿಕೃತ ವ್ಯಕ್ತಿಯನ್ನು ಸಿ.ಇ.ಎನ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮಲ್ಲಿಗೇನಹಳ್ಳಿಯ ವಾಸಿಯಾದ ಸಂಜಯ್ (32) ಈತ ಕುವೆಂಪು ವಿಶ್ವ ವಿದ್ಯಾನಿಲಯದ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗಳಿಗೆ ಹಾಡು ಕಲಿಸುವಾಗ ವಿಡಿಯೋ ಮಾಡಿ ಕೊಂಡು ಅದಕ್ಕೆ TIK TOK ಮೂಲಕ ಅಶ್ಲೀಲ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಡುತ್ತಿದ್ದ.Body:ಈತನ ಕುರಿತು ಮಹಿಳೆಯು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ತನಿಖೆ ಕೈ ಗೊಂಡ ಸಿಇಎನ್ ಇನ್ಸ್ ಪೆಕ್ಟರ್ ಗುರುರಾಜ್ ಕರ್ಕಿರವರು ಆರೋಪಿ ಸಂಜಯ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.Conclusion: ಈತ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ. ಎ.ಎಸ್.ಐ. ಮಂಜುನಾಥ್, ರಾಹತ್ ಅಲಿ, ಕೃಷ್ಣಮೂರ್ತಿ ಹಾಗೂ ಸಿಹೆಚ್.ಸಿ ಗಳಾದ ನರಸಿಂಹಮೂರ್ತಿ, ನಾಗರಾಜ್,  ಜಗದೀಶ್, ವಿಠೋಬರಾವ್ ರವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.